ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಹುದ್ದೆ, ವೇತನ ವಿವರ
ಕೊಪ್ಪಳ, ಜನವರಿ 04: ಕೊಪ್ಪಳ ಜಿಲ್ಲೆಯಲ್ಲಿ 'ಯುವ ಸ್ಪಂದನ' ಕಾರ್ಯಕ್ರಮದಡಿ ಹೊಸದಾಗಿ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರ ತರಬೇತಿಗೆ ಆಯ್ಕೆ ಮಾಡಲು ನೇರ ಸಂದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನ, ನೇರ ಸಂದರ್ಶನ ಜನವರಿ 11ರಂದು ನಡೆಯಲಿದೆ.
ಜನ ಆರೋಗ್ಯ ಸಂಸ್ಥೆ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನದ ಯೋಜನೆ 'ಯುವ ಸ್ಪಂದನ' ಅಡಿಯಲ್ಲಿ ಯುವ ಪರಿವರ್ತಕ ಹಾಗೂ ಯುವ ಸಮಾಲೋಚಕ ತರಬೇತಿಗೆ ಅರ್ಜಿ ಕರೆಯಲಾಗಿದೆ.

ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ ಪಡೆದು ಆಯ್ಕೆಯಾದ ನಂತರ ಯುವ ಪರಿವರ್ತಕ ಹಾಗೂ ಯುವ ಸಮಾಲೋಚಕರೆಂದು ಪ್ರಮಾಣೀಕರಿಸಲಾಗುತ್ತದೆ.
ಹುದ್ದೆಗಳ ವಿವರಗಳು; ಈ ಯುವ ಪರಿವರ್ತಕರು ಹಾಗೂ ಯುವ ಸಮಾಲೋಚಕರು ಯುವಸ್ಪಂದನ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಯುವನೀತಿ ಅನ್ವಯ, ಯುವಜನರನ್ನು ತಲುಪಿ, ಯುವ ಜನರನ್ನು ಸಬಲೀಕರಣಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕಗೊಳಿಸುವುದು ಈ ಯೋಜನೆಯ ಉದ್ದೇಶ.
ಯುವ ಪರಿವರ್ತಕರು ಹುದ್ದೆಗಳನ್ನು ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕಾರಟಗಿ, ಕುಷ್ಟಗಿ, ಕುಕನೂರ ತಾಲ್ಲೂಕಿನಲ್ಲಿ ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಮಾಡುವವರು ಪದವಿ ಹಾಗೂ ಮೇಲ್ಪಟ್ಟು (Psychology/ Social work) ಪದವಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಸಮುದಾಯದಲ್ಲಿ ಕೆಲಸ ಮಾಡಿರುವವರ ಅನುಭವ ಅಪೇಕ್ಷಿಸಲಾಗಿದೆ.
ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು. ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು ಅವಶ್ಯಕ. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು.
ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 21 ವರ್ಷ, ಗರಿಷ್ಠ 35 ವರ್ಷಗಳು. ಗೌರವಧನ ಮತ್ತು ಅವಧಿ ಪ್ರಮಾಣೀಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ಹಾಗೂ ಪ್ರವಾಸ ಭತ್ಯೆ 6 ತಿಂಗಳ ಕಾಲ ನೀಡಲಾಗುವುದು.
ಯುವಸಮಾಲೋಚಕರನ್ನು ಕೊಪ್ಪಳ ಜಿಲ್ಲೆಗೆ ಖಾಲಿಯಿರುವ 1 ಹುದ್ದೆಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಪದವಿ ಹಾಗೂ MSW (Psychology/ Social work) ಪದವಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಸಮುದಾಯದಲ್ಲಿ ಕೆಲಸ ಮಾಡಿರುವವರ ಅನುಭವ ಅಪೇಕ್ಷಿಸಲಾಗಿದೆ. ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯವನ್ನು ಹೊಂದಿರಬೇಕು. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು.
ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು ಅವಶ್ಯಕ. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು. ಕನಿಷ್ಠ ವಯೋಮಿತಿ 21, ಗರಿಷ್ಠ 35 ವರ್ಷಗಳು. ಗೌರವಧನ ಮತ್ತು ಅವಧಿ ಪ್ರಮಾಣೀಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ಹಾಗೂ ಪ್ರವಾಸ ಭತ್ಯೆ 6 ತಿಂಗಳ ಕಾಲ ನೀಡಲಾಗುವುದು.
ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿಳಾಸ, ವಯಸ್ಸು, ವಾಸಿಸುತ್ತಿರುವ ವಿಳಾಸ, ವೈಯಕ್ತಿಕ ಮಾಹಿತಿಯೊಂದಿಗೆ ದಿನಾಂಕ 9/1/2024ವರೆಗೆ ಕಛೇರಿಯಲ್ಲಿ ಸಲ್ಲಿಸಲು ಸೂಚಿಸಿದೆ. ಸದರಿ ಹುದ್ದೆಗಳಿಗೆ ದಿನಾಂಕ11/1/2024ರಂದು ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನೇರ ಸಂದರ್ಶನ ಬೆಳಗ್ಗೆ 11.30 ಗಂಟೆಗೆ ನಡೆಯಲಿದ್ದು, ಹಾಜರಿರಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ ಇಲ್ಲಿಗೆ ಕಛೇರಿ ಅವಧಿಯಲ್ಲಿ ಭೇಟಿ ನೀಡಿ, ಮಾಹಿತಿ ಪಡೆಯಬಹುದು.












Click it and Unblock the Notifications