ಕಂಟೋನ್ಮೆಂಟ್ ಬೋರ್ಡ್ ಬೆಳಗಾಂನಲ್ಲಿ ವಿವಿಧ ಹುದ್ದೆ ಖಾಲಿ
ಬೆಳಗಾವಿ, ಫೆಬ್ರವರಿ 19; ಕಂಟೋನ್ಮೆಂಟ್ ಬೋರ್ಡ್ ಬೆಳಗಾಂ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 19/3/2020 ಕೊನೆಯ ದಿನವಾಗಿದೆ.
ಕಂಟೋನ್ಮೆಂಟ್ ಬೋರ್ಡ್ ಬೆಳಗಾಂ ಚೌಕಿದಾರ್ 1, ಸಫಾಯಿವಾಲಾ 8, ವೈಯರ್ ಮ್ಯಾನ್ 1, ಪ್ರೈಮರಿ ಅಸಿಸ್ಟೆಂಟ್ ಟೀಚರ್ 1, ದ್ವಿತೀಯ ದರ್ಜೆ ಸಹಾಯಕ 1, ಸ್ಟನೋಗ್ರಾಫರ್ 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ.
ಚಿಕ್ಕಬಳ್ಳಾಪುರ; ಕೆಲಸ ಖಾಲಿ ಇದೆ, ಫೆ. 28ರೊಳಗೆ ಅರ್ಜಿ ಹಾಕಿ
ಚೌಕಿದಾರ್ (28 ವರ್ಷ) ಮತ್ತು ಸಫಾಯಿವಾಲಾ (25 ವರ್ಷ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 7ನೇ ತರಗತಿ ಪಾಸ್ ಆಗಿರಬೇಕು. ವೈಯರ್ ಮ್ಯಾನ್ (25 ವರ್ಷ) ಹುದ್ದೆಗೆ ಎಸ್ಎಸ್‌ಎಸ್‌ಎಲ್‌ಸಿ ಜೊತೆಗೆ ಇಲೆಕ್ಟ್ರಿಕಲ್ ಐಟಿಐ ಪಾಸ್ ಆಗಿರಬೇಕು ಮತ್ತು ಒಂದು ವರ್ಷದ ಅಪ್ರೆಂಟಿಶಿಪ್ ತರಬೇತಿ ಪಡೆದಿರಬೇಕು.
ECIL ನೇಮಕಾತಿ 2021: 650 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರೈಮರಿ ಟೀಚರ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವವವರಿಗೆ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಪಿಯುಸಿ ಪಾಸ್ ಜೊತೆಗೆ ಡಿ. ಇಡಿ ಅಥವ ಪದವಿ ಹಾಗೂ ಬಿ. ಇಡಿ ಪಾಸ್ ಮಾಡಿರಬೇಕು. ಡಿಇಟಿ ಪರೀಕ್ಷೆಯಲ್ಲಿ ಅರ್ಹತೆಗಳಿಸಿರಬೇಕು.
ಶಿವಮೊಗ್ಗ; ಫೆಬ್ರವರಿ 20ರಂದು ಉದ್ಯೋಗ ಮೇಳ
ದ್ವಿತೀಯ ದರ್ಜೆ ಸಹಾಯಕ (25 ವರ್ಷ) ಹುದ್ದೆಗೆ ಪಿಯುಸಿ ಜೊತೆಗೆ ಕಂಪ್ಯೂಟರ್ ನಾಲೆಡ್ಜ್ ಹೊಂದಿರಬೇಕು. ಸ್ಟೆನೋಗ್ರಾಫರ್ (25 ವರ್ಷ) ಹುದ್ದೆಗೆ ಪಿಯುಸಿ ಪಾಸ್ ಮಾಡಿರಬೇಕು ಹಾಗೂ ಸೀನಿಯರ್ ಶಾರ್ಟ್ ಹ್ಯಾಂಡ್/ ಸೀನಿಯರ್ ಟೈಪಿಂಗ್ ಡಿಪ್ಲೊಮಾ ಪದವಿ ಪಡೆದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 17,000 ದಿಂದ 52,650 ರೂ. ತನಕ ವೇತನವನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ; ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ರಿಜಿಸ್ಟರ್ಡ್/ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ವಿಳಾಸ
Chief executive officer
Cantonment Board
BC No. 41, Khanapur Road
Camp Belagavi, Karnataka, India 590001
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ https://belgaum.cantt.gov.in/