• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿ, ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ಬೆಂಗಳೂರು, ಜೂನ್ 17; 2021-22ನೇ ಸಾಲಿನ ಕರ್ನಾಟಕ ಸಮಗ್ರ ಶಿಕ್ಷಣದ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ ಅವಶ್ಯಕತೆಯಿರುವ ಪ್ರಾಥಮಿಕ ಮತ್ತು ಪ್ರೌಢ ಬಿಐಇಆರ್‌ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಬಿಐಇಆರ್‌ಟಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಉಳಿದ ಹುದ್ದೆಗಳಿಗೆ ಈ ಹಿಂದೆ ಈ ಜಿಲ್ಲೆಯಲ್ಲಿ ನೇರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳಿಗೆ ಹಾಗೂ ಈ ಜಿಲ್ಲೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಕಲಬುರಗಿ; ಕೆಲಸ ಖಾಲಿ ಇದೆ, ಜೂನ್ 19ರೊಳಗೆ ಅರ್ಜಿ ಹಾಕಿ ಕಲಬುರಗಿ; ಕೆಲಸ ಖಾಲಿ ಇದೆ, ಜೂನ್ 19ರೊಳಗೆ ಅರ್ಜಿ ಹಾಕಿ

ನೇರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಜೂನ್ 21ರೊಳಗಾಗಿ ಉಪನಿರ್ದೇಶಕರು ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ- ಕರ್ನಾಟಕ ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಉಬರ್ ನೇಮಕಾತಿ: ಬೆಂಗಳೂರು, ಹೈದರಾಬಾದ್‌ನಲ್ಲಿ ವಿವಿಧ ಹುದ್ದೆ ಉಬರ್ ನೇಮಕಾತಿ: ಬೆಂಗಳೂರು, ಹೈದರಾಬಾದ್‌ನಲ್ಲಿ ವಿವಿಧ ಹುದ್ದೆ

ಕಲಬುರಗಿ; ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಖಾಲಿಯಿರುವ ಒಂದು ಗ್ರೂಪ್ 'ಡಿ' ದಲಾಯತ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಅರ್ಹ ಮಾಜಿ ಸೈನಿಕರಿಂದ ಅರ್ಜಿ ಕರೆಯಲಾಗಿದೆ.

ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ವಿವರಗಳು ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ವಿವರಗಳು

ಅರ್ಜಿ ಸಲ್ಲಿಸುವವರು ಮಾಜಿ ಸೈನಿಕರಾಗಿರಬೇಕು. 10ನೇ ತರಗತಿ ಪಾಸಾಗಿರಬೇಕು. 2021ರ ಜೂನ್ 30ಕ್ಕೆ ವಯೋಮಿತಿ 18 ರಿಂದ 52 ವರ್ಷದೊಳಗಿರಬೇಕು.

ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಿನಿ ವಿದಾನಸೌಧ, ಕಲಬುರಗಿ 585102 ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಜುಲೈ 3 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-225003ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

English summary
Apply for various post in Ballari and Kalaburagi districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X