ವಿವಿಧ ಹುದ್ದೆಗೆ ಅರ್ಜಿ ಕರೆದ ಮಂಡ್ಯ ಜಿಲ್ಲಾ ಪಂಚಾಯಿತಿ

ಮಂಡ್ಯ, ಮಾರ್ಚ್ 23: ಮಂಡ್ಯ ಜಿಲ್ಲಾ ಪಂಚಾಯಿತಿ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು 25/3/2021ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ ತಾಂತ್ರಿಕ ಸಹಾಯಕ (ಕೃಷಿ ಮತ್ತು ಅರಣ್ಯ) ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.

ತಾಂತ್ರಿಕ ಸಹಾಯಕರು (ಅರಣ್ಯ) 2 ಹುದ್ದೆ. ಅಭ್ಯರ್ಥಿಗಳು ಬಿಎಸ್‌ಸಿ/ ಎಂಎಸ್ಸಿ ಫಾರೆಸ್ಟರಿ ವಿಷಯದಲ್ಲಿ ಪದವಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳ ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

 Apply For Technical Assistant Post In Mandya

ತಾಂತ್ರಿಕ ಸಹಾಯಕರು (ಕೃಷಿ) 1 ಹುದ್ದೆ. ಅಭ್ಯರ್ಥಿಗಳು ಕೃಷಿ ವಿಷಯದಲ್ಲಿ ಬಿಎಸ್‌ಸಿ/ ಎಂಎಸ್‌ಸಿ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ವಯೋಮಿತಿ 21-40 ವರ್ಷಗಳು. ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ಅಭ್ಯರ್ಥಿಗಳು ಸ್ವ-ವಿವರದೊಂದಿಗೆ ಒಂದು ಭಾವಚಿತ್ರ, ಆಧಾರ್/ ಚುನಾವಣಾ ಗುರುತಿನ ಚೀಟಿ, ಎಸ್‌. ಎಸ್. ಎಲ್. ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ, ಸ್ನಾತಕೋತ್ತರ ಅಂಕಪಟ್ಟಿ (ಇದ್ದಲ್ಲಿ) ಕೆಲಸದ ಅನುಭವದ ಪ್ರಮಾಣ ಪತ್ರ ಒಂದು ಸೆಟ್ ನಕಲು ಪ್ರತಿಯನ್ನು ದೃಢೀಕರಿಸಿ ಅರ್ಜಿ ಸಲ್ಲಿಸುವುದು.

ನೇಮಕಾತಿಯ ಅವಧಿ 11 ತಿಂಗಳು ಆಗಿದ್ದು, ಕಾರ್ಯಕ್ಷಮತೆ ಪರಿಶೀಲಿಸಿ 2ನೇ ಅವಧಿಗೆ ಮುಂದುವರೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವಿಳಾಸ https://mandya.nic.in/en/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+