KSHDCL ನೇಮಕಾತಿ; ಜನವರಿ 20ರ ತನಕ ಅರ್ಜಿ ಹಾಕಿ

ಬೆಂಗಳೂರು, ಡಿಸೆಂಬರ್ 22: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ವಿಶೇಷಾಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತರು 20/1/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಶ್ರೀಗಂಧದ ಕಲಾ ಸಂಕೀರ್ಣದಲ್ಲಿರುವ 'ಶಿಲ್ಪ ಗುರುಕುಲ' ವಸತಿ ಶಾಲೆಯಲ್ಲಿ ಮರದ ಕೆತ್ತನೆ, ಕಲ್ಲಿನ ಕೆತ್ತನೆ ಕಲೆಯಲ್ಲಿ ಎರಡು ವರ್ಷಗಳ ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ನಡೆಸಲಾಗುತ್ತದೆ.

ಸದರಿ ಕೇಂದ್ರದಲ್ಲಿ ಬೋಧನೆ ಮತ್ತು ತರಬೇತಿ ನೀಡಲು ಹಾಗೂ ಶಿಲ್ಪ ಗುರುಕುಲದ ಆಡಳಿತ ನಿರ್ವಹಣೆ ಮಾಡಲು ಒಬ್ಬ ವಿಶೇಷ ಅಧಿಕಾರಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

Apply For Special Officer Post In KSHDCL

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಶಿಲ್ಪಕಲೆಯಲ್ಲಿ ಫೈನ್ ಆರ್ಟ್ಸ್ ಪದವಿ ಹೊಂದಿರಬೇಕು. ಶಿಲ್ಪಕಲೆ ಹಾಗೂ ಕೆತ್ತನೆಯಲ್ಲಿ ಕನಿಷ್ಠ 10 ವರ್ಷಗಳ ಅನುಭವವಿರಬೇಕು. ಆಡಳಿತ, ತಾಂತ್ರಿಕತೆ, ಮೇಲ್ವಿಚಾರಣೆ ಹಾಗೂ ವಿನ್ಯಾಸ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 31/12/2020ಕ್ಕೆ ಅನ್ವಯ ವಾಗುವಂತೆ 35 ರಿಂದ 60 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವಾಗ ಇನ್ನಿತರೆ ಯಾವುದೇ ಸಾಧನೆಗಳಿದ್ದಲ್ಲಿ ಅದನ್ನು ಸಹ ಸೂಕ್ತ ದಾಖಲಾತಿಗಳ ಜೊತೆ ಸಲ್ಲಿಕೆ ಮಾಡಬೇಕು.

ಅಭ್ಯರ್ಥಿಗಳು ಖುದ್ದಾಗಿ ಅಥವ ರಿಜಿಸ್ಟರ್ ಪೋಸ್ಟ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಕರಕುಶಲ ಅಭಿವೃದ್ಧಿ ನಿಗಮ ಯಾವುದೇ ಕಾರಣಗಳನ್ನು ನೀಡದೆ ಅರ್ಜಿಯನ್ನು ಅಂಗೀಕರಿಸುವ, ತಿರಸ್ಕರಿಸುವ ಹಕ್ಕನ್ನು ಹೊಂದಿದೆ.

ಅರ್ಜಿಗಳನ್ನು ಸಲ್ಲಿಸಲು ವಿಳಾಸ : Principal Manager (Development), Karnataka State Handicrafts Development Corporation Limited, No. 39, United Mansion, Mahatma Gandhi Road, Bengaluru - 560001.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+