
ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ
ಬೆಳಗಾವಿ, ಆಗಸ್ಟ್ 17; ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಎಷ್ಟು ಹುದ್ದೆ ಎಂದು ನಿರ್ದಿಷ್ಟವಾಗಿ ತಿಳಿಸಲಾಗಿಲ್ಲ. ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ವಿಭಾಗದಲ್ಲಿ ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಪ್ರಯತ್ನಿಸಬಹುದು.
ಬೆಳಗಾವಿಯಲ್ಲಿ ಉದ್ಯೋಗ ಸ್ಥಳ ಇರಲಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ ಸುತ್ತೋಲೆ ಪ್ರಕಾರ, ಅಭ್ಯರ್ಥಿಗಳು ಆಯಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ವಯಸ್ಸು 40 ವರ್ಷ ದಾಟಿರಬಾರದು ಎಂದಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.
ಬೆಳಗಾವಿ ಜಿ.ಪಂ. ನೇಮಕಾತಿ 2022
ಹುದ್ದೆ ಹೆಸರು: ಕೃಷಿ, ರೇಷ್ಮೆ, ತೋಟಗಾರಿಕೆ ಮತ್ತು ಅರಣ್ಯ ವಿಭಾಗದಲ್ಲಿ ತಾಂತ್ರಿಕ ಸಹಾಯಕ ಸ್ಥಾನಗಳು
ಎಷ್ಟು ಹುದ್ದೆ: ಗೊತ್ತಿಲ್ಲ
ಉದ್ಯೋಗ ಸ್ಥಳ: ಬೆಳಗಾವಿ
ಸಂಬಳ: ಬೆಳಗಾವಿ ಜಿ.ಪಂ. ನಿಯಮಗಳಂತೆ
ವಯೋಮಿತಿ: 21 ವರ್ಷದಿಂದ 40 ವರ್ಷ ವಯಸ್ಸು
ಶುಲ್ಕ: ಇಲ್ಲ
ಅರ್ಜಿ ಸಲ್ಲಿಕೆಗೆ ಗಡುವು: 2022, ಆಗಸ್ಟ್ 29
ನೇಮಕಾತಿ ಹೇಗೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
LIC ನೇಮಕಾತಿ 2022: 80 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ
ಕೃಷಿ ತಾಂತ್ರಿಕ ಸಹಾಯಕ ಹುದ್ದೆ: ಕೃಷಿ ವಿಷಯದಲ್ಲಿ ಬಿಎಸ್‌ಸಿ, ಎಂಎಸ್‌ಸಿ
ರೇಷ್ಮೆ ತಾಂತ್ರಿಕ ಸಹಾಯಕ ಹುದ್ದೆ: ರೇಷ್ಮೆ ವಿಷಯದಲ್ಲಿ ಬಿಎಸ್‌ಸಿ, ಎಂಎಸ್‌ಸಿ
ತೋಟಗಾರಿಕೆ ತಾಂತ್ರಿಕ ಸಹಾಯಕ ಹುದ್ದೆ: ತೋಟಗಾರಿಕೆ ವಿಷಯದಲ್ಲಿ ಬಿಎಸ್‌ಸಿ, ಎಂಎಸ್‌ಸಿ
ಅರಣ್ಯ ತಾಂತ್ರಿಕ ಸಹಾಯಕ ಹುದ್ದೆ: ಅರಣ್ಯ ವಿಷಯದಲ್ಲಿ ಬಿಎಸ್‌ಸಿ, ಎಂಎಸ್‌ಸಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ; ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆಗಸ್ಟ್ 8ರಿಂದಲೇ ಅರ್ಜಿ ಸ್ವೀಕರಿಸಲಾಗುತ್ತಿದೆ. ಜನವರಿ 29ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ.
SSC ನೇಮಕಾತಿ 2020: 4300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ ಜಿಪಂ ಜಾಲತಾಣದಲ್ಲಿ (zpbelagavi.kar.nic.in) ಈ ಸಂಬಂಧ ಹಲವು ವಿವರಗಳಿವೆ. ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಅರ್ಹತೆ ಏನೆಂದು ವಿವರ ಇದೆ. ಐಡಿ ಪ್ರೂಫ್, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆ, ಬಯೋಡಾಟಾ, ಅನುಭವ ಪ್ರಮಾಣಪತ್ರ ಇತ್ಯಾದಿ ದಾಖಲೆಗಳು ಸಿದ್ಧವಾಗಿಟ್ಟುಕೊಳ್ಳಿ.
ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಗೂಗಲ್ ಫಾರ್ಮ್ ಒದಗಿಸಲಾಗಿದೆ. ಅದರ ಲಿಂಕ್ ಇಲ್ಲಿದೆ. (https://docs.google.com/forms/d/e/1FAIpQLSd4zLwG9HHJx04v_9Eik1h-uylf-wywoO0VHEDU-JWMWaF08w/viewform)
ಅರ್ಜಿ ಸಲ್ಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಆ ಬಳಿಕ ಸಂದರ್ಶನ ಇರುತ್ತದೆ ಎಂಬ ವಿಚಾರ ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)