ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

ಉತ್ತರ ಕನ್ನಡ, ಏಪ್ರಿಲ್ 8; ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 16, 2021ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆರ್ಥಿಕ ಸಲಹೆಗಾರ ಹುದ್ದೆ ತಾತ್ಕಾಲಿಕವಾಗಿದ್ದು, ಮೂರು ವರ್ಷಗಳ ಅವಧಿಯಾಗಿರುತ್ತದೆ. ಅಭ್ಯರ್ಥಿಗಳು ಸವಣೂರು (ಹಾವೇರಿ), ಯಲ್ಲಾಪುರ (ಉತ್ತರ ಕನ್ನಡ) ದಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕಿಂಗ್ ಜ್ಞಾನದೊಂದಿಗೆ ಹಣಕಾಸಿನ ಸೇವೆಗಳ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆಯುಳ್ಳ 62 ವರ್ಷದೊಳಗಿನವರು ಅರ್ಜಿ ಹಾಕಬಹುದು.

Apply For Financial Advisor Post KVGB

ಅರ್ಜಿ ಸಲ್ಲಿಸುವವರು ಪದವೀಧರರು ಅಥವ ನಿವೃತ್ತ/ ಸ್ವಯಂ ನಿವೃತ್ತಿ ಪಡೆದ ಬ್ಯಾಂಕ್ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರು. ಹೆಚ್ಚಿನ ಮಾಹಿತಿಗಾಗಿ 9480699051.

ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ General Manager, Karnataka Vikas Grameena Bank, Head Office: P.B No. 111, Belgaum Road, Dharwad - 580008 ವಿಳಾಸಕ್ಕೆ ರಿಜಿಸ್ಟರ್, ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+