ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಖಾಲಿ ಇದೆ
ಬಳ್ಳಾರಿ, ಡಿಸೆಂಬರ್ 14: ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಮಾಲೋಚಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 31/12/2020ರ ಸಂಜೆ 4.30 ಕೊನೆಯ ದಿನವಾಗಿದೆ.
ಈ empanelment ಅವಧಿಯು 5 ವರ್ಷಗಳ ಚಾಲ್ತಿಯಲ್ಲಿರುತ್ತದೆ. ಸಮಾಲೋಚಕರನ್ನು ಯೋಜನೆಗಳ ಅಂದಾಜು ಮೊತ್ತವನ್ನು ಆಧರಿಸಿ ಕೆಟಗರಿ 1, 2, 3 ಮತ್ತು 4 ಎಂದು ವರ್ಗೀಕರಣ ಮಾಡಲಾಗುತ್ತದೆ.
4ನೇ ಕೆಟಗರಿ 2 ಕೋಟಿ, 3ನೇ ಕೆಟಗರಿ 10 ಕೋಟಿ, 2ನೇ ಕೆಗಟರಿ 20 ಕೋಟಿ ಮೊತ್ತದ್ದಾಗಿರುತ್ತದೆ. ಕೆಟಗರಿ 1ಯಾವುದೇ ಅಂದಾಜು ಮೊತ್ತದ ಯೋಜನೆಗಳಿಗೆ ಆರ್‌ಎಫ್‌ಪಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕೆಟಗರಿ 4ರಲ್ಲಿ ಅರ್ಜಿ ಸಲ್ಲಿಸುವವರು ಲೋಕೋಪಯೋಗಿ ವೃತ್ತ ಬಳ್ಳಾರಿ ಅಡಿಯಲ್ಲಿಯ ವಿಭಾಗಗಳಾದ ಬಳ್ಳಾರಿ/ಹಡಗಲಿ/ಕೊಪ್ಪಳ/ರಾಯಚೂರು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅರ್ಜಿಯಲ್ಲಿ ನಮೂದಿಸಬೇಕು.
ಕೆಟಗರಿ 3ರಲ್ಲಿ ಇರುವ ಅಭ್ಯರ್ಥಿಗಳು ಲೋಕೋಪಯೋಗಿ ವೃತ್ತ ಬಳ್ಳಾರಿ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ಮಾತ್ರ ಸಮಾಲೋಚಕರಾಗಿ ಸೇವೆಗೆ ಅರ್ಹರು.
ಕೆಟಗರಿ 2ರಲ್ಲಿ ಇರುವವರು ಲೋಕೋಪಯೋಗಿ ಇಲಾಖೆಯಡಿಯಲ್ಲಿ ಲೋಕೋಪಯೋಗಿ ವಲಯ (ಈಶಾನ್ಯ) ಕಲಬುರಗಿ ವ್ಯಾಪ್ತಿಯಡಿಯಲ್ಲಿ ಕಾಮಗಾರಿಗಳಿಗೆ ಸೇವೆಗಾಗಿ ಅರ್ಹರಾಗಿರುತ್ತಾರೆ.
ಕೆಟಗರಿ 1ರಲ್ಲಿ ಬರುವವರು ಲೋಕೋಪಯೋಗಿ ಇಲಾಖೆಯಡಿಯಲ್ಲಿ ಲೋಕೋಪಯೋಗಿ ವಲಯ (ಈಶಾನ್ಯ) ಕಲಬುರಗಿ ವ್ಯಾಪ್ತಿಯಡಿಯಲ್ಲಿ ಕಾಮಗಾರಿಗಳಿಗೆ ಸೇವೆಗಾಗಿ ಅರ್ಹರಾಗಿರುತ್ತಾರೆ.
ಆಸಕ್ತ ಅಭ್ಯರ್ಥಿಗಳು ಸಮಾಲೋಚಕರು, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೋಟೆ, ಬಳ್ಳಾರಿ ಅವರ ಕಚೇರಿ eepwblyconsemp@gmail. com ಗೆ ಅಗತ್ಯ ದಾಖಲೆಗಳ ಜೊತೆ ಅರ್ಜಿಯನ್ನು ಕಳಿಸಬೇಕು.
ಇ-ಮೇಲ್‌ನಲ್ಲಿ ಕಳಿಸಿದ ದಾಖಲೆಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ಪರಿಶೀಲನೆಗಾಗಿ ಕಚೇರಿಗೆ ಸಲ್ಲಿಸಬೇಕು. ಆಸಕ್ತರು ಕಚೇರಿ ವೇಳೆಯಲ್ಲಿ ಕಾರ್ಯಪಾಲಕ ಅಭಿಯಂತರರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಬಹುದು.












Click it and Unblock the Notifications