ಪಂಚಾಯತ್ ರಾಜ್ ಇಲಾಖೆ; Account expert ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಆಗಸ್ಟ್ 26: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

Recommended Video

      ಬಿಡುಗಡೆಯಾಯ್ತು RCB ಹೊಸ ಜೆರ್ಸಿ | Oneindia Kannada

      Account expert ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಈ ಹುದ್ದೆ ಸಂಪೂರ್ಣ ತಾತ್ಕಾಲಿಕವಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

      ಬಳಿಕ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಗುತ್ತಿಗೆ ಅವಧಿ ಮತ್ತು ಮಾಸಿಕ ಸಂಭಾವನೆಯನ್ನು ನವೀಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 35 ರಿಂದ 45 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.

      Apply For Account Expert Post At Panchayat Raj Department

      ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ (ಫೈನಾನ್ಸ್)/ಎಂಕಾಂ ಪದವಿಯನ್ನು ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

      ಉದ್ಯೋಗ ಪ್ರಕಟಣೆ ಹೊರಡಿಸಿದ ದಿನಾಂಕ (18/8/2020) ಕ್ಕೆ 45 ವರ್ಷ ಮೀರಿರಬಾರದು. ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

      ಹುದ್ದೆಗೆ ಕನಿಷ್ಠ 3 ವರ್ಷಗಳ ಅನುಭವ ಹಾಗೂ ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಕರಾರು ಒಪ್ಫಂದವನ್ನು ಮಾಡಿಕೊಳ್ಳಬೇಕು.

      ಕರಾರು ಒಪ್ಪಂದ ಮಾಡಿಕೊಂಡ ಅಭ್ಯರ್ಥಿಗೆ ಇಲಾಖೆಯಲ್ಲಿನ ಯಾವುದೇ ಹುದ್ದೆಗಳಲ್ಲಿ ವಿಲೀನಗೊಳ್ಳಲು/ಮುಂದುವರೆಯಲು ಯಾವುದೇ ಹಕ್ಕು ಇರುವುದಿಲ್ಲ.

      ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಅನುಭವ ಹಾಗೂ ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡಿದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ತಿಳಿಸಲಾಗುತ್ತದೆ.

      ಅರ್ಜಿ ಸಲ್ಲಿಕೆ ಹೇಗೆ?: ನಿಗದಿತ ನಮೂನೆಯಲ್ಲಿ ಮಾಹಿತಿ ತುಂಬಿ, ವಯಸ್ಸಿನ ದೃಡೀಕರಣ, ವಿದ್ಯಾರ್ಹತೆ, ಅನುಭವ ಹಾಗೂ ರೆಸ್ಯೂಮ್ ಅನ್ನು ಅರ್ಜಿಯ ಜೊತೆಗೆ ಪಿಡಿಎಫ್‌ನಲ್ಲಿ ಇ-ಮೇಲ್ ಕಳಿಸಬೇಕು. ವಿಳಾಸ [email protected]

      ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ವೆಬ್‌ ಸೈಟ್‌ನಲ್ಲಿ ನೇಮಕಾತಿ ವಿಭಾಗದಕ್ಕೆ ಭೇಟಿ ಕೊಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+