Amazon Layoffs: ಅಮೆಜಾನ್‌ನಲ್ಲಿ ಬರೋಬ್ಬರಿ 30,000 ಉದ್ಯೋಗ ಕಡಿತ, ಕಾರಣವೇನು?
Amazon Layoffs: ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಳಲ್ಲಿ ದೈತ್ಯ ಕಂಪನಿಯಾಗಿರುವ ಅಮೆಜಾನ್ (Amazon Layoffs) ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗ ಕಡಿತವಾಗಿದೆ. ಇದೇ ವಾರದಿಂದ 30,000 ಕಾರ್ಪೊರೇಟ್ ಹುದ್ದೆಗಳನ್ನು ಕಡಿತಗೊಳಿಸಲು ಕಂಪನಿ ನಿರ್ಧಾರಿಸಿದೆ. ಕೋವಿಡ್ ಕಾಲದಲ್ಲಿ ಹೆಚ್ಚಾಗಿ ನೇಮಕ ಮಾಡಿದ್ದ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಹಾಗೂ ವೆಚ್ಚ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟು 1.55 ಮಿಲಿಯನ್ ಉದ್ಯೋಗಿಗಳ ಪೈಕಿ ಇದು ಕೇವಲ 10ರಷ್ಟು ಕಾರ್ಪೊರೇಟ್ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ ಎಂದು ವರದಿ ಆಗಿದೆ.
ಅಮೆಜಾನ್ ಒಟ್ಟು 1.55 ಮಿಲಿಯನ್ ಒಟ್ಟು ಉದ್ಯೋಗಿಗಳನ್ನು ಹೊಂದಿದೆ. ಈ ಕಡಿತ ಅದರಲ್ಲಿ ಸಣ್ಣ ಪ್ರಮಾಣ ಎನ್ನಲಾಗಿದೆ. ಕಂಪನಿಯು ಸುಮಾರು 27,000 ಹುದ್ದೆಗಳನ್ನು ತೆಗೆದುಹಾಕಲು ಪ್ರಾರಂಭಿಸಿತ್ತು. ಅದರಲ್ಲಿ ಈ ಭಾರೀಯ ಉದ್ಯೋಗ ಕಡಿತ ಬೃಹತ್ ಆಗಿದೆ.

ಮಾನವ ಸಂಪನ್ಮೂಲ (PXT), ಕಾರ್ಯಾಚರಣೇ, ಡಿವೈಸಸ್, ಸರ್ವೀಸಸ್ ಹಾಗೂ ಅಮೆಜಾನ್ ವೆಬ್ ಸರ್ವೀಸಸ್ (AWS) ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಮೆಜಾನ್ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಡಿ ಜ್ಯಾಸ್ಸಿ ಅವರು ನಿರ್ವಹಣಾ ಹಂತಗಳಲ್ಲಿ ಅನಗತ್ಯ ಬ್ಯೂರೋಕ್ರಸಿ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಯು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಿದೆ. ಈ ಕಾರಣದಿಂದ ಕೆಲವು ವಿಭಾಗಗಳ ಹುದ್ದೆಗಳ ಅನಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, AI ತಂತ್ರಜ್ಞಾನ ಅಳವಡಿಕೆಯು ಉಪಯೋಗದಿಂದ ಅಮೆಜಾನ್ ಹೆಚ್ಚು ಉತ್ಪಾದಕತೆ ಹೆಚ್ಚಿಸಿದೆ. ಉತ್ತಮ ಕಾರ್ಯನಿರ್ವಹಣೆ ಸಾಧ್ಯವಾಗಿದೆ. ಹೀಗಾಗಿ ಮೆಜಾನ್ ವೆಬ್ ಸರ್ವೀಸಸ್ (AWS) ಘಟಕದ ಆದಾಯ ನಿರಂತರವಾಗಿ ಏರಿಕೆಆಗುತ್ತಿದೆ. ಮೈಕ್ರೋಸಾಫ್ಟ್ ಅಝ್ಯೂರ್ ಮತ್ತು ಗೂಗಲ್ ಕ್ಲೌಡ್ ಕಂಪನಿಗಳಿಗಿಂತ ನಿಧಾನವಾಗಿದೆ. ಇತ್ತ, ಅಮೆಜಾನ್ ಈ ಹಬ್ಬದ ಕಾಲದಲ್ಲಿ 2.5 ಲಕ್ಷ ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ನೀಡಲು ಮುಂದಾಗಿದೆ ಎಂದು ವರದಿ ಆಗಿದೆ.












Click it and Unblock the Notifications