ಕೋವಿಡ್ ಪರಿಸ್ಥಿತಿ ಬಳಿಕ ನೇಮಕಾತಿಗಳಲ್ಲಿ ಶೇ 15ರಷ್ಟು ಏರಿಕೆ

ನವದೆಹಲಿ, ಜುಲೈ 08; ಭಾರತದಲ್ಲಿ ಕೋವಿಡ್ 2ನೇ ಅಲೆ ಏಪ್ರಿಲ್ ಬಳಿಕ ಹೆಚ್ಚಾಯಿತು. ಹಲವು ರಾಜ್ಯಗಳು ಲಾಕ್‌ಡೌನ್ ಘೋಷಣೆ ಮಾಡಿದವು. ಉದ್ಯೋಗ ಕ್ಷೇತ್ರದಲ್ಲಿ ಎರಡನೇ ಅಲೆಯ ಪ್ರಭಾವದ ಬಳಿಕ ನೇಮಕಾತಿಗಳು ಮತ್ತೆ ಆರಂಭವಾಗಿವೆ.

ವಿವಿಧ ಜನರು ಉದ್ಯೋಗಕ್ಕಾಗಿ ನೌಕರಿ ಡಾಟ್ ಕಾಂನಲ್ಲಿ ಖಾತೆ ತೆರೆದಿರುತ್ತಾರೆ. ನೌಕರಿಯ ಜಾಬ್ ಸೀಕ್ ವರದಿ ಬಿಡುಗಡೆಗೊಂಡಿದ್ದು, ಉದ್ಯೋಗ ಕ್ಷೇತ್ರದಲ್ಲಿ ಚೇತರಿಕೆ ಕಂಡುಬಂದಿದೆ. ಜೂನ್‌ನಲ್ಲಿ ಶೇ 15ರಷ್ಟು ನೇಮಕಾತಿ ಚಟುವಟಿಕೆ ಹೆಚ್ಚಾಗಿದೆ.

ದೇಶದಲ್ಲಿನ ನೇಮಕಾತಿ ಸೂಚ್ಯಾಂಕ ಮೇ ತಿಂಗಳಿನಲ್ಲಿ 2047ರಷ್ಟಿತ್ತು. ಜೂನ್ ತಿಂಗಳಿನಲ್ಲಿ ಅದು 2,359ಕ್ಕೆ ಏರಿಕೆಯಾಗಿದೆ. ಹಲವಾರು ಕೈಗಾರಿಕೆಗಳು ಕ್ರಿಯಾತ್ಮಕ ಕ್ಷೇತ್ರಗಳ ನೇಮಕಾತಿ ಬಗ್ಗೆ ಹೆಚ್ಚು ಒತ್ತು ನೀಡುತ್ತಿವೆ.

After Covid 2nd Wave Hiring Activity Bouncing Back In June

ಕೋವಿಡ್ ಪರಿಸ್ಥಿತಿಯಲ್ಲಿ ಐಟಿ ವಲಯವು ಮನೆಯಿಂದಲೇ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜೂನ್‌ ತಿಂಗಳಿನಲ್ಲಿ ಐಟಿ ವಲಯದ ನೇಮಕಾತಿಯಲ್ಲಿ ಶೇ 5ರಷ್ಟು ಏರಿಕೆ ಕಂಡುಬಂದಿದೆ. ಸಾಫ್ಟ್‌ವೇರ್, ಸಾಫ್ಟ್‌ವೇರ್ ಸೇವೆಗಳಲ್ಲಿ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಏರಿಕೆ ಕಂಡಿದೆ.

ಲಾಕ್‌ಡೌನ್ ಘೋಷಣೆ ಬಳಿಕ ಹಲವು ನಿರ್ಬಂಧಗಳನ್ನು ಹಾಕಲಾಗಿತ್ತು. ಆಗ ಹೋಟೆಲ್, ರೆಸ್ಟೋರೆಂಟ್, ವಿಮಾನಯಾನ, ಟ್ರಾವೆಲ್ಸ್‌ ಮುಂತಾದ ಕ್ಷೇತ್ರಗಳ ಬೆಳವಣಿಗೆ ಹಿನ್ನಡೆಯಾಗಿತ್ತು. ಜೂನ್‌ನಲ್ಲಿ ಈ ವಲಯಗಳ ನೇಮಕಾತಿಯೂ ಚೇತರಿಕೆ ಕಂಡಿದೆ.

ಟ್ರಾವೆಲ್ ವಲಯದಲ್ಲಿ ಶೇ 87+, ಚಿಲ್ಲರೆ ಕ್ಷೇತ್ರದಲ್ಲಿ ಶೇ 57 +, ವಿಮೆ ಶೇ 38+, ಬ್ಯಾಂಕಿಂಗ್/ ಹಣಕಾಸು ಸೇವೆಗಳಲ್ಲಿ ಶೇ 29+, ಫಾರ್ಮಾ/ ಬಯೋಟೆಕ್ ಕೇತ್ರದಲ್ಲಿ ಶೇ 22+ ಚೇತರಿಕೆ ಕಂಡು ಬಂದಿದೆ. ಬೋಧನೆ, ಬಿಪಿಓ ವಲಯದಲ್ಲಿಯೂ ನೇಮಕಾತಿ ಚೇತರಿಕೆಗೊಳ್ಳುತ್ತಿದೆ. ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಜೂನ್‌ನಲ್ಲಿ ಹೆಚ್ಚಾಗಿದೆ.

ಮಹಾನಗರಗಳಲ್ಲಿ ಕೆಲಸ; ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜನರು ಮಹಾನಗರಗಳನ್ನು ತೊರೆದು ಜಿಲ್ಲಾ, ತಾಲೂಕು ಕೇಂದ್ರಕ್ಕೆ ವಲಸೆ ಹೋದರು. ಈಗ ಮಹಾನಗರಗಳಲ್ಲಿ ಮತ್ತೆ ನೇಮಕಾತಿ ಹೆಚ್ಚಾಗುತ್ತಿದೆ. ಜೈಪುರದಲ್ಲಿ ಶೇ 50, ವಡೋದರಾದಲ್ಲಿ ಶೇ 29ರಷ್ಟು ಬೆಳವಣಿಗೆ ಕಂಡುಬಂದಿದೆ.

ಮಹಾನಗರದಲ್ಲಿ ಐಟಿ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಿದೆ. ಪುಣೆಯಲ್ಲಿ ಶೇ 10+, ಹೈದರಾಬಾದ್‌ ಶೇ 10+, ಬೆಂಗಳೂರು ಶೇ 4+ ಚೇತರಿಕೆಯನ್ನು ಕಂಡಿವೆ. ದೆಹಲಿ/ ಎನ್‌ಸಿಆರ್ ಮತ್ತು ಕೋಲ್ಕತ್ತಾದಲ್ಲಿ ಶೇ 26 ಮತ್ತು 24ರಷ್ಟು ಚೇತರಿಕೆ ದಾಖಲಾಗಿದೆ. ಇದು ಮತ್ತಷ್ಟು ಭರವಸೆಯನ್ನು ಹುಟ್ಟುಹಾಕಿದೆ.

ಕ್ರಿಯಾತ್ಮಕ ವಲಯಕ್ಕೆ ಬೇಡಿಕೆ; ಮಾರ್ಕೆಟಿಂಗ್, ಜಾಹೀರಾತು, ವಿಮೆ, ಮಾನವ ಸಂಪನ್ಮೂಲ, ಅಕೌಂಟ್ಸ್‌ ಸೇರಿದಂತೆ ಕ್ರಿಯಾತ್ಮಕ ವಲಯದ ನೇಮಕಾತಿಗೆ ಬೇಡಿಕೆ ಹೆಚ್ಚಾಗಿದೆ. ಬೋಧನಾ ವಲಯದಲ್ಲಿಯೂ ಶೇ 9+ ಬೆಳವಣಿಗೆ ಜೂನ್‌ನಲ್ಲಿ ದಾಖಲಾಗಿದೆ.

ನೇಮಕಾತಿ ವಲಯದ ಚೇತರಿಕೆ ಬಗ್ಗೆ ಮಾತನಾಡಿದ ನೌಕರಿ ಡಾಟ್ ಕಾಂನ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯಲ್, "ಮೇ ತಿಂಗಳ ಕುಸಿತದ ಬಳಿಕ ಜೂನ್‌ನಲ್ಲಿ ಶೇ 15ರಷ್ಟು ಚೇತರಿಕೆ ಕಂಡಿರುವುದು ಉತ್ತೇಜನಕಾರಿಯಾಗಿದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+