ನಿಪಾಹ್ ವೈರಸ್ ಎಂದರೇನು? ಮಾರಣಾಂತಿಕ ಜ್ವರದ ಕುರಿತು ಮಾಹಿತಿ
ಆಗ್ನೇಯ ಏಷ್ಯಾದಲ್ಲಿ ಉತ್ತರ ಭಾರತದಲ್ಲಿ ಮತ್ತು ಇದೀಗ ಕೇರಳದಲ್ಲಿ ತನ್ನ ದಾಂಗುಡಿ ಇಟ್ಟಿರುವ ಈ ಮಾರಾಣಾಂತಿಕ ನಿಪಾಹ್ ವೈರಸ್ ಬಗ್ಗೆ ಕರ್ನಾಟಕದಲ್ಲಿಯೂ ಎಚ್ಚರದಿಂದಿರಲು ಸೂಚಿಸಲಾಗಿದೆ.
ಮಿದುಳಿನ ಮೇಲೆ ಆಕ್ರಮಣ ಮಾಡುವ ಈ ವೈರಸ್ ಬಾವಲಿಯಿಂದ ಹರಡುತ್ತಿದೆ. ವಿಪರೀತ ಜ್ವರ ಮತ್ತು ಸ್ನಾಯು ನೋವು ಈ ರೋಗದ ಸಾಮಾನ್ಯ ಲಕ್ಷಣಗಳು. ಈ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಬರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ.
ಈಗಾಗಲೆ, ಮಂಗಳೂರಿನಲ್ಲಿ ಕೂಡ ಕೆಲವು ಕೇಸುಗಳು ದಾಖಲಾಗಿವೆ. ವೈರಸ್ ಸೋಂಕು ತಗುಲಿರುವ ವ್ಯಕ್ತಿಯಿಂದ ದೂರವಿರುವದು ಹಿತ. ಬಾವಲಿಗಳು ತಿಂದಿರುವ ಹಣ್ಣುಗಳನ್ನು ತಿಂದರೂ ಕೂಡ ಈ ಸೋಂಕು ತಗುಲಿಕೊಳ್ಳುತ್ತಿದೆ. ಈ ಸೋಂಕಿನ ಲಕ್ಷಣಗಳೇನು, ಏನೇನು ಕ್ರಮ ತೆಗೆದುಕೊಳ್ಳಬೇಕು ಇತ್ಯಾದಿ ಈ ಚಿತ್ರದಲ್ಲಿದೆ.












Click it and Unblock the Notifications