Infographics: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಮಳೆ ನಿರೀಕ್ಷೆ
ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಇಳಿಕೆ ಆಗಿದ್ದರು ಸಹ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಇನ್ನು ಕರಾವಳಿ ಮತ್ತು ಮಲೆನಾಡಿನ ವಿವಿಧ ಪ್ರದೇಶಗಳಲ್ಲಿ ಜುಲೈ 27ರವರೆಗೆ ಉತ್ತಮ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 24ಗಂಟೆಯಲ್ಲೂ ಸಹ ಕರಾವಳಿ ಹಾಗೂ ಮಲೆನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿಯಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಅನೇಕ ಕಡೆಗಳಲ್ಲಿ ಸಹ ಬಹಳಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಮುಂದಿನ ಕೆಲವು ದಿನಗಳ ಕುರಿತು ಗಂಭೀರ ರೂಪದ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಕರ್ನಾಟಕ ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಇದರ ಜತೆಗೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮುಂತಾದ ಕಡೆಗಳಲ್ಲಿ ಮೋಡ ಮುಸುಕಿದ ವತಾವರಣವೇ ಇದೆ. ಆಗಾಗ ಸೋನೆ ರೂಪದಲ್ಲಿ ಮಳೆ ಬಂದರೆ ಹೆಚ್ಚು. ಈ ಭಾಗದಲ್ಲಿ ಮುಂದಿನ ಎರಡು ಮೂರು ದಿನ ಹೇಳಿಕೊಳ್ಳುವಂತೆ ಗಮನಾರ್ಹ ಬದಲಾವಣೆಗಳು ಕಂಡು ಬಂದಿಲ್ಲ. ಹೀಗಾಗಿ ಯಾವದೇ ಭಾಗಕ್ಕೂ ಅಲರ್ಟ್‌ಗಳ ಎಚ್ಚರಿಕೆ ನೀಡಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳ ಹೇಳಿದ್ದಾರೆ.

ಬೆಂಗಳೂರಿನ ಹವಾಮಾನದಲ್ಲಿ ಬದಲಾವಣೆ ಇಲ್ಲ
ಬೆಂಗಳೂರಿಗರಿಗೆ ಜಿಟಿ ಜಿಟಿ ಮಳೆಯಿಂದ ಮುಕ್ತಿ ದೊರೆತಂತಾಗಿದೆ. ಮುಂಗಾರಿನ ಅಬ್ಬರ ಕಡಿಮೆ ಆದ ಹಿನ್ನೆಲೆ ರಾಜಧಾನಿಯಲ್ಲಿ ಮಳೆ ಸಹ ಕಡಿಮೆ ಆಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದೆ. ಈ ವೇಳೆ ಬೆಂಗಳೂರಿನ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಎರಡು ದಿನ ಇದೇ ರೀತಿಯ ವತಾವರಣ ಮುಂದುವರಿಯಲಿದೆ. ಇದಲ್ಲದೇ ಬೆಂಗಳೂರು ಹವಾಮಾನದಲ್ಲಿ ಭಾರೀ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಮುಂದಿನ 2ದಿನ ಮಳೆ ಹೇಗಿರಲಿದೆ
ಕರ್ನಾಟಕದ ಕರಾವಳಿಯ ಎಲ್ಲ ಮೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಉತ್ತಮ ಮಳೆಯಿಂದ ಜೋರು ಮಳೆಯ ನಿರೀಕ್ಷೆ ಇದೆ. ಮಲೆನಾಡಿನಲ್ಲೂ ಸಹ ಉತ್ತಮ ಮಳೆ ವಾತಾವರಣ ಇದೆ. ಉತ್ತರ ಒಳನಾಡಿನಲ್ಲಿ ಮಳೆ ಬಹುತೇಕ ಕ್ಷೀಣಿಸಿದೆ. ಆಗಾಗ ಬೆಳಗಾವಿ, ಧಾರವಾಡ, ಕಲಬುರಗಿ ಇನ್ನಿತರ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಬಿದ್ದರೆ ಹೆಚ್ಚು ಎನ್ನುವಂತಾಗಿದೆ. ಇದನ್ನು ಹೊರತು ಪಡಿಸಿದರೆ ರಾಜ್ಯ ಇತರ ಭಾಗದಲ್ಲಿ ಮಳೆ ಮನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ವರದಿ ಮಾಡಿದ್ದಾರೆ.

ಕರಾವಳಿಯಲ್ಲಿ ಗಾಳಿಯ ವೇಗ ಸಾಮಾನ್ಯವಾಗಿರಲಿದೆ
ಮುಂದಿನ ಎರಡು ದಿನ ಮಳೆಯ ವಾತಾವರಣ ಇರುವ ಕಾರಣಕ್ಕೆ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಉತ್ತಮ ಮಳೆ ಆಗುವುದರಿಂದ ಈ ಭಾಗದ ಸಮುದ್ರ ತೀರದಲ್ಲಿ ಗಾಳಿ ವೇಗ ಸಾಮಾನ್ಯವಾಗಿರಲಿದೆ. ಶೆಕೆಯ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದ್ದು ಆಗಾಗ ಮಳೆ ಸುರಿಯಲಿದೆ. ಕೆಲವು ದಿನಗಳ ಹಿಂದಷ್ಟೆ ಮಳೆ ಅಬ್ಬರಿಸುತ್ತಿದ್ದ ವೇಳೆ ಗಾಳಿಯ ವೇಗ ಗಂಟೆಗೆ ಸುಮಾರು 50-66ಕಿ.ಮೀ.ದಾಖಲಾಗಿತ್ತು. ಉಳಿದಂತೆ ಹವಾಮಾನದಲ್ಲಿ ಗಂಭೀರವಾದ ಬದಲಾಣೆಗಳು ಇಲ್ಲ.

ಕರ್ನಾಟಕದಲ್ಲಿ ದಾಖಲಾದ ತಾಪಮಾನ ಮಾಹಿತಿ
ಬೆಂಗಳೂರಿನಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ತೇವಾಂಶ 65ರಷ್ಟು ದಾಖಲಾಗಿದೆ. ಇನ್ನು ಗಾಳಿಯ ವೇಗ ಗಂಟೆಗೆ 20ಕಿ.ಮೀ ಕಂಡು ಬಂದಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 68ರಷ್ಟು ತೇವಾಂಶ, ಮಂಗಳೂರಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 88ರಷ್ಟು ತೇವಾಂಶ ಇದೆ. ಇನ್ನು ಶಿವಮೊಗ್ಗದಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65ರಷ್ಟು ತೇವಾಂಶ ಇದೆ. ಮೈಸೂರು 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 57 ಇದ್ದು, ಬಳ್ಳಾರಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 54ರಷ್ಟು ತೇವಾಂಶ ದಾಖಲಾಗಿದೆ.
ಅದೇ ರೀತಿ ರಾಯಚೂರಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 54ರಷ್ಟು ತೇವಾಂಶ, ಚಿತ್ರದುರ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ರಷ್ಟು ತೇವಾಂಶ, ಕಲಬುರಗಿಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 63ರಷ್ಟು ತೇವಾಂಶ, ಚಿಕ್ಕಮಗಳೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65ರಷ್ಟು ತೇವಾಂಶ ದಾಖಲಾಗಿದೆ ಎಂದು ವರದಿ ತಿಳಿಸಿದೆ.












Click it and Unblock the Notifications