ಮೈಸೂರು ಅರಮನೆಗಳ ಫಿರಂಗಿ ಇತಿಹಾಸವನ್ನು ನೋಡಿ
ಬೆಂಗಳೂರು, ಅಕ್ಟೋಬರ್ 16 : ಮೈಸೂರು ಅರಮನೆಗೆ ಭೇಟಿ ನೀಡಿದಾಗ ಪ್ರವಾಸಿಗರನ್ನು ಆಕರ್ಷಿಸುವುದು ಫಿರಂಗಿ. ಹಳೆಯ ಕಾಲದ ಫಿರಂಗಿಗಳನ್ನು ನೋಡಿದರೆ ಅವುಗಳ ಬಗ್ಗೆ ಮಾಹಿತಿ ತಿಳಿಯಬೇಕು ಎಂದೆನಿಸುತ್ತದೆ.
ಮೈಸೂರು ಮಹಾರಾಜರ ಶಕ್ತಿಯಾಗಿದ್ದ ಫಿರಂಗಿಗಳು ಈಗ ವಸ್ತು ಸಂಗ್ರಹಾಲಯದಲ್ಲಿವೆ. ಮೈಸೂರು ದಸರಾ ಸಂದರ್ಭದಲ್ಲಿ ಫಿರಂಗಿಗಳಿಗೆ ಹೆಚ್ಚಿನ ಮಹತ್ವ. ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸುವಾಗ ಫಿರಂಗಿ ಬಳಕೆ ಮಾಡಲಾಗುತ್ತದೆ.
ಫಿರಂಗಿಗಳನ್ನು ದಸರಾ ಸಂದರ್ಭದಲ್ಲಿ ಹೊರತೆಗೆದು ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲಾಗುತ್ತದೆ ಮತ್ತು ಫಿರಂಗಿಗಳ ಮೆರವಣಿಗೆ, ಆಯುಧ ಪೂಜೆ ನಡೆಯುತ್ತದೆ.
ಜಂಬೂ ಸವಾರಿ ಆರಂಭವಾಗುವ ಮೊದಲು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಆಗ ರಾಷ್ಟ್ರಗೀತೆ ನುಡಿಸಿದ ಬಳಿಕ ಫಿರಂಗಿಯಿಂದ 21 ಕುಶಾಲ ತೋಪು ಸಿಡಿಸಲಾಗುತ್ತದೆ.
ಕುಶಾಲ ತೋಪು ಸಿಡಿಸಲು ತರಬೇತಿ ಬೇಕಾಗುತ್ತದೆ. ಸಿಎಆರ್ ಪೊಲೀಸರು ಚಾಚು ತಪ್ಪದೆ ಇದನ್ನು ಮಾಡಿಕೊಂಡು ಬರುತ್ತಿದ್ದಾರೆ. ಕುಶಾಲ ತೋಪು ಸಿಡಿಸುವಾಗ ಅವಘಡಗಳು ನಡೆದರೆ ಎಂದು ಸಿಬ್ಬಂದಿಗೆ ವಿಮೆ ಮಾಡಿಸಲಾಗಿದೆ.













Click it and Unblock the Notifications