Infographics: ಶತಮಾನದ ದೀರ್ಘಾವಧಿ ಚಂದ್ರಗ್ರಹಣದ ಸಂಕ್ಷಿಪ್ತ ವಿವರ
2021ರ ನವೆಂಬರ್ 19 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಈ ಖಗೋಳ ವಿದ್ಯಮಾನ ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಎನಿಸಿಕೊಂಡಿದೆ. ಭಾರತದಲ್ಲೂ ಚಂದ್ರಗ್ರಹಣ ಗೋಚರಿಸಲಿದೆ.
2021ರ ನವೆಂಬರ್ 19ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ (28 ಕಾರ್ತಿಕ, 1943 ಶಕ ವರ್ಷ). ಭಾರತದಿಂದ ಚಂದ್ರೋದಯದ ಸ್ವಲ್ಪವೇ ಹೊತ್ತಿನಲ್ಲಿ ಭಾಗಶಃ ಚಂದ್ರಗ್ರಹಣದ ಮೋಕ್ಷಕಾಲದ ದರ್ಶನ ಕೆಲವೇ ಕ್ಷಣಗಳ ಕಾಲ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ತೀರಾ ಪೂರ್ವ ಭಾಗಗಳಲ್ಲಿ ಕಾಣಿಸಲಿದೆ.
ಐ.ಎಂ.ಡಿ, ನಾಸಾ, ಟೈಮ್ ಅಂಡ್ ಡೇಟ್ ಮೂಲಗಳ ಪ್ರಕಾರ, ಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ವಲಯದಲ್ಲಿ ಗೋಚರಿಸಲಿದೆ. ಸುಮಾರು 50 ದೇಶಗಳಲ್ಲಿ ಚಂದ್ರಗ್ರಹಣವನ್ನು ಅಲ್ಲಿನ ಕಾಲಮಾನ ಪ್ರಕಾರ ವೀಕ್ಷಿಸಬಹುದು.
ಭಾಗಶಃ ಚಂದ್ರಗ್ರಹಣವು ಭಾರತೀಯ ಕಾಲಮಾನ 12 ಗಂಟೆ 48 ನಿಮಿಷಕ್ಕೆ ಆರಂಭವಾಗಲಿದೆ. ಭಾಗಶ ಚಂದ್ರಗ್ರಹಣ ಐ.ಎಸ್.ಟಿ. 16 ಗಂಟೆ 17 ನಿಮಿಷಕ್ಕೆ ಕೊನೆಗೊಳ್ಳಲಿದೆ.
ಮುಂದಿನ ಚಂದ್ರಗ್ರಹಣವು 2022ರ ನವೆಂಬರ್ 8ರಂದು ಭಾರತದಲ್ಲಿಯೂ ಗೋಚರಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ.
ಹುಣ್ಣಿಮೆಯ ದಿನ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮೂರೂ ಒಟ್ಟಿಗೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣವು ಚಂದ್ರ ಸಂಪೂರ್ಣವಾಗಿ ಭೂಮಿಯ ಸಂಪೂರ್ಣ ಛಾಯೆಯಡಿ ಬಂದಾಗ ಘಟಿಸುತ್ತದೆ ಮತ್ತು ಭಾಗಶಃ ಚಂದ್ರಗ್ರಹಣವು ಚಂದ್ರನ ಭಾಗಶಃ ಭಾಗ ಭೂಮಿಯ ಛಾಯೆಯಡಿ ಬಂದಾಗ ಸಂಭವಿಸುತ್ತದೆ.
ಎಲ್ಲ ಚಂದ್ರಗ್ರಹಣಗಳಂತೆಯೇ ಇದನ್ನು ಕೂಡ ಬರಿಗಣ್ಣಿಗೆ ವೀಕ್ಷಿಸಬಹುದಾಗಿ. ಗ್ರಹಣವು ಸಾಂಪ್ರದಾಯಿಕ ಆಚರಣೆಗಳಲ್ಲಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಕೆಲವೆಡೆ ಈ ಅವಧಿಯಲ್ಲಿ ಅನೇಕ ಚಟುವಟಿಕೆಗಳ ಮೇಲೆ ನಿರ್ಬಂಧಗಳಿವೆ. ಜನರು ಈ ಸಮಯದಲ್ಲಿ ತಿನ್ನಬಾರದು, ಕೆಲಸ ಮಾಡಬಾರದು ಮುಂತಾದ ಸಲಹೆಗಳಿವೆ. ಹಾಗೆಯೇ ಊಟದ ವಿಚಾರದಲ್ಲಿ ಅನೇಕ ನಂಬಿಕೆಗಳಿವೆ.
ಗ್ರಹಣದ ಸಂದರ್ಭದಲ್ಲಿ ಆಹಾರ ಸೇವಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎನ್ನುವುದು ಪುರಾತನ ನಂಬಿಕೆ. ಆದರೆ ಆಧುನಿಕ ವಿಜ್ಞಾನ ಇದನ್ನು ಒಪ್ಪುವುದಿಲ್ಲ. ಹಾಗಿದ್ದರೂ ಸಾಂಪ್ರದಾಯಿಕ ಕುಟುಂಬಗಳಲ್ಲಿ ಗ್ರಹಣದ ಸಂಬಂಧ ಆಹಾರ ಸೇವನೆ ಮತ್ತು ಪೂಜೆ ಪುನಸ್ಕಾರಗಳ ಕುರಿತು ಅನೇಕ ನಂಬಿಕೆಗಳಿವೆ. ಇದು ಬದಾವಣೆಯ ಮುನ್ಸೂಚನೆ ಮತ್ತು ಕೆಡುಗಿನ ಪ್ರತಿನಿಧಿ ಎಂದೂ ಪರಿಗಣಿಸಲಾಗುತ್ತಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಮತ್ತು ಅಪಾಯಕಾರಿ ವಸ್ತುಗಳಿಂದ ದೂರ ಇರಬೇಕು ಎನ್ನಲಾಗುತ್ತದೆ.
ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ಅನೇಕ ಸಮುದಾಯಗಳಲ್ಲಿ ಗ್ರಹಣದ ದಿನಗಳಲ್ಲಿ ಕಚ್ಚಾ ಆಹಾರ, ಕೆಲವು ಹಣ್ಣು ಮತ್ತು ತರಕಾರಿಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಇದು ಮದ್ಯಪಾನ, ಮಾಂಸಾಹಾರ ಮುಂತಾದವುಗಳಿಗೂ ಅನ್ವಯಿಸುತ್ತದೆ. ಹಾಗೆಯೇ ಮೊದಲೇ ಅಡುಗೆಮನೆಯಲ್ಲಿ ಅಡುಗೆ ಮಾಡಿ ಇರಿಸುವಂತಿಲ್ಲ.
ಆದರೆ, ವೈಜ್ಞಾನಿಕವಾಗಿ ಖಗೋಳ ವಿಜ್ಞಾನದ ಪ್ರಕಾರ, ಚಂದ್ರಗ್ರಹಣ ದರ್ಶನದಿಂದ ಯಾವುದೇ ಹಾನಿಯುಂಟಾಗುವುದಿಲ್ಲ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಇದಕ್ಕೆ ಯಾವುದೇ ಧಾರ್ಮಿಕ ಮಹತ್ವದ ಹಿನ್ನಲೆಯಿಲ್ಲ. ಪ್ರತಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಂತ್ರ ಪಠಣ ಮತ್ತು ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಉಪಛಾಯಾ ಚಂದ್ರಗ್ರಹಣವಾಗಿರುವುದರಿಂದ ಸೂತಕ ಇರುವುದಿಲ್ಲ.

ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಇದಕ್ಕೆ ಯಾವುದೇ ಧಾರ್ಮಿಕ ಮಹತ್ವದ ಹಿನ್ನಲೆಯಿಲ್ಲ. ಪ್ರತಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಂತ್ರ ಪಠಣ ಮತ್ತು ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಉಪಛಾಯಾ ಚಂದ್ರಗ್ರಹಣವಾಗಿರುವುದರಿಂದ ಸೂತಕ ಇರುವುದಿಲ್ಲ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications