ರಾಜ್ಯಾದ್ಯಂತ ವರುಣನ ಆರ್ಭಟ: ಜು.26ರಂದು ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಜುಲೈ 26: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರವಾಗಿದ್ದು, ಕಳೆದ ಹತ್ತು ದಿನಗಳಿಂದ ರಾಜ್ಯದ ಹಲವೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಒಂದು ದಿನದಿಂದ ಕರಾವಳಿ ಭಾಗದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ.

ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಈವರೆಗೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದ್ದು, ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಶೇ.19 ಅಧಿಕ ಮಳೆ ಸುರಿದಿದೆ. ಆರಂಭದಲ್ಲಿ ಅಷ್ಟಾಗಿ ಮಳೆ ಆಗದಿದ್ದರೂ ಹವಾಮಾನ ವೈಪರೀತ್ಯದಿಂದ ಕಳೆದ ಜೂನ್‌ ಮತ್ತು ಜುಲೈ ಮೂರನೇ ವಾರದಲ್ಲಿ ಸತತ ಒಂದು ವಾರ ಕಾಲ ಮಳೆ ಆಗಿದೆ.

ಮುಂಗಾರಿನ (ಜೂ.1-ಜು.19ರವರೆಗೆ) ಅವಧಿಯಲ್ಲಿ ರಾಜ್ಯದಲ್ಲಿ 484 ಮಿ.ಮೀ.ವಾಡಿಕೆ ಮಳೆ ಆಗಬೇಕು. ಇದೀಗ ಆ ವಾಡಿಕೆಗಿಂತ ಹೆಚ್ಚು, ಅಂದರೆ 578 ಮಿ.ಮೀ.(ಶೇ.19) ಮಳೆ ಬಿದ್ದಿದೆ. ಅದರಲ್ಲೂ ಕರಾವಳಿ, ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರದಿ ಪ್ರಕಾರ, ಕಳೆದ ವರ್ಷ 2020ರ ಇದೇ ಅವಧಿಯಲ್ಲಿ ವಾಡಿಕೆ 373ಮಿ.ಮೀ.ನಷ್ಟೇ (375ಮಿ.ಮೀ.) ಮಳೆ ಆಗಿದ್ದರಿಂದ ಕೊರತೆ ಕಾಣಲಿಲ್ಲ. 2019ರಲ್ಲಿ ಇದೇ ವೇಳೆ ಮಳೆ ಅಭಾವ ಎದುರಾಗಿತ್ತು. ವಾಡಿಕೆ 505ಮಿ.ಮೀ.ನಷ್ಟು ಮಳೆ ಬಾರದೇ ಕೇವಲ 373 ಮಿ.ಮೀ. ಸುರಿದು ಶೇ.26ರಷ್ಟು ಮಳೆ ಕೊರತೆಯಾಗಿತ್ತು.

ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ.

ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಕಳೆದ 2 ವಾರಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 31,360 ಮಂದಿಯನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸುಮಾರು 22,417 ಜನರು 237 ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಸುಮಾರು 283 ಗ್ರಾಮಗಳು, 45 ತಾಲೂಕುಗಳು ಮಳೆಯ ಹೊಡೆತಕ್ಕೆ ಸಿಕ್ಕಿದ್ದು, 36,498 ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಯಾವ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ, ಯಾವ ಜಲಾಶಯದಲ್ಲಿ ಈಗ ಎಷ್ಟು ನೀರಿದೆ ಎಂಬುದರ ಮಾಹಿತಿ ಇಲ್ಲಿದೆ. ವಿನ್ಯಾಸ ಭರತ್ ಎಚ್‌ಸಿ

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯ

ಲಿಂಗನ ಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು550.00ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 870.23ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು889.35 ಮೀಟರ್‌ನಷ್ಟಿದೆ.

ಕಬಿನಿ ಜಲಾಶಯ

ಕಬಿನಿ ಜಲಾಶಯ

ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು694.95ರಷ್ಟಿದೆ, ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮ33.81ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 655.67ಷ್ಟಿದೆ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.17ಮೀಟರ್‌ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು515.77ಮೀಟರ್‌ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 479.32ಮೀಟರ್‌ನಷ್ಟು ನೀರಿದೆ.

 ಸೂಪಾ ಜಲಾಶಯ

ಸೂಪಾ ಜಲಾಶಯ

ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ548.75ಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 550.30 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು,661.89ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್‌ ನೀರಿನ ಸಾಮರ್ಥ್ಯವಿದ್ದು, 632.67ನೀರು ಸಂಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+