ಜೂನ್ 29ರಂದು ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಜೂನ್ 29; ನೈಋತ್ಯ ಮುಂಗಾರಿನ ಅಬ್ಬರ ಕಡಿಮೆಯಾಗಿದ್ದು, ಕರ್ನಾಟಕದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿದ್ದಾರೆ. ಮುಂದಿನ ವಾರ ಮತ್ತೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಇದರಿಂದಾಗಿ ನದಿಗಳ ನೀರಿನ ಮಟ್ಟದಲ್ಲಿಯೂ ಇಳಿಕೆ ಕಂಡುಬಂದಿದೆ. ಆರಂಭದಲ್ಲಿ ಅಬ್ಬರಿಸಿದ್ದ ಮುಂಗಾರು ಬಳಿಕ ದುರ್ಬಲವಾಗಿದೆ.
ನದಿಗಳ ನೀರಿನ ಮಟ್ಟ ಇಳಿಕೆಯಾದ ಕಾರಣ ಡ್ಯಾಂಗಳಿಗೆ ಒಳಹರಿವು ಸಹ ಕಡಿಮೆಯಾಗಿದೆ. ಜೂನ್ 29ರಿಂದ ಜುಲೈ ಮೊದಲ ವಾರದ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಲಿಂಗನಮಕ್ಕಿ ಜಲಾಶಯ
ಶರಾವತಿ ನದಿಯ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಗೆ 2199 ಕ್ಯುಸೆಕ್ ಒಳಹರಿವು ಇದೆ. 4305 ಕ್ಯುಸೆಕ್ ಹೊರಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 544.44 ಮೀಟರ್. ಇಂದಿನ ನೀರಿನ ಮಟ್ಟ 544.16. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕೆಆರ್‌ಎಸ್ ಒಳಹರಿವು ಎಷ್ಟು?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ನೀರಿನ ಮಟ್ಟ 28.55. ಒಳಹರಿವು 2691 ಮತ್ತು ಹೊರಹರಿವು 6417 ಕ್ಯುಸೆಕ್. ಕಬಿನಿ ಮತ್ತು ಭದ್ರಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಆಲಮಟ್ಟಿ ಜಲಾಶಯದ ನೀರಿನ ಮಟ್ಟ 517.40 ಮೀಟರ್. ಪೂರ್ಣ ಮಟ್ಟ 519.60. ಒಳಹರಿವು 20451. ಹೊರಹರಿವು 20451 ಕ್ಯುಸೆಕ್. ನಾರಾಯಣಪುರ ಮತ್ತು ತುಂಗಭದ್ರಾ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಘಟಪ್ರಭಾ ಜಲಾಯಶದ ನೀರಿನ ಮಟ್ಟ
ಘಟಪ್ರಭಾ ಜಲಾಶಯಕ್ಕೆ ಒಳಹರಿವು 4441 ಮತ್ತು ಹೊರ ಹರಿವು 120 ಕ್ಯುಸೆಕ್. ಜಲಾಶಯದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ಮಟ್ಟ 650.25 ಮೀಟರ್. ಮಲಪ್ರಭಾ ಮತ್ತು ಸೂಪಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.












Click it and Unblock the Notifications