ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕನ್ನಡದ ವಿಧಾನಸಭಾ ಕ್ಷೇತ್ರಗಳಲೆಲ್ಲಾ ಮಹಿಳೆಯರೇ ನಿರ್ಣಾಯಕರು

By Sachhidananda Acharya
|
Google Oneindia Kannada News

ಮಂಗಳೂರು, ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಬೇಕಾದ ಸರ್ವ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದ್ದು ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಮತದಾರರೇ ಪ್ರಬಲ್ಯ ಮೆರೆದಿದ್ದಾರೆ.

ಆಯೋಗ ನೀಡಿರುವ ಮಾಹಿತಿಗಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,11,848 ಮತದಾರರಿದ್ದಾರೆ. ಇವರಲ್ಲಿ 8,41,073 ಪುರುಷ ಮತದಾರರು ಮತ್ತು 8,70,675 ಮಹಿಳಾ ಮತದಾರರಿದ್ದಾರೆ. 100 ತೃತೀಯ ಲಿಂಗಿಗಳೂ ದಕ್ಷಿಣ ಕನ್ನಡದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆ: ಯಲ್ಲಾಪುರದಲ್ಲಿ ಕನಿಷ್ಠ, ಕಾರವಾರದಲ್ಲಿ ಗರಿಷ್ಠ ಮತದಾರರು ಉತ್ತರ ಕನ್ನಡ ಜಿಲ್ಲೆ: ಯಲ್ಲಾಪುರದಲ್ಲಿ ಕನಿಷ್ಠ, ಕಾರವಾರದಲ್ಲಿ ಗರಿಷ್ಠ ಮತದಾರರು

ಇಲ್ಲಿನ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ ಮತದಾರರಿದ್ದು, 2,40,057 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಇನ್ನು ಸಚಿವ ಯುಟಿ ಖಾದರ್ ಸ್ಪರ್ಧಿಸಿರುವ ಮಂಗಳೂರು ಕ್ಷೇತ್ರದಲ್ಲಿ ಕನಿಷ್ಠ 1,95,735 ಮತದಾರರಿದ್ದಾರೆ.

ಸಚಿವ ರಮಾನಾಥ ರೈ ಸ್ಪರ್ಧಿಸುತ್ತಿರುವ ಬಂಟ್ವಾಳ ಕ್ಷೇತ್ರ ರೋಚಕ ಹಣಾಹಣಿಯ ಮುನ್ಸೂಚನೆ ನೀಡಿದ್ದು ಇಲ್ಲಿ 2,21,735 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.

Karnataka Assembly Elections 2018: Constituency wise voters in Dakshina Kannada district
English summary
Karnataka Assembly Elections 2018: Here is the list of constituencies along with final numbers of voters in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X