ಜಯನಗರ ಫಲಿತಾಂಶ: ಚಿತ್ರಗಳಲ್ಲಿ ನೋಡಿ ಮುನ್ನಡೆ-ಹಿನ್ನಡೆಯ ಟ್ರೆಂಡ್
ಬೆಂಗಳೂರು, ಜೂನ್ 13: ಜಯನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಬಿಡುಗಡೆಯಾಗಿದೆ. ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ 54457 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರೆ, ಬಿಜೆಪಿಯ ಬಿ ಎನ್ ಪ್ರಹ್ಲಾದ್ 51568 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿಕೃಷ್ಣಾ ರೆಡ್ಡಿ 1861 ಮತಗಳನ್ನಷ್ಟೇ ಪಡೆದು, ಸೋಲೊಪ್ಪಿಕೊಂಡರು.
ಐದನೇ ಸುತ್ತಿನ ನಂತರ ಉಭಯ ಪಕ್ಷದ ಅಭ್ಯರ್ಥಿಗಳ ನಡುವೆ ಇದ್ದ ಅಂತರ ಕೊಂಚ ಕಡಿಮೆಯಾಗುತ್ತ, ಫಲಿತಾಂಶದ ಕುರಿತು ಕುತೂಹಲ ಏರ್ಪಟ್ಟಿತ್ತು. ಜೂನ್ 11 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು(ಜೂನ್ 13) ಹೊರಬೀಳುತ್ತಿದ್ದು, ಫಲಿತಾಂಶದ ಪ್ರತಿ ಸುತ್ತಿನ ಮತ ಎಣಿಕೆಯಲ್ಲೂ ಟ್ರೆಂಡ್ ಹೇಗಿತ್ತು ಎಮಬ ಕುರಿತ ಚಿತ್ರ ಸಹಿತ ಮಾಹಿತಿ ಇಲ್ಲಿದೆ.
ಕ್ಷೇತ್ರದ ಬಿಜೆಪಿ ಅಭಯರ್ಥಿಯಾಗಿದ್ದ ಬಿ ಎನ್ ವಿಜಯಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಮೇ 12 ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಿ ದಿ.ವಿಜಯಕುಮಾರ್ ಅವರ ಸಹೋದರ ಬಿ ಎನ್ ಪ್ರಹ್ಲಾದ್, ಪಕ್ಷೇತರ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣರೆಡ್ಡಿ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಮೊದಲ ಹಲವು ಸುತ್ತುಗಳಲ್ಲಿ ಸುಲಭ ಮುನ್ನಡೆ ಗಳಿಸಿದ್ದ ಸೌಮ್ಯ ರೆಡ್ಡಿ ಕೊನೆಯ ಮೂರ್ನಾಲ್ಕು ಸುತ್ತುಗಳಲ್ಲಿ ಕಡಿಮೆ ಮತಗಳಿಸುವ ಮೂಲಕ ಪ್ರಯಾಸದಲ್ಲೇ ಗೆಲುವುಸಾಧಿಸಿದರು.





























Click it and Unblock the Notifications