Infographics: ಅ.9ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರು, ಅಕ್ಟೋಬರ್ 9: ದಸರಾ ಹಬ್ಬದ ಹೊಸ್ತಿಲಿನಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿ ಭರಾಟೆ ಹೆಚ್ಚುವ ಮುನ್ಸೂಚನೆ ಸಿಗುತ್ತಿದ್ದಂತೆ ಕ್ರಮೇಣ ಬೆಲೆ ಏರಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,910 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,900 ರೂಪಾಯಿಗೆ ಹೆಚ್ಚಿದೆ. ಬೆಂಗಳೂರು, ಚೆನ್ನೈ ಸೇರಿದಂತೆಯೇ ದೆಹಲಿ, ಜೈಪುರ ಮುಂಬೈ, ಹೈದರಾಬಾದ್​ ಹೀಗೆ ಎಲ್ಲಾ ಕಡೆಗಳಲ್ಲಿಯೂ ಸಹ ಇಂದು ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಯು ಹಬ್ಬ ಹರಿದಿನಗಳ ಆಸುಪಾಸಿನಲ್ಲಿ ಹೆಚ್ಚುತ್ತದೆ. ಆಭರಣಗಳ ಮೇಲಿನ ಬೇಡಿಕೆಯ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಚಿನ್ನ ಮತ್ತು ಬೆಳ್ಳಿ ದರದಲ್ಲಿ ವ್ಯತ್ಯಾಸಕ್ಕೆ ಮುಖ್ಯ ಕಾರಣ ಎನಿಸಿಕೊಳ್ಳುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಮುಂದಿನ ಪಟ್ಟಿಯನ್ನು ನೋಡಿ ತಿಳಿದುಕೊಳ್ಳೋಣ.

Gold And Silver Rate Increased In Indias Major Cities On October 9, 2021

ಚಿನ್ನದ ದರದಲ್ಲಿ ಅಲ್ಪ ಏರಿಕೆ; ಅ.9ರ ದರ ಪಟ್ಟಿ:

ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನ, ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಆದರೂ ಸಹ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾದರೆ ಸಾಕು ಖರೀದಿಯತ್ತ ಆಭರಣ ಪ್ರಿಯರ ಚಿತ್ತ ಚಿನ್ನದತ್ತ ವಾಲುತ್ತದೆ. ಆದರೆ ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,380 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,410 ರೂಪಾಯಿಗೆ ಏರಿಕೆಯಾಗಿದೆ. ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಹಲವು ನಗರಗಳಲ್ಲಿ ಏರಿಕೆ ಕಂಡು ಬಂದಿದ್ದರೆ, ಇನ್ನು ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇಕಡಾ 1.84ರಷ್ಟು ಏರಿಕೆಯಾಗಿ 1,756.94 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.33ರಷ್ಟು ಏರಿಕೆಯಾಗಿ 22.66 ಯುಎಸ್ ಡಾಲರ್ ಆಗಿದೆ.

ಶನಿವಾರ, ಅಕ್ಟೋಬರ್ 09ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,060 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,250 ರೂ ಆಗಿದೆ. ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇಕಡಾ 1.84ರಷ್ಟು ಏರಿಕೆಯಾಗಿ 1,756.94 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.33ರಷ್ಟು ಏರಿಕೆಯಾಗಿ 22.66 ಯುಎಸ್ ಡಾಲರ್ ಆಗಿದೆ.

ಭಾರತದ ಮಾರುಕಟ್ಟೆಯಲ್ಲಿ ಇಳಿಮುಖಗೊಂಡಿದ್ದ ಹಳದಿ ಲೋಹದ ಬೆಲೆ ಸತತ ಮೂರು ದಿನಗಳಿಂದ ಏರಿಕೆಯಾಗುತ್ತಿದೆ. ಶನಿವಾರ (ಅ.09) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,050 ರೂಪಾಯಿಗೆ ಸ್ಥಿರವಾಗಿದ್ದು, ಶುದ್ಧ ಚಿನ್ನ 10 ಗ್ರಾಂ 50,240 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 61,800 ರೂಪಾಯಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+