Infographics: ಬೆಂಗಳೂರು ಮಳೆ ಆರ್ಭಟ, ಯಾವ ಏರಿಯಾದಲ್ಲಿ ಎಷ್ಟು ಮಳೆ?
ಬೆಂಗಳೂರು ಜೂ.18: ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಮುಂಗಾರು ಮಾರುತಗಳು ಈ ವಾರಾಂತ್ಯದಲ್ಲಿ ಬೆಂಗಳೂರಿನ ಆಗಸದಲ್ಲಿ ಜಂಗೀಕುಸ್ತಿ ಇಳಿದಂತೆ ಕಾಣುತ್ತಿದೆ. ಒಂದು ರಾತ್ರಿ ಮಳೆಗೆ ಎರಡು ಜೀವಗಳು ಅಸುನೀಗಿವೆ. ಹಲವೆಡೆ ಆಸ್ತಿ ಪಾಸ್ತಿ ನಾಶಗೊಂಡಿವೆ. ಮುಂಗಾರು ಮಳೆ ಸ್ವಾಗತಿಸಲು ಸಜ್ಜಾಗದ ಬಿಬಿಎಂಪಿ ನಮಗೆ ಮಳೆ ಸಂಬಂಧಿಸಿದಂತೆ ದೂರುಗಳು ಹೆಚ್ಚಾಗಿ ಬಂದಿಲ್ಲ ಎಂದು ಸುಮ್ಮನಾಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾದೇವಪುರ ವಲಯ ವ್ಯಾಪ್ತಿಯೊಂದರಲ್ಲೇ ಅತ್ಯಧಿಕ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ಕೆ.ಆರ್ ಪುರದಲ್ಲಿನ ಕೃಷ್ಣ ಥಿಯೇಟರ್‌ನ ಗೋಡೆ ಕುಸಿದಿದೆ. ಮಹಾದೇವಪುರದಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಿಥುನ್ ಎಂಬಾತ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ರಾಮಮೂರ್ತಿ ನಗರದ ಚರ್ಚ್ ರಸ್ತೆಯ ಅಂಬೇಡ್ಕರ್ ನಗರದಲ್ಲಿ ರಾಜಕಾಲುವೆ ತ್ಯಾಜ್ಯದಿಂದ ಕಟ್ಟಿಕೊಂಡು ಮಳೆ ನೀರು ರಸ್ತೆಗೆ ಮತ್ತು ಸುಮಾರು ಹತ್ತು ಮನೆಗಳಿಗೆ ನುಗ್ಗಿದೆ. ಶಿವಾನಂದ ವೃತ್ತ, ಓಕಳಿಪುರಂ, ಯಲಹಂಕದಲ್ಲಿ ರಸ್ತೆ ಅಂಡರ್ ಪಾಸ್‌ಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು. ವಾಹನ ಸವಾರರು ಸಂಚರಿಸಲು ಪರದಾಡಿದರು. ತ್ಯಾಜ್ಯದಿಂದ ಬ್ಲಾಕ್ ಆದ ಪರಿಣಾಮ ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು.

ಯಲಹಂಕ, ಮಹಾದೇವಪುರ, ಕೆ.ಆರ್ ಪುರಂ, ಮೆಜೆಸ್ಟಿಕ್ ಸುತ್ತಮುತ್ತ, ಕಾಟನ್ ಪೇಟೆ, ವಿದ್ಯಾರಣ್ಯಪುರ, ಕೆ.ಆರ್ ಮಾರುಕಟ್ಟೆ, ಟೌನ್ ಹಾಲ್, ರಾಜಾಜಿನಗರ, ನಾಯಂಡಹಳ್ಳಿ ಸೇರಿದಂತೆ ವಿವಿಧೆಡೆ ಮುಖ್ಯರಸ್ತೆಗಳಲ್ಲೇ ಮಳೆ ನೀರು ತುಂಬಿ ಹರಿದಿದೆ. ಅದರಲ್ಲೇ ವಾಹನ ಸವಾರರು ಸಂಚರಿಸಿದ್ದಾರೆ.
ಮಹಾದೇವಪುರ ವ್ಯಾಪ್ತಿಯ ಹೊರಮಾವು ವೊಂದರಲ್ಲೇ ಅತ್ಯಧಿಕ 146 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ದೊಡ್ಡಾನೆಕ್ಕುಂದಿ 106 ಮಿ.ಮೀ, ಎಚ್ ಎ ಎಲ್ ವಿಮಾನ ನಿಲ್ದಾಣ 103 ಮಿ.ಮೀ., ಯಲಹಂಕ ಮತ್ತು ಜಕ್ಕೂರು ತಲಾ 88 ಮಿ.ಮೀ., ಅಟ್ಟೂರ 86ಮಿ.ಮೀ., ಕೊಡಿಗೇಹಳ್ಳಿ 73ಮಿ.ಮೀ., ರಾಜ್ ಮಹಲ್ ಗುಟ್ಟಹಳ್ಳಿ 68 ಮಿ.ಮೀ., ಕೆ.ಆರ್ ಪುರಂ 77ಮಿ.ಮೀ., ಹೂಡಿ 72ಮಿ.ಮೀ., ಕುಶಾಲನಗರ 33ಮಿ.ಮೀ., ವಿಶ್ವನಾಥ ನಾಗೇನಹಳ್ಳಿ 32ಮಿ.ಮೀ, ನಾಗಪುರ 29ಮಿ. ಮೀ. ಮಳೆ ದಾಖಲಾಗಿದೆ.

ಹೊಸಕೆರೆಹಳ್ಳಿ, ಬನಶಂಕರಿ, ವಿದ್ಯಾಪೀಠ, ಬಸವನಗುಡಿ, ನಾಯಂಡನಹಳ್ಳಿ, ವಿಜಯನಗರ, ಕೆಂಗೇರಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಶನಿವಾರ ಸಂಜೆ ಕೂಡಾ ಮಳೆ ಸುರಿಯುತ್ತಿದೆ. ಭಾನುವಾರವೂ ಮಳೆ ಬೆಂಗಳೂರಿನ ಹಲವೆಡೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ತಿಳಿಸಿದೆ.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications