ದೆಹಲಿ ರೇಪ್ ತಪ್ಪಿತಸ್ಥರನ್ನು ನೇಣಿಗೆ ಹಾಕಿ : ಅಭಿಮತ
ನವದೆಹಲಿ, ಸೆ.11: ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಅಪರಾಧಿಗಳಿಗೆ ಜೀವಿಸುವ ಯಾವ ಹಕ್ಕು ಇಲ್ಲ. ಅವರನ್ನು ತಕ್ಷಣವೇ ನೇಣಿಗೆ ಹಾಕಿ ಎಂದು ನಿರ್ಭಯಾ ತಂದೆ ಸೇರಿದಂತೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಬಂದಿವೆ.
ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಯೋಗೇಶ್ ಖನ್ನ ಅವರು ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.
23 ವರ್ಷದ ವಿದ್ಯಾರ್ಥಿನಿ ಮೇಲೆ 6 ಮಂದಿ ದುಷ್ಟರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಧಿತೆ ನಿರ್ಭಯಾ/ದಾಮಿನಿ ಸಿಂಗಾಪುರದಲ್ಲಿ ಮೃತಪಟ್ಟಿದ್ದರು. ದೆಹಲಿ ಪೊಲೀಸರು ಒಟ್ಟು ಆರು ಮಂದಿ ವಿರುದ್ಧ ಸದರಿ ವಿದ್ಯಾರ್ಥಿನಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂಬಂಧ ಫೆ. 2ರಂದು ಆರೋಪಪಟ್ಟಿ ದಾಖಲಿಸಿದ್ದರು. ಆರು ಜನರಲ್ಲಿ ರಾಮ್ ಸಿಂಗ್ ಎಂಬಾತ ಜೈಲಿನಲ್ಲಿ ಮೃತಪಟ್ಟಿದ್ದರೆ, ಮತ್ತೊಬ್ಬ ಬಾಲಾಪರಾಧಿ ಎಂದು ಪರಿಗಣಿಸಲಾಗಿದೆ. [ದೋಷಿಗಳ ಪರಿಚಯ ಇಲ್ಲಿದೆ]
ಸಾಮೂಹಿಕ ಅತ್ಯಾಚಾರಗೈದು ಅಮಾನುಷವಾಗಿ ಹತ್ಯೆ ಮಾಡಿದ ನಾಲ್ಕು ಮಂದಿ ಆರೋಪಿಗಳಿಗೆ ಅಜೀವ ಕಾರಾಗೃಹ ಶಿಕ್ಷೆ ನೀಡಬೇಕೇ ಅಥವಾ ಗಲ್ಲು ಶಿಕ್ಷೆ ನೀಡಬೇಕೇ ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಚರ್ಚೆ ನಡೆಯುತ್ತಿದೆ.
ಸುಮಾರು 9 ತಿಂಗಳ ಕಾಲ ನಡೆದ ವಿಚಾರಣೆ ಬಳಿಕ ನಿನ್ನೆ ಆರೋಪಿಗಳು ತಪ್ಪಿತಸ್ಥರೆಂದು ದೆಹಲಿ ಕೋರ್ಟ್ ತೀರ್ಪು ನೀಡಿತ್ತು. ಅಸಹಾಯಕ ಯುವತಿಯನ್ನು ಹಿಂಸಿಸಿ ಹತ್ಯೆ ಮಾಡಿದ್ದಾರೆ ಎಂದು ನ್ಯಾಯಾಧೀಶ ಯೋಗೇಶ್ ಖನ್ನಾ ತೀರ್ಪು ನೀಡಿದ ಸಂದರ್ಭದಲ್ಲಿ ಹೇಳಿದ್ದರು. ಟ್ವಿಟ್ಟರ್ ನಲ್ಲಿ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ಪ್ರತಿಕ್ರಿಯೆಗಳ ಅಸಮಗ್ರ ಸಂಗ್ರಹ ಇಲ್ಲಿದೆ ನೋಡಿ...

ಆರೋಪಿಗಳು ಇವರು
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ಒಗ್ಗೂಡಿಸಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವಂತೆ ಮಾಡಿದೆ.
ದೆಹಲಿಯಲ್ಲಿ ಪೈಶಾಚಿಕ ಕೃತ್ಯ ಎಸಗಿದ ತಪ್ಪಿತಸ್ಥರಾದ ರಾಮ್ ಸಿಂಗ್ (ಮೃತಪಟ್ಟಿದ್ದಾನೆ), ಮುಕೇಶ್ ಸಿಂಗ್, ವಿಜಯ್ ಶರ್ಮ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ತಪ್ಪಿತಸ್ಥರಾಗಿದ್ದಾರೆ. ಮತ್ತೊಬ್ಬ ಬಾಲಾಪರಾಧಿಯಾಗಿದ್ದು ಆತ ಕೂಡಾ ತಪ್ಪಿತಸ್ಥ ಎಂದು ಕೋರ್ಟ್ ಘೋಷಿಸಿದೆ.
|
ಕಠಿಣ ಶಿಕ್ಷೆಗೆ ಆಗ್ರಹ
ಮಹಿಳೆ ಮೇಲೆ ಘೋರ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಆಗ್ರಹ
rnAnything less than a death sentence for the heinous Delhi gang-rape accused would be a historic judicial blunder! #RopeTheRapist
— Vikas Sharma (@wicaz) September 11, 2013
ಕಾನೂನಿನ ಬೆಲೆ
ದೆಹಲಿ ಅತ್ಯಾಚಾರ ಪ್ರಕರಣದ ನಾಲ್ವರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡದಿದ್ದರೆ ಕಾನೂನಿನ ಮೇಲೆ ಜನರಿಗೆ ನಂಬಿಕೆ ಹೊರಟು ಹೋಗುತ್ತದೆ
|
ಅಪರಾಧಿಗಳ ಪರ ವಾದ
ಅಪರಾಧಿಗಳ ಪರ ವಕೀಲರು ಇವರುಗಳು ವೃತ್ತಿಪರ ಕ್ರಿಮಿನಲ್ ಗಳಲ್ಲ ಎಂದು ವಾದಿಸಿರುವುದು ಜನಕ್ಕೆ ಸಿಟ್ಟು ತರಿಸಿದೆ.
|
ದುರಂತ ಸತ್ಯ
ಬಹುತೇಕ ಹೆಣ್ಣು ಮಕ್ಕಳಿಗಿಂತ ಬಾಲಾಪರಾಧಿಗಳು, ಉಗ್ರರು ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ.
|
ನೇಣಿಗೆ ಹಾಕಿ
ಅಪರಾಧಿಗಳನ್ನು ನೇಣಿಗೆ ಹಾಕಿ ಎಂದ ನಟಿ ಪ್ರೀತಿ ಜಿಂಟಾ
|
ಗೃಹ ಸಚಿವರಿಗೂ ತೊಂದರೆ
ಕೋರ್ಟ್ ನಿರ್ಣಯ ಪ್ರಶ್ನಿಸಿದರೆ ಶಿಂಧೆ ಅವರಿಗೂ ತೊಂದರೆ ತಪ್ಪಿದ್ದಲ್ಲ
|
ಪ್ರಕರಣ ವಿಳಂಬದ ಬಗ್ಗೆ
ದೆಹಲಿ ಅತ್ಯಾಚಾರ ಪ್ರಕರಣ ನಡೆದು ಹಲವು ತಿಂಗಳುಗಳ ನಂತರ ಕೊನೆಗೂ ತೀರ್ಪು ಹೊರಬೀಳುತ್ತಿದೆ. ಆದರೆ, ಇಷ್ಟು ವಿಳಂಬ ಏಕೆ ಎಂದು ಜನ ಪ್ರಶ್ನಿಸಿದ್ದಾರೆ.
|
ಪ್ರಕರಣ ವಿಳಂಬದ ಬಗ್ಗೆ ಟ್ವೀಟ್
ನ್ಯಾಯ ಬೇಗ ಸಿಗಬೇಕಿದೆ. ಎಲ್ಲರನ್ನು ನೇಣು ಹಾಕಿಬಿಡಿ
|
ತ್ವರಿತ ಗತಿ ನ್ಯಾಯಾಲಯ
ತ್ವರಿತ ಗತಿ ನ್ಯಾಯಾಲಯ ಸಾಲಲ್ಲ ನಮಗೆ ಸೂಪರ್ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬೇಕು
|
ಡಿಫೆನ್ಸ್ ಲಾಯರ್ ವಿರುದ್ಧ ಕಿಡಿ
ಅಪರಾಧಿಗಳನ್ನು ಅಮಾಯಕರು ಎಂದು ಹೇಳಿರುವ ಡಿಫೆನ್ಸ್ ಲಾಯರ್ ವಿರುದ್ಧ ಜನರ ಆಕ್ರೋಶ

ಡಿಫೆನ್ಸ್ ಲಾಯರ್
ನವದೆಹಲಿ: ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಅವರು ಮಾಧ್ಯಮಗಳ ಮುಂದೆ PTI Photo by Kamal Singh

ವಕೀಲರ ಮೇಲೆ ಹಲ್ಲೆ
ನವದೆಹೆಲಿ: ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳು ಅಮಾಯಕರು ಎಂದ ವಕೀಲ ಎಪಿ ಸಿಂಗ್ ಮೇಲೆ ಹಲ್ಲೆ ಮಾಡಲು ಮುಂದಾದ ವ್ಯಕ್ತಿ.

ಸಾರ್ವಜನಿಕರ ಪ್ರತಿಭಟನೆ
ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾಕೇತ್ ಕೋರ್ಟ್ ಎದುರು ಸಾರ್ವಜನಿಕರು ಆಗ್ರಹಿಸಿದರು.

ಸಾರ್ವಜನಿಕರ ಆಗ್ರಹ
ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾಕೇತ್ ಕೋರ್ಟ್ ಎದುರು ಸಾರ್ವಜನಿಕರು ಆಗ್ರಹಿಸಿದರು.

ಅಪರಾಧಿಗಳ ಪಯಣ
ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸುರಕ್ಷಿತವಾಗಿ ಸಾಕೇತ್ ಕೋರ್ಟಿನಿಂದ ಕರೆದೊಯ್ಯಲಾಗಿದೆ.












Click it and Unblock the Notifications