• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇದಾರನಾಥಸ್ವಾಮಿಗೆ ಪೂಜೆ ಆರಂಭ; ಯಾತ್ರೆ ಇನ್ನೂ ಇಲ್ಲ

By Srinath
|

ಡೆಹ್ರಾಡೂನ್, ಸೆ.11- ಹಿಂದೆಂದೂ ಕಂಡು ಕೇಳರಿಯದ ಹಿಮಾಲಯ ಸುನಾಮಿಯಲ್ಲಿ ನಲುಗಿ ಹೋಗಿದ್ದ ಪುರಾಣಪ್ರಸಿದ್ಧ ಕೇದಾರನಾಥದಲ್ಲಿ ಶುಭವಾ ಅಂತ ಮಹಾಶಿವನಿಗೆ ಇಂದು ಬುಧವಾರ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಪೂಜೆ ಪುನಸ್ಕಾರಗಳು ಮತ್ತೆ ನೆರವೇರಿದೆ.

ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರೇ ಖುದ್ದು ಪೂಜಾಕೈಂಕರ್ಯದಲ್ಲಿ ಭಾಗವಹಿಸಬೇಕಿತ್ತಾದರೂ ಪ್ರತಿಕೂಲ ಹವಾಮಾನದಿಂದಾಗಿ ಅವರ ಹೆಲಿಕಾಪ್ಟರ್ ಮೇಲೇಳಲಿಲ್ಲ. ಹಾಗಾಗಿ ಕೇದಾರನಾಥಕ್ಕೆ ತೆರಳಿ ಈಶ್ವರ ಪೂಜೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಉತ್ತರಖಂಡದಲ್ಲಿ ಸುರಿದ ಮಹಾಮಳೆಯಿಂದ ತೀರ್ಥಯಾತ್ರಿಗಳ ಬದುಕಷ್ಟೇ ಅಲ್ಲ ಸ್ಥಳೀಯರ ಮನೆಮಠ ಅಲ್ಲದೆ ಪವಿತ್ರ ಕೇದಾರನಾಥ ದೇಗುಲಕ್ಕೇ ಭಾರಿ ಧಕ್ಕೆಯೊದಗಿದ್ದ ಕಾರಣ 86 ದಿನಗಳ ಬಳಿಕ (ಜೂನ್ 16ರ ನಂತರ) ಕೇದಾರನಾಥ ದೇವಾಲಯದಲ್ಲಿ ಪೂಜೆ ಮತ್ತು ಪ್ರಾರ್ಥನಾ ಕಾರ್ಯಗಳು ಬುಧವಾರದಿಂದ ಪುನಾರಂಭಗೊಂಡಿದೆ.

 ಪೂಜೆ-ಪ್ರಾರ್ಥನೆಯಷ್ಟೇ; ತೀರ್ಥಯಾತ್ರೆ ಇನ್ನೂ ಇಲ್ಲ

ಪೂಜೆ-ಪ್ರಾರ್ಥನೆಯಷ್ಟೇ; ತೀರ್ಥಯಾತ್ರೆ ಇನ್ನೂ ಇಲ್ಲ

ಆದರೆ ಗಮನಿಸಿ ಕೇದಾರನಾಥದಲ್ಲಿ ಪೂಜೆ-ಪ್ರಾರ್ಥನೆ ಕಾರ್ಯಗಳಷ್ಟೇ ಆರಂಭಗೊಳ್ಳಲಿದ್ದು, ರಸ್ತೆ ಸಹಿತ ಮೂಲಸೌಕರ್ಯಗಳೆಲ್ಲವೂ ತೀರಾ ಹಾನಿಗೀಡಾಗಿರುವುದರಿಂದ, ಭಕ್ತರಿಗೆ ದೇವಸ್ಥಾನಕ್ಕೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನಿಂದ ಪುನರಾರಂಭವಾಗುವ ಪೂಜೆ ಇನ್ನು ಮುಂದೆ ನಿರಂತರವಾಗಿ ನೆರವೇರಲಿದೆ. 24 ಮಂದಿ ಅರ್ಚಕರು ಸಹಾಯಕ ಸಿಬ್ಬಂದಿ ಈ ಪೂಜಾ ಕೈಂಕರ್ಯಗಳನ್ನು ಸತತವಾಗಿ ನೆರವೇರಿಸಲಿದೆ.

24 ಮಂದಿ ತಂಡದಿಂದ ವಿಜೃಂಭಣೆಯ ಪೂಜೆ

24 ಮಂದಿ ತಂಡದಿಂದ ವಿಜೃಂಭಣೆಯ ಪೂಜೆ

ಕೇದಾರನಾಥ-ಬದರೀನಾಥ ಸಮಿತಿ ಮತ್ತು ಆಡಳಿತಾತ್ಮಕ ಅಧಿಕಾರಿಗಳ ತಂಡದ ಮೇಲ್ವಿಚಾರಣೆಯಲ್ಲಿ ಗರ್ಭಗುಡಿಯನ್ನು ಮರುನಿರ್ಮಿಸಲಾಗಿದೆ. ದೇವಸ್ಥಾನದ ಪವಿತ್ರೀಕರಣ ಹಾಗೂ ದೋಷ ಪರಿಹಾರ ಕಾರ್ಯಕ್ರಮದ ಬಳಿಕ ಅರ್ಚಕರು ಮತ್ತು ದೇವಸ್ಥಾನ ಸಮಿತಿ ಅಧಿಕಾರಿಗಳು ಸೇರಿದಂತೆ 24 ಸದಸ್ಯರ ತಂಡದ ಸಮ್ಮುಖದಲ್ಲಿ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಪುನಾರಂಭಗೊಳ್ಳಲಿವೆ.

ಖುದ್ದು ಮುಖ್ಯಮಂತ್ರಿ ಪೂಜೆಯಲ್ಲಿ ಭಾಗಿ

ಖುದ್ದು ಮುಖ್ಯಮಂತ್ರಿ ಪೂಜೆಯಲ್ಲಿ ಭಾಗಿ

ಪೂಜಾ ಕಾರ್ಯಕ್ರಮದ ಅಂತಿಮ ಸಿದ್ಧತೆಗಾಗಿ ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರಾದ ರಾವಲ್ ಭೀಮಾ ಶಂಕರಲಿಂಗ ಶಿವಾಚಾರ್ಯ ಅವರು ಹೆಲಿಕಾಪ್ಟರ್ ಮೂಲಕ ದೇವಾಲಯಕ್ಕೆ ಆಗಮಿಸಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ.

ಕೇದರನಾಥ ಯಾತ್ರೆ ಬಗ್ಗೆ ಸೆ 30 ಮಹತ್ವದ ಸಭೆ:

ಕೇದರನಾಥ ಯಾತ್ರೆ ಬಗ್ಗೆ ಸೆ 30 ಮಹತ್ವದ ಸಭೆ:

ಈ ಮಧ್ಯೆ, ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಕೇದಾರನಾಥ ಸ್ವಾಮಿಯ ಭಕ್ತರಲ್ಲಿ ಉತ್ಸಾಹ ಕಡಿಮೆಯಾಗಿಲ್ಲ. ಈಗಲೂ ಕೇದಾರನಾಥ ಯಾತ್ರೆಗೆ ಭಾರಿ ಬೇಡಿಕೆಯಿದೆ. ಆದರೆ ಇಲ್ಲಿನ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಇಲ್ಲಿನ ಹವಾಮಾನ ಮತ್ತು ground realities ಸುಧಾರಿಸುತ್ತಿದ್ದಂತೆ ಭಕ್ತರಿಗೆ ಮತ್ತೆ ಅವಕಾಶ ಕಲ್ಪಿಸಲಾಗುವುದು. ಈ ಸಂಬಂಧ ಇದೇ ಸೆಪ್ಟೆಂಬರ್ 30ಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭಕ್ತಾದಿಗಳಿಗೆ ಕೇದರನಾಥ ಯಾತ್ರೆ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಹುಗುಣರು ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After devastating Himalaya Tsunami in Mid June at Kedarnath, Dehradun, Uttarakhand puja is to begin today Sept 11 to lord Shiva at Kedarnath shrine but no resumption of yatra. only a select group of people including members of temple committee, NDRF, policemen and officers, would be present on the date. "The Puja will begin at 7 am and continue till 11 am," Chief Minister Vijay Bahuguna has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more