• search
  • Live TV
keyboard_backspace

ರಾಜ್ಯದಲ್ಲಿ ಆನ್‌ಲೈನ್ ಲೋನ್ ಆಪ್‌ಗಳ ವಿರುದ್ಧ ಸಮರಕ್ಕೆ ಸಿಸಿಬಿ ಸಿದ್ಧತೆ

ಬೆಂಗಳೂರು, ಜನವರಿ 01: ಕೇಳಿದ ಕೂಡಲೇ ಸಾಲ ಕೊಟ್ಟು ಮಾನ ತೆಗೆಯುವ ಆನ್‌ಲೈನ್ ಆಪ್‌ಗಳ ಅಕ್ರಮ ಜಾಲಾಡಲಿಕ್ಕೆ ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೈಬರಾಬಾದ್ ಪೊಲೀಸರ ಮಾದರಿಯಲ್ಲಿಯೇ ರಾಜ್ಯದಲ್ಲಿ ಆನ್‌ಲೈನ್ ಲೋನ್ ಆಪಗಳ ಮೂಲಕ ನಡೆದಿರುವ ವಹಿವಾಟಿನ ಮೂಲ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ತುರ್ತು ಸಾಲ ನೀಡುವ ಆನ್‌ಲೈನ್ ಅಕ್ರಮ ಲೋನ್ ಆಪಗಳು ದೇಶಾದ್ಯಂತ 21 ಸಾವಿರ ಕೋಟಿ ಮೊತ್ತದ ವಹಿವಾಟು ನಡೆಸಿರುವ ಆಘಾತಕಾರಿ ಸಂಗತಿಯನ್ನು ಸೈಬರಾಬಾದ್ ಪೊಲೀಸರು ಹೊರಗೆಡವಿದ್ದಾರೆ. ಚೀನಾ ಮೂಲದ ಝೂ ವೇ ಹೇಳಿಕೆ ಪ್ರಕಾರ ಭಾರತದಲ್ಲಿ ನಾಲ್ಕು ಕಂಪನಿಗಳು ಸುಮಾರು 1.4 ಕೋಟಿ ವಹಿವಾಟು ನಡೆಸಿ 21 ಸಾವಿರ ಕೋಟಿ ಮೊತ್ತದ ಅಕ್ರಮ ವಹಿವಾಟು ನಡೆದಿದೆ ಎನ್ನಲಾಗಿದೆ. ಇದು ಇಡೀ ದೇಶದ ಪೊಲೀಸರಿಗೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಪೇಮೆಂಟ್ ಗೇಟ್ ವೇ ಹಾಗೂ ಎಚ್‌ಡಿಎಫ್ ಸಿ ಬ್ಯಾಂಕ್ ಖಾತೆಗಳ ಮೂಲಕ ಕೇವಲ ಆರು ತಿಂಗಳಲ್ಲಿ ಈ ವಹಿವಾಟು ನಡೆದಿದೆ.

ಆನ್‌ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!

ಕೇವಲ ಆರು ತಿಂಗಳಲ್ಲಿ ಸಾವಿರರು ಕೋಟಿ ವಹಿವಾಟು ನಡೆದಿದ್ದು, ಇದರಲ್ಲಿ 1.4 ಕೋಟಿ ಟ್ರಾಂಜಕ್ಷನ್ ನಡೆದಿದೆಯಾ ಎಂಬುದರ ಮಾಹಿತಿ ಗೊತ್ತಿಲ್ಲ. ಆದರೆ ಹಣ ಎಲ್ಲಿಂದ ಬಂದಿದೆ. ಹೇಗೆ ಹೋಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ಹವಾಲಾ ಮೂಲಕ ವಹಿವಾಟು ನಡೆದಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೈದರಾಬಾದ್ ಜಂಟಿ ಪೊಲೀಸ್ ಆಯುಕ್ತ ಅವಿನಾಶ್ ಮೊಹಾಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೈದರಾಬಾದ್ ಮತ್ತು ಸೈಬರಾಬದ್ ನಲ್ಲಿ ಅಕ್ರಮ ಆನ್‌ಲೈನ್ ಲೋನ್ ಆಪ್‌ ಗಳ ಜಾಲ ಹೊರ ಬರುತ್ತಿದ್ದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಕೂಡ ಅವುಗಳ ಜಾಡು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ನಾಲ್ಕು ಆನ್‌ಲೈನ್ ಲೋನ್ ಆಪ್‌ ಗಳ ಎಲ್ಲಾ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ.

ಸಾಕಷ್ಟು ಮಂದಿ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರಾಜ್ಯದಲ್ಲಿ ಸಾಲ ವಿತರಿಸಿರುವ ಆನ್‌ಲೈನ್ ಆಪ್ ಗಳ ಪಟ್ಟಿ ಸಿದ್ದಪಡಿಸಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ಆನ್‌ಲೈನ್ ಆಪ್‌ ಗಳ ಪಟ್ಟಿ ಸಿದ್ಧವಾಗಿದೆ. ಅತಿ ಶೀಘ್ರದಲ್ಲಿಯೇ ಆಪ್‌ ಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಸದ್ಯಕ್ಕೆ ಹೈದರಾಬಾದ್ ಪೊಲೀಸರು ಪತ್ತೆ ಮಾಡಿರುವ ಅಕ್ರಮ ಆನ್‌ಲೈನ್ ಆಪ್‌ ಗಳ ವಿವರ ಪಡೆಯಲಿದ್ದಾರೆ. ಅವುಗಳ ಪಟ್ಟಿಯಲ್ಲಿ ಇಲ್ಲಿರುವ ಆಪ್ ಗಳ ಬಗ್ಗೆ ಖಚಿತ ಪಡಿಸಿಕೊಂಡು ಲೋನ್ ಆಪ್ ಗಳ ಅಕ್ರಮ ವಿರುದ್ಧ ಕ್ರಮ ಜರುಗಿಸಲಿದ್ದಾರೆ.

ಸರಣಿ ದೂರು: ಸಿಸಿಬಿ ಪೊಲೀಸರು ಆನ್‌ಲೈನ್ ಲೋನ್ ಆಪ್ ಗಳ ವಿರುದ್ಧ ಕೇಸು ದಾಖಲಿಸುತ್ತಿದ್ದಂತೆ ದುಬಾರಿ ಬಡ್ಡಿ ಪಾವತಿಸಿ ಮೋಸ ಹೋಗಿರುವ ಸಾಕಷ್ಟು ಮಂದಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ತ ಸಿಐಡಿ ಸೈಬರ್ ವಿಭಾಗದ ಪೊಲೀಸರು ಸಹ ಆನ್‌ಲೈನ್ ಲೋನ್ ಆಪ್‌ ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

English summary
The CCB police have made arrangements for the illegal disposal of lending and de-mining online ops.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X