ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ ಹೆಂಡ್ತಿ ಓಡಿ ಹೋಗೋಕೆ ನೀನೇ ಕಾರಣ; ಗುಜರಾತ್ ಮಿನಿಸ್ಟರ್ ವಿರುದ್ಧ ಇದೇನು ಪ್ರಕರಣ?

|
Google Oneindia Kannada News

ನವದೆಹಲಿ, ಆಗಸ್ಟ್ 1: ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಹಿಳೆೆಯರ ಮೇಲಿನ ದೌರ್ಜನ್ಯದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಸ್ತಾವನೆ ಸಲ್ಲಿಸಿತು. ಟಿಎಂಸಿ ಒತ್ತಾಯಕ್ಕೆ ಗುಜರಾತ್ ಸಚಿವರ ವಿರುದ್ಧದ ಅತ್ಯಾಚಾರ ಪ್ರಕರಣ ಕಾರಣವಾಯಿತು.

"ನನ್ನ ಹೆಂಡತಿ ಮೇಲೆ ಆ ಮಿನಿಸ್ಟರ್ ಮೇಲಿಂದ ಮೇಲೆ ಅತ್ಯಾಚಾರ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಸ್ವಾಮಿ, ಬರೋಬ್ಬರಿ ಆರು ವರ್ಷಗಳಿಂದ ಅತ್ಯಾಚಾರ ನಡೆಯುತ್ತಲೇ ಇದೆ. ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ನನ್ನ ಹೆಂಡತಿ ನನ್ನ ಮನೆಯಲ್ಲೇ ಇರಲಿಲ್ಲ. ಆ ಮಿನಿಸ್ಟರ್ ಒಂದೂವರೆ ತಿಂಗಳು ನನ್ನ ಹೆಂಡತಿಯನ್ನು ಕೂಡಿ ಹಾಕಿಟ್ಟುಕೊಂಡಿದ್ದರು," ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ.

ಭಾರತದಲ್ಲಿ ಮದ್ಯಪಾನ ಬಿಟ್ಟರೆ ಅತ್ಯಾಚಾರ, ಕೊಲೆ, ಸುಲಿಗೆ ಕಡಿಮೆ ಆಗುತ್ತಾ!?ಭಾರತದಲ್ಲಿ ಮದ್ಯಪಾನ ಬಿಟ್ಟರೆ ಅತ್ಯಾಚಾರ, ಕೊಲೆ, ಸುಲಿಗೆ ಕಡಿಮೆ ಆಗುತ್ತಾ!?

ಗುಜರಾತ್ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಅರ್ಜುನ್ ಸಿನ್ಹಾ ಚೌಹಾಣ್ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಸಖತ್ ಸುದ್ದಿ ಆಗುತ್ತಿದೆ. ಅಸಲಿಗೆೆ ಗುಜರಾತಿನಲ್ಲಿ ನಡೆದಿದ್ದೇನು?, ಬಿಜೆಪಿ ಶಾಸಕನ ವಿರುದ್ಧ ಮಹಿಳೆಯ ಗಂಡ ಮಾಡುತ್ತಿರುವ ಆರೋಪವೇನು?, ತಮ್ಮ ವಿರುದ್ಧದ ಆರೋಪದ ಕುರಿತು ಮಿನಿಸ್ಟರ್ ಹೇಳುವುದೇನು?, ಇದೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವರ್ಷನ್ ಏನಿದೆ? ಸಂಸತ್ ಉಭಯ ಕಲಾಪಗಳಲ್ಲಿ ಈ ಅತ್ಯಾಚಾರದ ಪ್ರಕರಣ ಸುದ್ದಿ ಆಗುತ್ತಿರುವುದೇಕೆ? ಎಂಬುದರ ಕುರಿತು ಸಂಪೂರ್ಣ ವರದಿಗಾಗಿ ಮುಂದೆ ಓದಿ.

ಗುಜರಾತ್ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪವೇನು?

ಗುಜರಾತ್ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪವೇನು?

ಗ್ರಾಮೀಣಾಭಿವೃದ್ಧಿ ಸಚಿವ ಅರ್ಜುನ್‌ ಸಿನ್ಹಾ ಚೌಹಾಣ್ ತನ್ನ ಪತ್ನಿಯನ್ನು ಅಕ್ರಮವಾಗಿ ಬಂಧಿಸಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಹಲ್ದರ್ವಾಸ್ ಗ್ರಾಮದ ಮಾಜಿ ಸರಪಂಚರೊಬ್ಬರು ಡಿಎಸ್‌ಪಿಗೆ ದೂರು ಸಲ್ಲಿಸಿದ್ದಾರೆ. "ಸಚಿವರು ತಮ್ಮ ಅಧಿಕಾರವನ್ನು ಬಳಸಿಕೊಂಡು ನನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಂಡಿದ್ದು, ಪದೇ ಪದೇ ಅತ್ಯಾಚಾರವೆಸಗಿದ್ದಾರೆ," ಎಂದು ವ್ಯಕ್ತಿ ಆರೋಪಿಸಿದ್ದಾರೆ.

"ನನ್ನ ಹೆಂಡತಿ ಓಡಿ ಹೋಗಲು ಸಚಿವರೇ ಕಾರಣ"

"ಗುಜರಾತ್ ಸಚಿವರು ನನ್ನ ಹೆಂಡತಿ ಮೇಲೆ ಅತ್ಯಾಚಾರ ನಡೆಸಿದ್ದೂ ಅಲ್ಲದೇ ಬೆದರಿಕೆ ಹಾಕಿದ್ದಾರೆ. ಅರ್ಜುನ್ ಸಿನ್ಹಾ ಚೌಹಾಣ್ ಅವರಿಗೆ ಹೆದರಿದ ನನ್ನ ಪತ್ನಿ ಈಗ ಮನೆಯನ್ನೇ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಹೆಂಡತಿ ಎಲ್ಲಿದ್ದಾಳೆ ಎಂಬುದನ್ನು ಹುಡುಕಿ ಕೊಡಿ, ಸಚಿವರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಿಸಿ," ಎಂಬುದು ದೂರುದಾರನ ಅಳಲು ಆಗಿದೆ. ಇದರ ಮಧ್ಯೆ ಪ್ರಕರಣ ಇದಿಷ್ಟಕ್ಕೇ ಸೀಮಿತವಾಗಿಲ್ಲ.

ನನ್ನ ಹೆಂಡತಿ ಮತ್ತು ಆ ಸಚಿವರ ನಂಟಿಗೆ ಆರು ವರ್ಷ

ನನ್ನ ಹೆಂಡತಿ ಮತ್ತು ಆ ಸಚಿವರ ನಂಟಿಗೆ ಆರು ವರ್ಷ

ಬಿಜೆಪಿ ಶಾಸಕ ಅರ್ಜುನ್ ಸಿನ್ಹಾ ಚೌಹಾಣ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನ್ನ ಹೆಂಡತಿಯ ಮೇಲೆ ನಿರಂತರ ಅತ್ಯಾಚಾರವನ್ನು ಮಾಡುತ್ತಿರುವುದು ಇಂದು ನಿನ್ನೆಯ ಕಥೆಯಲ್ಲ. ಕಳೆದ 2015 ರಿಂದ 2021ರವರೆಗೂ ಸಚಿವರು ನನ್ನ ಹೆಂಡತಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಆಗಿನಿಂದಲೂ ಅಕ್ರಮವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರುದಾರ ಪತಿ ದೂಷಿಸಿದ್ದಾರೆ.

ಅಕ್ರಮವಾಗಿ ಮಹಿಳೆಯನ್ನು ಬಂಧನದಲ್ಲಿಟ್ಟಿದ್ದರೇ ಸಚಿವರು?

ಅಕ್ರಮವಾಗಿ ಮಹಿಳೆಯನ್ನು ಬಂಧನದಲ್ಲಿಟ್ಟಿದ್ದರೇ ಸಚಿವರು?

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವುದು ಗೊತ್ತಿರುವ ಸಂಗತಿ. ಇದೇ ಲಾಕ್ ಡೌನ್ ಸಮಯವನ್ನು ತನ್ನ ಲಾಭಕ್ಕೆ ಬಳಸಿಕೊಂಡ ಸಚಿವ ಅರ್ಜುನ್ ಸಿನ್ಹಾ ಚೌಹಾಣ್, ಮಹಿಳೆೆಯನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದರು. ಒಂದೂವರೆ ತಿಂಗಳ ಕಾಲ ಮನೆಯಲ್ಲಿಟ್ಟುಕೊಂಡು ಅತ್ಯಾಚಾರ ನಡೆಸಿದ್ದರು. ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಚಿವರಷ್ಟೇ ಅಲ್ಲದೇ ಬಿಜೆಪಿಯ ಅಂದಿನ ಜಿಲ್ಲಾಧ್ಯಕ್ಷರು ತಮ್ಮ ಆಪ್ತರೊಂದಿಗೆ ಮಲಗುವಂತೆ ನನ್ನ ಹೆಂಡತಿ ಮೇಲೆ ಒತ್ತಡ ಹೇರುತ್ತಿದ್ದರು ಎಂಬುದು ಮಹಿಳೆಯ ಪತಿ ಮಾಡಿರುವ ಆರೋಪವಾಗಿದೆ.

ಗುಜರಾತ್ ಸಚಿವರ ವಿರುದ್ಧದ ಕೇಸ್ ಬಗ್ಗೆ ಪೊಲೀಸರ ವರ್ಷನ್

ಗುಜರಾತ್ ಸಚಿವರ ವಿರುದ್ಧದ ಕೇಸ್ ಬಗ್ಗೆ ಪೊಲೀಸರ ವರ್ಷನ್

"ಮೆಹಮದಾಬಾದ್ ತಾಲೂಕಿನ ಹಲ್ದರ್ವಾಸ್ ಗ್ರಾಮದಲ್ಲಿ ವಾಸಿಸುವ ವ್ಯಕ್ತಿಯಿಂದ ನಾವು ಅರ್ಜಿಯನ್ನು ಸ್ವೀಕರಿಸಿದ್ದೇವೆ. ಅರ್ಜಿದಾರರ ಪತ್ನಿಯ ಅತ್ಯಾಚಾರ ಮತ್ತು ಅಕ್ರಮ ಬಂಧನದ ಆರೋಪಗಳ ಬಗ್ಗೆ ಪೊಲೀಸರು ಮೊದಲು ಪ್ರಾಥಮಿಕ ತನಿಖೆ ನಡೆಸುತ್ತಾರೆ. ಆರೋಪಗಳು ನಿಜವೆಂದು ಕಂಡುಬಂದರೆ, ಕ್ರಿಮಿನಲ್ ಪ್ರಕ್ರಿಯೆ ಅನುಸರಿಸಲಾಗುವುದು," ಎಂದು ಖೇಡಾ ಎಸ್‌ಎಸ್‌ಪಿ ತಿಳಿಸಿದ್ದಾರೆ.

ಪ್ರತಿಕ್ರಿಯೆಗೆ ಸಿಗುತ್ತಿಲ್ಲ ಸಚಿವ ಅರ್ಜುನ್ ಸಿನ್ಹಾ ಚೌಹಾಣ್

ಪ್ರತಿಕ್ರಿಯೆಗೆ ಸಿಗುತ್ತಿಲ್ಲ ಸಚಿವ ಅರ್ಜುನ್ ಸಿನ್ಹಾ ಚೌಹಾಣ್

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಪತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ಸಚಿವ ಅರ್ಜುನ್ ಸಿನ್ಹಾ ಚೌಹಾಣ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮ ಮತ್ತು ಪೊಲೀಸರ ಕೈಗೆ ಸಿಗದ ಸಚಿವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ ಪ್ರಕರಣದಲ್ಲಿ ಸಚಿವರ ವರ್ಷನ್ ಹೇಗಿದೆ ಎಂಬುದರ ಬಗ್ಗೆ ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ.

ರೇಪ್ ಕೇಸ್ ಕುರಿತು ಚರ್ಚೆಗೆ ಟಿಎಂಸಿ ಹಕ್ಕೊತ್ತಾಯ

ರೇಪ್ ಕೇಸ್ ಕುರಿತು ಚರ್ಚೆಗೆ ಟಿಎಂಸಿ ಹಕ್ಕೊತ್ತಾಯ

ಗುಜರಾತಿನಲ್ಲಿ ಬಿಜೆೆಪಿ ಶಾಸಕ ಹಾಗೂ ಸಚಿವ ಅರ್ಜುನ್ ಸಿನ್ಹಾ ಚೌಹಾಣ್ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಪ್ರಕರಣದ ಕುರಿತು ಚರ್ಚೆಗೆ ಟಿಎಂಸಿ ಒತ್ತಾಯಿಸಿದೆ. ಸಂಸತ್ ಉಭಯ ಕಲಾಪಗಳಲ್ಲಿ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ, ಮಹಿಳೆಯರ ರಕ್ಷಣೆ ಬಗ್ಗೆ ಪ್ರಶ್ನೆ ಮಾಡಲಾಯಿತು. ಕೇಂದ್ರ ಸರ್ಕಾರವು ಮಹಿಳೆೆಯರ ರಕ್ಷಣೆಗೆ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಪ್ರಶ್ನಿಸಿತು. ಇದೇ ವಿಷಯ ಉಭಯ ಕಲಾಪಗಳಲ್ಲಿ ಸದ್ದು ಮಾಡಿ ಸುದ್ದಿಯಾಯಿತು.

English summary
Gujarat's Rural Development Minister and BJP MLA from Mahmedavad Arjunsinh Chauhan has been accused of rape and illegal confinement of a woman. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X