Vinayaka Chaturthi 2023: ಗಣೇಶ ಚತುರ್ಥಿಯ ದಿನ ಚಂದ್ರನನ್ನು ಯಾಕೆ ನೋಡಬಾರದು?
ಗಣೇಶ ಚತುರ್ಥಿಗೂ ಮುನ್ನ ಚಂದ್ರನನ್ನು ನೋಡಬಾರದು. ಗಣೇಶನನ್ನು ನೋಡಿದ ಬಳಿಕ ಚಂದ್ರನನ್ನು ನೋಡಲು ಮನೆಯ ಹಿರಿಯರು ತಿಳಿಸುತ್ತಾರೆ. ಅಷ್ಟಕ್ಕೂ ಗಣೇಶ ಚತುರ್ಥಿಗೂ ಮುನ್ನ ಚಂದ್ರನನ್ನು ಯಾಕೆ ನೋಡಬಾರದು? ಇದಕ್ಕೆ ಕಾರಣ ಇಲ್ಲಿದೆ.
ಈ ವರ್ಷ ಗಣೇಶ ಉತ್ಸವ ಸೆಪ್ಟೆಂಬರ್ 18ರಿಂದ ದೇಶಾದ್ಯಂತ ಪ್ರಾರಂಭವಾಗುತ್ತಿದೆ. ಅನಂತ ಚತುರ್ದಶಿಯ ದಿನದಂದು ಅಂದರೆ ಸೆಪ್ಟೆಂಬರ್ 28 ರಂದು ವಿನಾಯಕ ಜಯಂತಿ ಕೊನೆಗೊಳಿಸಲಾಗುತ್ತದೆ. ಈ ದಿನ ಪ್ರತಿ ಮನೆಯಲ್ಲೂ ಗಣಪತಿ ಬಪ್ಪನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ವಿಶೇಷವಾಗಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ ಬಳಿಕ ವಿಸರ್ಜನೆ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ಕಳಂಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಆದರೆ ಈ ಬಾರಿ ಗಣೇಶ ಚತುರ್ಥಿ ಹಾಗೂ ಕಳಂಕ ಚತುರ್ಥಿ ಎರಡು ದಿನ ಆಚರಿಸಲಾಗುತ್ತದೆ. ಹಾಗಾದರೆ ಕಳಂಕ ಚತುರ್ಥಿ ಮತ್ತು ಗಣೇಶ ಚತುರ್ಥಿ ಯಾವಾಗ?
ಕಳಂಕ ಚತುರ್ಥಿ ಮತ್ತು ಗಣೇಶ ಚತುರ್ಥಿ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಚತುರ್ಥಿ ತಿಥಿ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12:39 ಕ್ಕೆ ಬರುತ್ತದೆ. ಚತುರ್ಥಿ ಸಾಯಂಕಾಲ ಬರುವುದರಿಂದ ಕಳಂಕ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 18 ರಂದು ಆಚರಿಸಲಾಗುತ್ತದೆ.

ಯಾವಾಗ ಚಂದ್ರನನ್ನು ನೋಡಬಾರದು?
ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿ, ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ಕಳಂಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಈ ರಾತ್ರಿ ಚಂದ್ರನನ್ನು ಕಂಡರೆ ಮುಂದೆ ಸುಳ್ಳು ಆರೋಪಕ್ಕೆ ಗುರಿಯಾಗುವ ಭೀತಿ ಎದುರಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗಾಗಿ ನೀವು ಈ ದೋಷವನ್ನು ತಪ್ಪಿಸಲು ಬಯಸಿದರೆ ಚಂದ್ರನನ್ನು ನೋಡಬಾರದು.
ದಂತಕಥೆಯ ಪ್ರಕಾರ, ಒಮ್ಮೆ ಗಣೇಶನು ಚಂದ್ರಲೋಕದಿಂದ ಅನೇಕ ಲಡ್ಡುಗಳೊಂದಿಗೆ ಬರುತ್ತಿದ್ದಾಗ ದಾರಿಯಲ್ಲಿ ಚಂದ್ರದೇವನನ್ನು ಭೇಟಿಯಾದನು. ಗಣೇಶನ ಕೈಯಲ್ಲಿರುವ ಲಡ್ಡುಗಳು ಮತ್ತು ಅವರ ದೊಡ್ಡ ಹೊಟ್ಟೆಯನ್ನು ನೋಡಿ ಚಂದ್ರ ದೇವನು ನಗಲು ಆರಮಭಿಸಿದನು. ಇದರಿಂದ ಕೋಪಗೊಂಡ ಗಣಪತಿಯು ಚಂದ್ರ ದೇವನನ್ನು ಶಪಿಸಿದನು. ನಿನ್ನನ್ನು ನೋಡಿ ನೀನು ತುಂಬಾ ಹೆಮ್ಮೆ ಪಡುತ್ತೀಯಾ ಮತ್ತು ನನ್ನನ್ನು ಅಪಹಾಸ್ಯ ಮಾಡುತ್ತೀಯಾ? ಆದ್ದರಿಂದ ನಾನು ನಿನಗೆ ಕ್ಷಯ ರೋಗ ಬರುವಂತೆ ಶಾಪವನ್ನು ನೀಡಿದ್ದೇನೆಂದು ಶಪಿಸುತ್ತಾನೆ.
ಗಣೇಶ ಚತುರ್ಥಿಯ ಇನ್ನೊಂದು ದಂತಕಥೆಯು ಹೇಳುವ ಪ್ರಕಾರ, ಒಮ್ಮೆ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಸವಾರಿ ಮಾಡುತ್ತಿದ್ದನು. ಮೂಶಿಕನು ಇದ್ದಕ್ಕಿದ್ದಂತೆ ಹಾವೊಂದನ್ನು ನೋಡಿದನು. ಅದನ್ನು ನೋಡಿ ಭಯದಿಂದ ಜಿಗಿದನು. ಈ ಕಾರಣದಿಂದಾಗಿ ಮೂಶಿಕನ ಬೆನ್ನ ಮೇಲಿದ್ದ ಗಣೇಶನು ನೆಲಕ್ಕೆ ಬೀಳುತ್ತಾನೆ. ನಂತರ ಗಣೆಶನು ತಕ್ಷಣ ಎದ್ದು ತನ್ನ ಸುತ್ತಾ ಯಾರಾದರೂ ಇದ್ದಾರೆಯೇ ಎನ್ನುವುದನ್ನು ನೋಡುತ್ತಾನೆ. ಆಗ ಅವನಿಗೆ ಯಾರೋ ನಗುವ ಶಬ್ದ ಕೇಳಿಸಿತು. ಅದು ಚಂದ್ರದೇವನಾಗಿದ್ದ. ಚಂದ್ರದೇವನು ಕ್ಷೀಣಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಗಣೇಶನ ಶಾಪದಂತೆ ಚಂದ್ರ ಕ್ಷೀಣಿಸಲು ಆರಂಭಿಸಿದನು. ಇದರಿಂದ ಆತಂಕಗೊಂಡ ದೇವತೆಗಳು ಗಣೇಶನಿಗೆ ಈ ಬಗ್ಗೆ ವಿವರಿಸಿದರು. ಚಂದ್ರನು ಗಣೇಶನಿಗೆ ಕ್ಷಮೆ ಕೇಳಿದನು.
ಗಣೇಶ ಶಾಪವನ್ನು ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಬದಲಿಗೆ ಕಡಿಮೆ ಮಾಡಬಹುದು. ಪ್ರತೀ ತಿಂಗಳು ನೀವು ಪೂರ್ನ ರೂಪದಲ್ಲಿ ಕಾಣಿಸಿಕೊಳ್ಳುತ್ತೀರಿ. ಜನರು ನಿಮ್ಮನ್ನು ಯಾವಗಲೂ ನೋಡಲು ಸಾಧ್ಯವಾಗುತ್ತದೆ. ಆದರೆ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಯಾರು ನಿಮ್ಮನ್ನು ನೋಡುತ್ತಾರೋ ಅವರು ಸುಳ್ಳು ಕಳಂಕವನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾನೆ. ಆದ್ದರಿಂದ ಇನ್ನು ಸುಳ್ಳು ಕಳಂಕ ಚತುರ್ಥಿ ಎಂಥಲೂ ಕರೆಯುತ್ತಾರೆ.
ಚಂದ್ರ ದೋಷ ನಿವಾರಣೆ
ಗಣೇಶ ಚತುರ್ಥಿಯಂದು ನೀವು ಆಕಸ್ಮಿಕವಾಗಿ ಚಂದ್ರನನ್ನು ನೋಡಿದರೆ, ಭಯಪಡಬೇಡಿ. ದೋಷ ನಿವಾರಣೆಗೆ ಗಣಪತಿಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿ. ಬಡ ಅಥವಾ ನಿರ್ಗತಿಕ ವ್ಯಕ್ತಿಗೆ ದಾನ ಮಾಡಿ ಅಥವಾ ಸಹಾಯ ಮಾಡಿ. ಭವಿಷ್ಯದ ಕಳಂಕವನ್ನು ತಪ್ಪಿಸಲು ಈ ದಿನ ತುಳಸಿ ಜಪಮಾಲೆಯೊಂದಿಗೆ ಓಂ ಗಣ ಗಣಪತಯೇ ನಮಃ ಎಂದು 108 ಬಾರಿ ಪಠಿಸಿ ಜಪ ಮಾಡಿ. ಇದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪ್ರಾಪ್ತಿಯಾಗುತ್ತದೆ.












Click it and Unblock the Notifications