ವರಮಹಾಲಕ್ಷ್ಮಿ ವ್ರತಾಚರಣೆ ಆಗಸ್ಟ್‌ 21? ಅಥವಾ 28? ಯಾವ ದಿನ ಮಾಡಬೇಕು ಲಕ್ಷ್ಮೀ ಪೂಜೆ

ವರಮಹಾಲಕ್ಷ್ಮೀ ವ್ರತ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ. ಈ ದಿನ ಲಕ್ಷ್ಮೀ ದೇವಿಯನ್ನು ಕಲಶದಲ್ಲಿ ಸ್ಥಾಪಿಸಿ ಪೂಜೆ ಮಾಡಲಾಗುತ್ತದೆ. ಮನೆಯ ಸುಖ, ಶಾಂತಿ, ಸಮೃದ್ದಿ, ಸಂಪತ್ತು ಹೆಚ್ಚಾಗಲಿ ಎನ್ನುವ ಬೇಡಿಕೆಯೊಂದಿಗೆ ಈ ಪೂಜೆಯನ್ನು ಮಾಡಲಾಗುತ್ತದೆ. ಇದರ ಜೊತೆಗೆ ಮಕ್ಕಳು ಮತ್ತು ಗಂಡನ ಆಯುಷ್ಯ, ಆರೋಗ್ಯ ವೃದ್ದಿಗಾಗಿಯೂ ಪ್ರಾರ್ಥಿಸಲಾಗುತ್ತದೆ. ವರಮಹಾ ಲಕ್ಷ್ಮೀ ಪೂಜೆ ಎನ್ನುವುದು ವ್ರತ ಅದು ಹಬ್ಬವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಹಬ್ಬ ಎಂದೇ ಕರೆಯಲಾಗುತ್ತದೆ. ಶಾಸ್ತ್ರದ ಪ್ರಕಾರದ ಇದನ್ನು ವ್ರತ ಎಂದೇ ಆಚರಿಸುವುದು ಹೆಚ್ಚು ಸೂಕ್ತ.

ವ್ರತಾಚರಣೆ ದಿನಾಂಕದ ಬಗ್ಗೆ ಗೊಂದಲ

ಈ ಬಾರಿ ವರ ಮಹಾಲಕ್ಷ್ಮೀ ಪೂಜೆ ಯಾವಾಗ ಎನ್ನುವ ಗೊಂದಲವಿದೆ. ಕೆಲವೊಂದು ಕ್ಯಾಲೆಂಡರ್‌ಗಳಲ್ಲಿ ಆಗಸ್ಟ್‌ ೨೧ಕ್ಕೆ ವರಮಹಾಲಕ್ಷ್ಮೀ ಪೂಜೆ ಎಂದು ಹೇಳಲಾಗಿದ್ದರೆ ಇನ್ನು ಕೆಲವು ಕ್ಯಾಲೆಂಡರ್‌ಗಳಲ್ಲಿ ಆಗಸ್ಟ್‌ ೨೮ ಎಂದು ಬರೆಯಲಾಗಿದೆ. ಹಾಗಿದ್ದರೆ ನಿಜಕ್ಕೂ ಯಾವ ದಿನ ಈ ವ್ರತವನ್ನು ಆಚರಿಸಬೇಕು ಎನ್ನುವ ಗೊಂದಲ ಮಹಿಳೆಯರಲ್ಲಿ ಮೂಡಿದೆ.

Varamahalakshmi vruta august 21 or 28 When should Varamahalakshmi vruta to be celebrated

ಈ ನಿಯಮದಡಿ ವ್ರತಾಚರನೆಯ ದಿನ ನಿಗದಿ

ನಮ್ಮಲ್ಲಿ ವ್ರತ ಮತ್ತು ಪೂಜೆಯನ್ನು ನಿರ್ಣಯಿಸುವುದಕ್ಕೂ ಒಂದು ನಿಯಮವಿದೆ. ಆ ನಿಯಮದ ಪ್ರಕಾರವೇ ವ್ರತ, ಪೂಜೆ ಯಾವಾಗ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ವರಮಹಾಲಕ್ಷ್ಮೀ ವ್ರತವನ್ನು ಶುಕ್ರವಾರವೇ ಆಚರಿಸಬೇಕು. ಶುಕ್ರವಾರ ಬಿಟ್ಟು ಬೇರೆ ಯಾವ ದಿನವೂ ಈ ವ್ರತವನ್ನು ಆಚರಣೆ ಮಾಡುವ ಹಾಗಿಲ್ಲ. ಶ್ರಾವಣ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯ ಸಮೀಪಕ್ಕೆ ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸ ಶುಕ್ಷ ಪಕ್ಷದ ಹಿಂದೆ ಅಥವಾ ಮುಂದೆ ಬರುವ ಶುಕ್ರವಾರವೇ ಈ ವ್ರತವನ್ನು ಆಚರಿಸಬೇಕು. ಆದರೆ ಈ ಬಾರಿ ವ್ರತಾಚರಣೆಗೆ ದಿನಾಂಕವೇ ಗೊಂದಲವಾಗಿದೆ.

ಯಾವ ಪಂಚಾಂಗ ಅನುಸರಿಸಬೇಕು ?

ಸಾಮಾನ್ಯವಾಗಿ ಎರಡು ಪಂಚಾಂಗವನ್ನು ನಾವು ಅನುಸರಿಸುತ್ತೇವೆ. ಒಂದು ಚಾಂದ್ರಮಾನ ಪಂಚಾಂಗ ಮತ್ತೊಂದು ಸೌರಮಾನ ಪಂಚಾಂಗ. ಹಾಗಾಗಿ ಚಾಂದ್ರಮಾನ ಪಂಚಾಂಗವನ್ನು ಅನುಸರಿಸುವವರು ಆಗಸ್ಟ್‌ ೨೧ಕ್ಕೆ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಬೇಕು. ಸೌರಮಾನ ಪಂಚಾಂಗವನ್ನು ಅನುಸರಿಸುವರು ಆಗಸ್ಟ್‌ ೨೮ಕ್ಕೆ ವ್ರತ ಆಚರಿಸಬಹುದು.

ವ್ರತಾಚರಣೆಯ ಮುಹೂರ್ತ

ನಮ್ಮ ಸಂಪ್ರದಾಯದಲ್ಲಿ ಯಾವ ಪ್ರಕಾರವಾಗಿ ಹಬ್ಬ ವ್ರತಗಳನ್ನು ನಿರ್ಣಯ ಮಾಡಲಾಗಿದೆಯೋ ಅದೇ ಪ್ರಕಾರ ನಡೆಯಬೇಕು ಎನ್ನುವುದು ಪದ್ದತಿ. ಆಗಸ್ಟ್‌ ೨೮ಕ್ಕೆ ಹುಣ್ಣಿಮೆ ಇದೆ. ಆದರೆ ಹುಣ್ಣಿಮೆಗೆ ಉಪರಿ ಪಾಢ್ಯ ತಿಥಿ ಬರುತ್ತದೆ. ಅಂದರೆ ಶುಕ್ಷ ಪಕ್ಷ ಕಳೆದು ಕೃಷ್ಣ ಪಕ್ಷ ಶುರುವಾಗುತ್ತದೆ.

ತಮಿಳು ನಾಡು ಮತ್ತು ಕರಾವಳಿ ಭಾಗದಲ್ಲಿ ಸೌರಮಾನ ಪಂಚಾಂಗವನ್ನ ಅನುಸರಿಸುವುದು.ಹಾಗಾಗಿ ಆ ಭಾಗದಲ್ಲಿ ಆಗಸ್ಟ್‌ ೨೮ಕ್ಕೆ ಈ ವ್ರತವನ್ನು ಆಚರಿಸಬಹುದು. ಉಳಿದಂತೆ ಕರ್ನಾಟಕದ ಎಲ್ಲಾ ಭಾಗದಲ್ಲಿ ಚಾಂದ್ರಮಾನ ಪಂಚಾಂಗದ ಪ್ರಕಾರವೇ ತಿಥಿ ನಿಗದಿಯಾಗುವುದು. ಈ ಹಿನ್ನೆಲೆಯಲ್ಲಿ ಆಗಸ್ಟ್‌ ೨೧ಕ್ಕೇ ಲಕ್ಷ್ಮೀ ವ್ರತವನ್ನು ಆಚರಿಸುವುದೇ ಹೆಚ್ಚು ಸೂಕ್ತ.

೨೧ ರ ಮುಹೂರ್ತ:
ಸಿಂಹ ಲಗ್ನ : ಬೆಳಿಗ್ಗೆ 6:53 ರಿಂದ 8:56 ರವರೆಗೆ
ವೃಶ್ಚಿಕ ಲಗ್ನ : ಮಧ್ಯಾಹ್ನ 1:35 ರಿಂದ ಸಂಜೆ 3:54 ರವೆರೆಗೆ
ಕುಂಭ ಲಗ್ನ : ಸಂಜೆ 7:39 ರಿಂದ 9:05 ರವೆರೆಗೆ

೨೮ ರ ಮುಹೂರ್ತ
ಸಿಂಹ ಲಗ್ನ : ಬೆಳಿಗ್ಗೆ 05:07 ರಿಂದ 07:29 ರವೆರೆಗೆ
ವೃಶ್ಚಿಕ ಲಗ್ನ :ಮಧ್ಯಾಹ್ನ 12:05 ರಿಂದ 2:23 ರವೆರೆಗೆ
ಕುಂಭ ಲಗ್ನ : ಸಂಜೆ 6:09 ರಿಂದ 7:37 ರವೆರೆಗೆ
ವೃಷಭ ಲಗ್ನ : ರಾತ್ರಿ 10:37 PM ರಿಂದ 12:33ರವೆರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+