ಪ್ರೀತಿಯ ನಿವೇದನೆ ಆ ನನ್ನ ಹುಡುಗನಿಗೆ

ಪ್ರೀತಿ ಒಂದು ಕನವರಿಕೆ, ಒಂದು ಕನಸು, ಭಾವನೆಗಳ ಮಹಾಪೂರವೇನೋ ನಿಜ. ಪ್ರೇಮದ ನಿವೇದನೆಗೆ ನಾನಾ ಬಗೆಯ ವಿಧಾನಗಳುಂಟು ಅದರಲ್ಲಿ ಪುರಾತನವೂ ನಿತ್ಯನೂತನವೂ ಆದ ವಿಧಾನ ಎಂದರೆ ಪ್ರೇಮಪತ್ರ. ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಅದರ ಕಾವು ಎಲ್ಲರನ್ನೂ ಸುಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅನಾಮಿಕ ಗೆಳತಿ ಒಬ್ಬಳು ತನ್ನ ಗೆಳೆಯನನ್ನು ಛೇಡಿಸುತ್ತಾ ಬರೆದ ಪತ್ರ ದಟ್ಸ್ ಕನ್ನಡಕ್ಕೆ ಬಂದಿದೆ.

* ನೀಲಿ ನಯನ

ಕೋತಿಮರಿಗೆ !

ಬೆಳಗ್ಗೆ ಎದ್ದು ಕೂತೆನೆಂದರೆ ನಿನ್ನೆ ರಾತ್ರಿ ನಾನು ಕನವರಿಸಿದ ನಿನ್ನ ಮಲ್ಲಿಗೆಯ ನೆನಪುಗಳ ಸರಮಾಲೆ ನನ್ನ ಕಾಡತೊಡಗುತ್ತವೆ ಗೆಳೆಯ! ಮೇಲೇಳಲಾಗದೆ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳುಗಳ ಕಚಗುಳಿಯಿಟ್ಟಂತಾಗಿ ಈ ಎದೆಯ ತುಂಬ ಒಂದು ತೆರನಾದ ಜೀವಂತಿಕೆಯ ಹೂ ಅರಳುತ್ತವೆ ! ಆ ಹೂವುಗಳನ್ನೆಲ್ಲ ಮಾಲೆ ಮಾಡಿ ನೀನೆ ನಿನ್ನ ಕೈಯ್ಯಾರೆ ಮುಡಿಸುತ್ತೀಯ! ಹೂವಿಗಿಂತಲೂ ಮುದ್ದಾಗಿದ್ದೀಯ ಹುಡುಗಿ ಅಂದುಕೊಂಡು ತಬ್ಬಿಕೊಳ್ಳುತ್ತೀಯ ! ನೀನಲ್ಲವ ತಬ್ಬಿ ಹಿಡಿದಿದ್ದು ಅಂದುಕೊಂಡು ನಾನು ಅಪ್ಪಿ ತಪ್ಪಿ ಜೋರಾಗಿ ಲೊಚ್ಚ್ ಅಂತ ಒಂದು ಮುತ್ತುಕೊಟ್ಬಿಡ್ತೀನಿ! ಅಷ್ಟೇ ನೋಡು!

 Murmerings of a mad lover

"ಇನ್ನು ಮಲಗಿದ್ದೀಯೇನೆ ಸೋಂಬೇರಿ" ಅಂದವಳೇ ಅಮ್ಮ ದಿಂಬನ್ನ ಮಾರುದ್ದ ದೂರ ಎಸೆದುಬಿಡ್ತಾಳೆ! ಅಮ್ಮಾ!! ನಿಧಾನ ಕಣೇ ನೋವಾಗುತ್ತೆ ಅಂದು ತುಟಿ ಕಚ್ಚಿಕೊಳ್ಳುತ್ತೇನೆ ! ಯಾರಿಗೆ ಅಂತ ಅಮ್ಮ ಕೇಳಿದರೆ ಹೇಗೆ ಹೇಳಲಿ ಗೆಳೆಯ ರಾತ್ರಿ ಪೂರ ತಬ್ಬಿ ಮಲಗುವ ದಿಂಬು ನಿನ್ನ ಪ್ರತಿರೂಪವೆಂದು !

ಅನುಮಾನವೇ ಬೇಡ ಮೊದಲು ನಿನ್ನ ವಶವಾದವಳು ನಾನೆ ಕಣೋ ! ನನ್ನ ನೀನು ಗಂಡುಬೀರಿ ಅಂದುಕೊಂಡ್ರೂ ಪರ್ವಾಗಿಲ್ಲ ಪ್ಲೀಸ್ ನಿಮ್ ಹೆಸರೆನು ಅಂತ ಹೇಳಿ ಹಲ್ಕಿರಿದವಳು ನಾನೆ ! ಅದ್ರಲ್ಲಿ ನಂದೇನು ತಪ್ಪಿದೆ ಅಂತ ಸ್ವಲ್ಪ ಹೇಳ್ತೀಯ ನೀನು? ಅಷ್ಟೋಂದು ಸುಂದರವಾಗಿದ್ದೆ ಅಂತಾನೆ ನಾನು ನಿನಗೆ ಬಲೆ ಬೀಸಿದ್ದು. ನಿಜ ಒಪ್ಕೊಂಡು ಬಿಡ್ತೀನಿ. ನಮ್ ಕಾಲೇಜು ಹುಡುಗೀರ ತರ ಮನ್ಸಲ್ಲಿ ಮಂಡಿಗೆ ತಿನ್ನೋಕೆ ಬರೊಲ್ವೊ. ನಿನ್ನ ನೋಡಿದ ಕೂಡಲೇ ಇದೇ ಹುಡುಗ ನನ್ ಜೊತೆಗಾರ ಆದ್ರೆ ಅಂತ ಅನ್ಸಿಬಿಡ್ತು. ಅದಕ್ಕೆ ನಿನ್ ಹಿಂದಿಂದೆ ಬಂದ್ರೆ. ಆದ್ರೆ ಮೊದ್ಲೆ ಹೇಳಿಬಿಡ್ತೀನಿ ನಾನು ಎಲ್ಲ ಹುಡುಗೀರ ತರ ಅಲ್ಲ..ನಂಗೆ ನೀನು ಮೋಸ ಮಾಡೊ ಹಂಗಿಲ್ಲ. ತುಂಬ ಮುದ್ದಾಗಿ ಬೆಳೆದುಬಿಟ್ಟಿದ್ದೀನಿ. ಮುದ್ದು ಮಾಡೋದಷ್ಟೆ ನಿನ್ ಕೆಲ್ಸ.

ಇನ್ನು ಲವ್ ಬೇರೆ ಮದ್ವೆ ಬೇರೆ ಅಂದ್ರೆ ಸರಿ ಇರಲ್ಲ ಮತ್ತೆ. ಪಕ್ಕಾ ಟ್ರೆಡಿಶನಲ್ ಹುಡ್ಗೀ ನಾನು. ಇಲ್ಲಿವರೆಗು ನಂಗೆ ಪಪ್ಪ ಎಲ್ಲಾನು ಕೊಡ್ಸಿದ್ದಾರೆ. ನಿನ್ನ ತೋರ್ಸಿ " ಪಪ್ಪಾ ಇದೊಂದನ್ನ ನನಗೆ ಕೊಟ್ಬಿಡಿ ಪ್ಲೀಸ್ ಅಂದ್ರೆ ಅವರು ಇಲ್ಲ ಅಂತ ಖಂಡಿತ ಅನ್ನೋಲ್ಲ. ಒಪ್ಪದೆ ಇದ್ರೆ ಮನೇನಲ್ಲಿ ಗಂಗ ಕಾವೇರಿ ಶರಾವತಿ ಎಲ್ಲ ನದಿಗಳು ನಾಚ್ಕೊಳ್ಳೊ ಹಾಗೆ ಕಣ್ಣೀರ ಕೋಡಿ ಹರಿಸಿ ಒಪ್ಸೋದು ಗೊತ್ತಿದೆ ಕಣೋ. ಒಂದು ದಿನ ನೀನು ಕಾಲೇಜಿನಲ್ಲಿ ಕಾಣ್ಸಿಲ್ಲ ಅಂದ್ರೇನೆ ಒಳೊಳ್ಗೆ ಅತ್ತುಬಿಡ್ತೀನಿ ಕಣೊ. ಇನ್ನು ನೀನು ಕೊನೆವರ್ಗು ನನ್ ಜೊತೆ ಇಲ್ದಿದ್ರೆ ಹೇಗೆ ಬದುಕ್ತೀನಿ ಹೇಳು?.

ವ್ಯಾಲಂಟೈನ್ ಡೇ ಹತ್ರ ಬಂತಲ್ಲೊ? ನನಗೆ ದಿಗಿಲಾಗುತ್ತಿದೆ. ಕಾಲೇಜಿನ ಎಲ್ಲ ಹುಡುಗಿಯರ ಕಣ್ಣಲ್ಲೂ ನೀನು "ಹಾಟ್ ಕೇಕ್" ಅನ್ನೋದು ಗೊತ್ತಿದೆ ಅದಕ್ಕೆ ಸ್ವಲ್ಪ ಭಯಾನು ಆಗ್ತಿದೆ ! ಬೆಳಗ್ಗೆಯಿಂದಾನೆ ಎಲ್ಲಾ ದೇವರಿಗೂ ಅದೆಷ್ಟು ಸಲ ಹರಕೆ ಮಾಡಿಕೊಂಡಿದ್ದೀನಿ ಗೊತ್ತೇನೊ? ಯಾವ ಕಣ್ಣು ಕುಕ್ಕುವ ಹುಡುಗಿಯ ಕಣ್ಣಿಗೂ ನೀನು ಬೀಳಬಾರದು ಅಂತ? ಪ್ಲೀಸ್ ನನಗೊಂದು ಫೋನ್ ಮಾಡ್ತೀಯ? ಇವತ್ತೆ ನಿಂಗೆಲ್ಲ ಹೇಳಿಬಿಡ್ತೀನಿ ಕಣೊ ನನ್ನಿಂದ ಮುಚ್ಚಿಡೋಕೆ ಆಗ್ತಿಲ್ಲ! ಲವ್ ಯು ಕಣೊ ಪ್ಲೀಸ್ ಪ್ಲೀಸ್ ಫೋನ್ ಮಾಡು

ಈ ನಂಬರಿನ ಹುಡುಗಿ
226348689

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+