ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ...
ಪ್ರೇಮ ಕತೆಗಳಿಗೆ ಕೊನೆಯುಂಟೆರಾಧಾಮಾಧವರಿರೋ ತನಕಪ್ರೇಮ ಪ್ರವಾಹಕೆ ಯಾವ ತಡೆಆಸ್ತಿ ಅಂತಸ್ತು ಧನಕನಕ...ಹಾಗಂತ ಬಿ. ಆರ್. ಲಕ್ಷ್ಮಣ ರಾವ್ ಬರೆಯುವ ಹೊತ್ತಿಗಾಗಲೇ ಸಾವಿರಾರು ಪ್ರೇಮಗೀತೆಗಳ ಮಲ್ಲಿಗೆ ಕಂಪು ಎಲ್ಲ ಮನವನಗಳನ್ನು ಹಬ್ಬಿಯಾಗಿತ್ತು. ಇವತ್ತಿಗೂ ಎಲ್ಲರೂ ನೆನಪಿಸಿಕೊಳ್ಳುವ ಪ್ರೇಮಗೀತೆಗಳ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಬಿ. ಎಂ. ಶ್ರೀಯವರಿಂದ ಮೊದಲುಗೊಂಡು ಜಯಂತ ಕಾಯ್ಕಿಣಿಯವರ ತನಕ ಎಲ್ಲರೂ ಪ್ರೇಮ ಗೀತೆಗಳಿಗೆ ಮನಸೋತವರೇ.
ಅಂಥ ಪ್ರೇಮ ಗೀತೆಗಳ ಮಂದಾರ, ಪ್ರಣಯದ ಮಲ್ಲಿಗೆ, ಪ್ರೀತಿಯ ಕನಕಾಂಬರವನ್ನು ಅಚ್ಚ ಕನ್ನಡದ ಅಕ್ಷರ ಮಾಲೆಯಲ್ಲಿ ಕಟ್ಟಿ ನಿಮ್ಮ ಮುಂದಿರಿಸುತ್ತಿದ್ದೇವೆ. ಅಕಾರಣ ಪ್ರೀತಿಗೆ ಜಯವಾಗಲಿ. ನುಡಿಯ ಮುಡಿಯೇರಿದ ಈ ಒಲವ ಪುಷ್ಪ ಮಾಲಿಕೆ ಎಲ್ಲ ಜೀವಗಳ ಕಾಯಲಿ.
ಪ್ರೀತಿಯೆಂದರೆ ಏನದು.. ಏನದು .. ? ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದ ಖ್ಯಾತನಾಮರು ತಮ್ಮ ಅನುಭವದ ಮೂಲಕ ಪ್ರೀತಿಯ ವ್ಯಾಖ್ಯಾನಿಸುತ್ತಾರೆ ಕೇಳಿ- ಪ್ರೀತಿಯೆಂದರೆ ತಾಳ್ಮೆ , ಪ್ರೀತಿಯೆಂದರೆ ಕರುಣೆ. - ಬೈಬಲ್ * ಪ್ರೀತಿಯ ಸ್ಪರ್ಶದಲ್ಲಿ ಪ್ರತಿಯಾಬ್ಬರೂ ಕವಿಗಳೇ! -ಪ್ಲೇಟೊ * ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? - ಜಿ.ಎಸ್.ಶಿವರುದ್ರಪ್ಪ * ನೀನು ನನ್ನ ಪ್ರೀತಿಸಿದರಷ್ಟೇ ಸಾಲದು ; ನಾನು ಪ್ರೀತಿಸುತ್ತೇನೆ ಎಂದು ಬಾಯಿ ಬಿಟ್ಟು ಹೇಳಬೇಕು. - ಜಾರ್ಜ್ ಇಲಿಯಟ್ * ಅತ್ಯಂತ ಖುಷಿಯಾದ ಸಡಗರ ಹಾಗೂ ಕಡು ವಿಷಾದ- ಅದುವೇ ಪ್ರೇಮ. - ಪೆರ್ಲ್ ಬೈಲಿ * ಪ್ರೀತಿಯೆಂದರೆ ಏನಂದುಕೊಂಡಿದ್ದೀರಿ, ಅದು ಆತ್ಮದ ಒಂದು ಭಾಗ. - ವಿಕ್ಟರ್ ಹ್ಯೂಗೊ * ಪ್ರೀತಿ ಬದುಕಿನ ಹೂವು. ಅದು ಅನಿರೀಕ್ಷಿತವಾಗಿ ಅರಳುತ್ತದೆ. - ಡಿ.ಎಚ್.ಲಾರೆನ್ಸ್ * ಯಾರು ಪ್ರೀತಿಸಲ್ಪಡುವನೋ, ಅವನು ಬಡವ - ಆಸ್ಕರ್ ವೈಲ್ಡ್ * ನಾನು ಸುಂದರವಾಗಿರುವೆ ಎಂದು ನೀನು ನನ್ನನ್ನು ಪ್ರೀತಿಸುವೆಯಾ, ಅಥವಾ ನೀನು ಪ್ರೀತಿಸುವುದರಿಂದ ನಾನು ಸುಂದರಳಾ ? - ಸಿಂಡ್ರೆಲಾ












Click it and Unblock the Notifications