ಮುಖಪುಟ / ಪ್ರೇಮಿಗಳ ದಿನ / ಓದುಗರ ಪ್ರೇಮ ಪತ್ರಗಳು
ನಿನ್ನ ಪತ್ರ ತಲುಪಿತು. ಪತ್ರ ಬಂದಾಗಿನಿಂದ ನೀ ಹರಿಸಿದ ಮಧುರ ಭಾವಗಳಲ್ಲಿ ತೇಲುತ್ತಿದ್ದೇನೆ. ಕೊಚ್ಚಿಹೋಗುವ ಮುನ್ನ ಯಾವುದೋ ಚಿತ್ರದ ಈ ಗೀತೆ ನೆನಪಾಗುತ್ತಿದೆ. ತಲುಪಿಸುತ್ತಿದ್ದೇನೆ. ಬಾಚಿ ತಬ್ಬಿಕೋ !
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ನನಗೆಂದೇ ಬರೆದ ಪ್ರೇಮದ ಓಲೆ
ಇದ ಓದಲು ಹರಿವುದು ಜೇನಿನಾ ಹೊಳೆ.
ನಾ ಓದಿದೆ ಒಲವಿನೋಲೆಯನು, ಮನಸಾರೆ ನಾ ಮುತ್ತನಿತ್ತೆನು
ಹೆರಳೇರಿಸಿ ನಿನ್ನಾ ನೆರಳ ಕಂಡೆನೂ
ನೀ ಮುಡಿದಾ ಮಲ್ಲಿಗೆ.....
ನಿನ್ನಾಸೆಯ ನೋಟದ ಕಥೆಯೇನೋ, ಸರಿಮೀರಿದ ಯೌವನ ಜತೆಯೇನೋ
ಬೆಳದಿಂಗಳ ಹುಣ್ಣಿಮೆ ಮಾತೇನೋ ..
ಆ ಹುಣ್ಣಿಮೆ ಮಾತನಾಡಿತು, ನಿನ್ನ ಕಣ್ಣಲ್ಲಿ ಮನೆಯ ಮಾಡಿತು,
ಸರಿತೂಗುವ ಬೆಳಕಲ್ಲಿ ಆಡಿತೋ...
ನೀ ಮುಡಿದಾ ಮಲ್ಲಿಗೆ.....











Click it and Unblock the Notifications