ಓ ಪ್ರೀತಿಯ ಹುಡುಗ,ವರುಷಗಳ ಹಿಂದೆ ಮುಂಜಾವುಗಳಲ್ಲಿ ಅಂಗಳದ ತುಂಬೆಲ್ಲ ಬಿದ್ದಿರುತ್ತಿದ್ದ ಪಾರಿಜಾತದ ಹೂ ಹೆಕ್ಕಿ ಮುಡಿಯುತ್ತಿದ್ದುದು ನೆನಪಿದೆ. ‘ಪಾರಿಜಾತದ ಹೂ ಮುಡಿದರೆ ಗಂಡನಿಗೆ ಶುಭ’ ಎಂದು ಯಾರೋ ಹೇಳಿದ ಮಾತ ನಂಬಿ! ಇನ್ನೂ ಮದುವೆ ಆಗಿರಲಿಲ್ಲ, ಸಣ್ಣದೊಂದು ಹುಸಿನಗೆ ಇರುತ್ತಿತ್ತು. ಆಗೆಲ್ಲ ನಿನ್ನಂಗಳದ ಹುಲ್ಲ ಮೇಲಿನ ಹನಿಯಾಗುವ ಆಸೆ. ನೀನಡೆವಾಗ ಕಾಲನ್ನೆಲ್ಲ ಸೋಕಿ ಕರಗುವ ಆಸೆ! ಮಳೆ ಬಂದಾಗ ಹನಿಯಾಗಿ ನಿನ್ನ ತಲೆಯಿಂದ ತೊಟ್ಟಿಕ್ಕುವಾಸೆ. ಸೆರಗಲ್ಲಿ ನೆಂದ ನಿನ್ನ ಕೂದಲ ಒರೆಸುವಾಸೆ! ಎಲೆ ಹುಡುಗಿ, ಈಗೆಲ್ಲಿದೆ ಪ್ರೇಮ ಎನ್ನುತ್ತೀ ನೀ ಈಗ ! ದಿನವೂ ಸಾರು, ಸಾಂಬಾರು, ಪಲ್ಯ ಒಗ್ಗರಣೆ ಮಾಡಿ ಟೇಬಲ್ಲಿನ ಮೇಲೆ ಕುಕ್ಕುತ್ತೇನಲ್ಲ, ಅಲ್ಲಿದೆ ಪ್ರೀತಿ! ಟಿ ವಿ ಲೋನು, ಕಾರು ಲೋನು, ತೀರದೆ ಇರುವ ಲೋನುಗಳ ಪಟ್ಟಿಯಲ್ಲಿ ತಪ್ಪು ಹುಡುಕಿ, ಒಬ್ಬರಿನ್ನೊಬ್ಬರನ್ನು ದೂರುತ್ತೇವಲ್ಲ, ಅಲ್ಲಿದೆ ಪ್ರೀತಿ !! ಆಸ್ಪತ್ರೆಯಲ್ಲಿ ದುಡಿದು, ದಣಿದು ಬಂದು ಮುಂಜಾನೆ, ಮುಸ್ಸಂಜೆ, ಇರುಳುಗಳಿಲ್ಲದ ಬದುಕು ಬಾಳುತ್ತಿದ್ದೇವಲ್ಲ, ಅಲ್ಲಿದೆ ಪ್ರೀತಿ !!! ಈ ಗಡಿಬಿಡಿಯಲ್ಲೊಮ್ಮೆ, ಎಷ್ಟು ದಿನವಾಯಿತು ನಿನ್ನ ಕೈಹಿಡಿದು ಎಂದು ಮೆತ್ತಗೆ ಹೂ ಮುತ್ತನಿಡುತ್ತೀಯಲ್ಲ, ಅಲ್ಲಿದೆ ಪ್ರೀತಿ !!!!ಮಧು
ಓ ಪ್ರೀತಿಯ ಹುಡುಗ,
ವರುಷಗಳ ಹಿಂದೆ ಮುಂಜಾವುಗಳಲ್ಲಿ ಅಂಗಳದ ತುಂಬೆಲ್ಲ ಬಿದ್ದಿರುತ್ತಿದ್ದ ಪಾರಿಜಾತದ ಹೂ ಹೆಕ್ಕಿ ಮುಡಿಯುತ್ತಿದ್ದುದು ನೆನಪಿದೆ.
‘ಪಾರಿಜಾತದ ಹೂ ಮುಡಿದರೆ ಗಂಡನಿಗೆ ಶುಭ’ ಎಂದು ಯಾರೋ ಹೇಳಿದ ಮಾತ ನಂಬಿ!
ಇನ್ನೂ ಮದುವೆ ಆಗಿರಲಿಲ್ಲ, ಸಣ್ಣದೊಂದು ಹುಸಿನಗೆ ಇರುತ್ತಿತ್ತು.
ಆಗೆಲ್ಲ ನಿನ್ನಂಗಳದ ಹುಲ್ಲ ಮೇಲಿನ ಹನಿಯಾಗುವ ಆಸೆ. ನೀನಡೆವಾಗ ಕಾಲನ್ನೆಲ್ಲ ಸೋಕಿ ಕರಗುವ ಆಸೆ!
ಮಳೆ ಬಂದಾಗ ಹನಿಯಾಗಿ ನಿನ್ನ ತಲೆಯಿಂದ ತೊಟ್ಟಿಕ್ಕುವಾಸೆ. ಸೆರಗಲ್ಲಿ ನೆಂದ ನಿನ್ನ ಕೂದಲ ಒರೆಸುವಾಸೆ!
ಎಲೆ ಹುಡುಗಿ, ಈಗೆಲ್ಲಿದೆ ಪ್ರೇಮ ಎನ್ನುತ್ತೀ ನೀ ಈಗ !
ದಿನವೂ ಸಾರು, ಸಾಂಬಾರು, ಪಲ್ಯ ಒಗ್ಗರಣೆ ಮಾಡಿ ಟೇಬಲ್ಲಿನ ಮೇಲೆ ಕುಕ್ಕುತ್ತೇನಲ್ಲ, ಅಲ್ಲಿದೆ ಪ್ರೀತಿ!
ಟಿ ವಿ ಲೋನು, ಕಾರು ಲೋನು, ತೀರದೆ ಇರುವ ಲೋನುಗಳ ಪಟ್ಟಿಯಲ್ಲಿ ತಪ್ಪು ಹುಡುಕಿ,
ಒಬ್ಬರಿನ್ನೊಬ್ಬರನ್ನು ದೂರುತ್ತೇವಲ್ಲ, ಅಲ್ಲಿದೆ ಪ್ರೀತಿ !!
ಆಸ್ಪತ್ರೆಯಲ್ಲಿ ದುಡಿದು, ದಣಿದು ಬಂದು ಮುಂಜಾನೆ, ಮುಸ್ಸಂಜೆ,
ಇರುಳುಗಳಿಲ್ಲದ ಬದುಕು ಬಾಳುತ್ತಿದ್ದೇವಲ್ಲ, ಅಲ್ಲಿದೆ ಪ್ರೀತಿ !!!
ಈ ಗಡಿಬಿಡಿಯಲ್ಲೊಮ್ಮೆ, ಎಷ್ಟು ದಿನವಾಯಿತು ನಿನ್ನ ಕೈಹಿಡಿದು ಎಂದು ಮೆತ್ತಗೆ ಹೂ ಮುತ್ತನಿಡುತ್ತೀಯಲ್ಲ,
ಅಲ್ಲಿದೆ ಪ್ರೀತಿ !!!!
- ಮಧು











Click it and Unblock the Notifications