ಯುಗಾದಿ ವಿಜಯದೊಸಗೆ ಸ್ವತ್ವ ರಜೋಗುಣದ ಬೆಸುಗೆ

ನೋವು ನಲಿವು ನಮ್ಮವು
ಹೂವು ನಾವು, ಹಸಿರು ನಾವು
ಬೇವು ಬೆಲ್ಲ ನಮ್ಮವು||
ಹೊಸತು ವರುಷ, ಹೊಸತು ಹರುಷ
ಹೊಸತು ಬಯಕೆ ನಮ್ಮವು|
ತಳಿರು ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು||
ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು-
ಮಾವು, ಬೇವು, ಬೆಲ್ಲ ಸೇವನೆಗೆ ವೈಜ್ಞಾನಿಕವಾಗಿಯೂ ಅರ್ಥವಿದೆ. ಅನೇಕ ಚರ್ಮ ವ್ಯಾಧಿಗಳಿಗೆ ಬೇವು ಸ೦ಜೀವಿನಿ, ವಿಷದ ಸೋಂಕನ್ನು ನಿವಾರಿಸುವ ವನೌಷಧಿ, ಬೇವಿನ ಎಲೆಯಲ್ಲಿ ವಾತದ ದೋಷ ನಿವಾರಕ ಶಕ್ತಿಯಿದೆ. ಹೀಗಾಗಿ ಬೇವು ಸೇವಿಸುವುದು ಸ೦ಪ್ರದಾಯ. ಬೇವಿನ ಕಹಿ ಮರೆ ಮಾಚಲು ಬೆಲ್ಲ ಜೊತೆಯಾಗಿ. ಮತ್ತೊ೦ದು ಅರ್ಥದಲ್ಲಿ ಬೇವು ಬೆಲ್ಲ ಸುಖ, ದುಃಖದ ಸ೦ಕೇತ. ಯುಗಾದಿ ಯಾವುದೇ ದೇವ-ದೇವತೆಗಳ ಸೋಕಿಲ್ಲದ ನಿಸರ್ಗದ ಹಬ್ಬ.
ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ||
ಪ್ರತಿ ಯುಗಾದಿ ವಿಜಯದೊಸಗೆ
ಸ್ವತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲುವ ಗೀತೆ||
(ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರ "ವರ್ಷಾದಿ")
ಹಾಗೆಯೇ
ಗೋಪಾಲಕೃಷ್ಣ ಅಡಿಗರ "ಯುಗಾದಿ" ಕವಿತೆಯಲ್ಲಿ
ಯುಗ ಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸ ಹೊಸವು ಪ್ರತಿ ವರುಷವೂ
ಒಳಗೆ ಅದೋ ಕಾಣುತಿದೆ, ಚೆಲುವಿರದ ನಲವಿರದ
ಕೂಳೆಯ ಬೆಳೆ; ರಂಗ ಮಂದಿರವು|











Click it and Unblock the Notifications