390316festivals of karnatakaಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/recipe/sweet/2009/0325-sajjappa-sweet-recipe-for-ugadi.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35501http://kannada.oneindia.com/img/2009/03/25-sajjappa2.jpg390316festivals of karnatakaಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ/festivals/ugadi/2009/0325-sajjappa-sweet-recipe.htmlಕೆಂಪಗೆ ಕರಿದ ಬಿಸಿಬಿಸಿಯಾದ, ಗರಿಗರಿಯಾದ ಸಜ್ಜಪ್ಪವನ್ನು ಮಾಡುವುದೇ ಒಂದು ಸಂಭ್ರಮ. ಅದನ್ನು ಸವಿಯುವುದು ಮತ್ತೊಂದು ಸಂಭ್ರಮ! ಯುಗಾದಿಗೆ ಹೋಳಿಗೆಯನ್ನೇ ಮಾಡಬೇಕೆಂದೇನೂ ಇಲ್ಲ, ಒಮ್ಮೆ ಸಜ್ಜಪ್ಪವನ್ನೂ ಮಾಡಿ ನೋಡಿ. ಓದುಗರಿಗೆಲ್ಲ ಹೊಸವರ್ಷದ ಹಾರ್ದಿಕ ಶುಭಾಶಯಗಳು.* ವಾಣಿ ನಾಯಿಕ, ಬೆಂಗಳೂರುಬೇಕಾಗುವ ಪದಾರ್ಥಗಳುಚಿರೋಟಿ ರವೆ 1 ಬಟ್ಟಲುತುಪ್ಪ 1 ಟಿಸ್ಪೂನ್ಕಾಯಿತುರಿ 2 ಬಟ್ಟಲುಬೆಲ್ಲ 1 ಬಟ್ಟಲುಏಲಕ್ಕಿ ಪುಡಿ 1 ಟಿಸ್ಪೂನ್ದ್ರಾಕ್ಷಿ ಮತ್ತು 35502http://kannada.oneindia.com/img/2009/03/25-sajjappa2.jpg390316festivals of karnatakaಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ/festivals/ugadi/2009/0414-sauramana-ugadi.htmlಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ, ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಇಂದು ಸೌರಮಾನ ಯುಗಾದಿಯ ಸಂಭ್ರಮ.* ವಾಣಿ ರಾಮದಾಸ್, ಸಿಂಗಪುರಬೆಳಿಗ್ಗೆ ಶಾಲೆಯ ಬಳಿ ಸಿಕ್ಕ ಅನುಪಮಾ ಘೋಷ್ "ನಬ ಬರ್ಶ್" ಶುಭಾಶಯ ಕೋರಿದಳು. 35931http://kannada.oneindia.com/img/2009/04/14-ugadi-sauramana1.jpg390316festivals of karnatakaಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ/nri/article/2009/0420-ugadi-navodaya-kannada-sangha-philadelphia.htmlಏಪ್ರಿಲ್ 11ರಂದು ಶನಿವಾರ ನವೋದಯ ಕನ್ನಡ ಕೂಟದ ಸದಸ್ಯರಿಗೆಲ್ಲ ಯುಗಾದಿ ಸಂಭ್ರಮ. ಫಿಲಡೆಲ್ಫಿಯಾ ನಗರದ ಸುತ್ತ ಮುತ್ತ ಇರುವ ಕನ್ನಡಿಗರ ಈ ಕೂಟದ 2ನೇ ವಾರ್ಷಿಕೋತ್ಸವದ ಸಂತೋಷದಲ್ಲಿ ಪಾಲುದಾರರಾಗಲು ಎಲ್ಲರೂ ಬಹಳ ಉತ್ಸಾಹದಿಂದ ಒಟ್ಟುಗೂಡಿದ್ದರು. ಮರಿಸಿದ್ದಯ್ಯ ದಂಪತಿಗಳು ಕರ್ನಾಟಕದಿಂದ ತರಿಸಿದ್ದ ಬೇವು ಬೆಲ್ಲ ಹಂಚಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಬಹಳ ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅಭ್ಯಸಿಸಿದ್ದ ಮಕ್ಕಳಿಗೂ, ಹಿರಿಯರಿಗೂ ಈ 36085http://kannada.oneindia.com/img/2009/04/20-philadelphia-ugadi1.jpg390316festivals of karnatakaಕವನ : ದೈವ ದೇವಿ ಶಕ್ತಿ ನನ್ನಲಿ ಜಾಗೃತವಾಗು/festivals/dasara/2009/0917-kannada-poem-by-moolky-nagabhushana.htmlವಿಷಯ ವಿಷಮದಿಬೀಸಿಹ ಪಂಕ ಶಂಕಾ IIವಿIIವಂಚನೆಯ ಮಂಚಇಂದ್ರಿಯ ಪ್ರಪಂಚಸ್ವೇಚಾ ಪಂಚೆಂದ್ರಿಯನರಕಾತ್ಮಾ ಹಂದರ IIವಿIIಹೃದಯ ಕಮಲದಲಿನೆಲೆಸಿಹ ದೇವಿಯೇದಯ ಕೋಮಲದಿಜಾಗೃತಿ ಜಾಗೃತವಾಗು IIವಿIIಅಸುರ ಸಂಹಾರನಿನದು ಸಂಸ್ಕಾರಸಂಸಾರ ಸಾಗರಕೆನಮಗೆ ನಿ ಆಧಾರ IIವಿIIನಿ ನೆಲೆಸೆ ನನ್ನಲಿನಶಿಸುವ ಅಸುರನುಅವ ಆಳು ಕಾಳಾಗಿನಿನ್ನ ಕಾಳಾಲಾಗುವ IIವಿIIದೈವ ದೇವಿ ಶಕ್ತಿನನ್ನಲಿ ಜಾಗೃತವಾಗುಈ ಶಕ್ತಿ ಯುಕ್ತಿಯೇಈ ಜೀವಕೆ ಮುಕ್ತಿ IIವಿII39235http://kannada.oneindia.com/img/2009/09/17-nagabhushan-moolki1.jpg39639new yearಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif39639new yearಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg39639new yearಬಸವನಗುಡಿ ರಸ್ತೆಯಲ್ಲಿ ರಕ್ತಪಾತ!/nri/article/2009/0102-blood-stained-streets-of-bull-temple.htmlಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..* ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು 33831http://kannada.oneindia.com/img/2009/01/02-wallstreet-malli1.jpg39639new yearಹೊಸ ವರ್ಷಕ್ಕೆ ಚೀನಿಕಾಯಿ ಕಡುಬು/recipe/sirsi-bhavana/2009/0102-cheenikayi-kadubu-or-govekayi-kadubu.htmlಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ದೀಪಾವಳಿಗೆ ಚೀನಿಕಾಯಿ ಅಥವಾ ಗೋವೆಕಾಯಿ ಕಡುಬನ್ನು ಮಾಡುತ್ತಾರೆ. ಈಬಾರಿ ಸಂಪ್ರದಾಯವನ್ನು ಮುರಿದು ದೀಪಾವಳಿಗಷ್ಟೇ ಏಕೆ ಹೊಸವರ್ಷಕ್ಕೇ ಮಾಡೋಣಂತೆ, ಅದಕ್ಕೇನಂತೆ! ನೆನಪಿಡಿ, ಚೀನಿಕಾಯಿಯಿಂದ ಸಾಂಬಾರ್, ಪಾಯಸ, ಪಲ್ಯ, ಮೊಸರು ಬಜ್ಜಿ, ಸಿಪ್ಪೆಯ ಚಟ್ನಿ ಕೂಡ ತಯಾರಿಸಬಹುದು. * ತೇಜಸ್ವಿನಿ ಹೆಗಡೆಹೊಸವರುಷಕೆ ಸಿಹಿಗಡುಬಿನ ತಿನಿಸು.ಉತ್ತರಕರ್ನಾಟಕದ ಕಡೆ ದೀಪಾವಳಿಯಂದು ಈ ಚೀನಿಕಾಯಿ ಕಡುಬು ಆಗಲೇಬೇಕು. ಅದರಲ್ಲೂ 33838http://kannada.oneindia.com/img/2009/01/02-cheenikayi-kadubu1.jpg39639new yearಯುಗಾದಿ : ಯುಗದ ಸಂಭ್ರಮ ಬರೀ ಭ್ರಮೆ/festivals/ugadi/2009/0323-ugadi-kannada-poem-by-sls-kumar.htmlಯುಗದ ಹಾದಿ ಹಿಡಿದು ಬಂದಿದೆ ಯುಗಾದಿಯುಗ ಯುಗದಿಂದ ಮತ್ತೆ ಬಂದಿದೆ ಯುಗಾದಿಯಾವ ಸಂಭ್ರಮ ಯಾಕೆ ಸಂಭ್ರಮ ಏನು ಸಂಭ್ರಮಸಂಭ್ರಮವೆಂಬುದು ಇಲ್ಲೀಗ ಭ್ರಮೆಯಾಗಿದೆಬೇವು ಬೆಲ್ಲವು ಜೊತೆ ಎಂಬುದೆಲ್ಲ ಸತ್ಯ ನುಡಿಯೊಳಗೆನಿತ್ಯವು ಬದುಕು ಕಹಿಯಾಗಿಯೆ ಇರಲು ಜಗದೊಳಗೆಸತ್ಯಯಾವುದು ಮಿಥ್ಯ ಯಾವುದು ನಿತ್ಯಕಾಣುವುದಲ್ಲವೆಹಳ್ಳಿಗಳಲಿ ಹಬ್ಬದ ಸೊಗಡೆಲ್ಲ ಸರಿದೋಗಿದೆಹಬ್ಬಗಳಾದರು ಏತಕೆ ಬರುತಾವೊ ಎಂಬಂತಾಗಿದೆಹೀಗಿರಲು ನೈಜತೆ, ಹಬ್ಬವಾದರು ದಿನವಾದರು ವ್ಯತ್ಯಾಸವೇನಿಲ್ಲವಾಗಿದೆಮುಂಗಾರು ಮಳೆ ಇಲ್ಲ ಹಿಂಗಾರು 35457http://kannada.oneindia.com/img/2009/03/23-ugadi2.jpg213311vani ramdasನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg213311vani ramdasಪುರಂದರ ದಾಸರಿಗೆ ಸಿಂಗಪುರದಲ್ಲಿ ಸಂಗೀತ ನಮನ/nri/article/2009/0203-purandara-namana-in-singapore.htmlಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ಪುರಂದರದಾಸರು. ಪುರಂದರದಾಸರು ದಕ್ಷಿಣಾದಿ 34444http://kannada.oneindia.com/img/2009/02/03-purandara4.jpg213311vani ramdasಮದ್ದೂರು ವಡೆಗೆ ಶತಮಾನಂಭವತಿ/recipe/culture/2009/0314-maddur-vade-centenary.htmlಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ವಿಶ್ವಪ್ರಸಿದ್ಧ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ! ಮದ್ದೂರು ವಡೆಯ ಶತಮಾನೋತ್ಸವದ ನಿಮಿತ್ತ ವಡೆ ಮೆಲ್ಲುತ್ತ ಮದ್ದೂರಿನ ಪೌರಾಣಿಕ, ಐತಿಹಾಸಿಕ ಮಹತ್ವ ಸಾರುವ ಕಥೆಯನ್ನು ಮೆಲುಕು ಹಾಕುವಾ.* ವಾಣಿ ರಾಮದಾಸ್, ಸಿಂಗಪುರ ಮದ್ದೂರು ವಡೆ ಸಿಕ್ಕರೆ ತೆಗೊಂಡು ಬಾರೋ 35216http://kannada.oneindia.com/img/2009/03/14-ugra-narasimha-madduru1.jpg213311vani ramdasನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg213311vani ramdasನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpgnews"> ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ | Sauramana Ugadi | Sun god | Coastal Karnataka | Festival - ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ - Kannada Oneindia

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

Sauramana Ugadi (Pic courtesy : itslife.in)
ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ, ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಇಂದು ಸೌರಮಾನ ಯುಗಾದಿಯ ಸಂಭ್ರಮ.

* ವಾಣಿ ರಾಮದಾಸ್, ಸಿಂಗಪುರ

ಬೆಳಿಗ್ಗೆ ಶಾಲೆಯ ಬಳಿ ಸಿಕ್ಕ ಅನುಪಮಾ ಘೋಷ್ "ನಬ ಬರ್ಶ್" ಶುಭಾಶಯ ಕೋರಿದಳು. ಆಗ ನೆನಪಾದದ್ದು ಇಂದು ಸೌರಮಾನ ಯುಗಾದಿ. ಸರ್ವಧರ್ಮ ಸಮನ್ವಯ ಪಾಲಿಸುವ ಸಿಂಗಪುರದಲಿ ದೀಪಾವಳಿಯಂದು ಎಲ್ಲರಿಗೂ ರಜೆ. ಅದೊಂದೇ ನಾವು ಮಾಡುವ ಬೆಳಗಿನ ಹಬ್ಬ. ನಮ್ಮ ಗಣಪತಿ, ಯುಗಾದಿ, ಗೋಕುಲಾಷ್ಟಮಿ, ದಸರಾ ಎಲ್ಲ ಹಬ್ಬಗಳೂ ನಮಗೀಗ ಸಂಜೆ ಹಬ್ಬ. ಅಯ್ಯೋ ಊರಲ್ಲಿದ್ದರೆ ಎಂದು ಆ ಹಬ್ಬದ ದಿನಗಳಲಿ ತೌರೂರ ನೆನಪು ಬಲು ಜೋರು. ಉದರ ನಿಮಿತ್ತಂ...ಊರು ಬಿಟ್ಟು ಬಂದರೂ ಸಂಸ್ಕೃತಿ ಸಂಪ್ರದಾಯದ ಬೇರನ್ನು ತಾವಿದ್ದಲ್ಲಿಗೆ ಹೊತ್ತೊಯ್ದವರು ಭಾರತೀಯರು.

ಮೇಷ ಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ವೈಷಾಖಿ ಅಥವಾ ಬೈಸಾಕಿ ಸಿಖ್‌ರಿಗೆ ಶುಭವಾದ ದಿನ. ಹಿಮಾಚಲ ಪ್ರದೇಶದಲಿ ಹೊಸ ವರುಷ ಜ್ವಾಲಾಮುಖಿ ದೇವಿಗೆ ಪೂಜೆ ಸಲ್ಲಿಸುವ ದಿನ. ರಂಗೋಲಿ ಬಿಹು ಅಸ್ಸಾಂ. ವಿಧ ವಿಧವಾದ ರಂಗೊಲಿ ಎಳೆಗಳು ಹೊಸ ಹೊಸ ಬಾಂಧವ್ಯಗಳನು ಬೆಳೆಸಲಿ ಎಂಬ ಸಂಕೇತವಿದು. ನಬ ಬರ್ಶ್ ಬಂಗಾಳಿಗಳಿಗೆ, ಪುತ್ತಾಂಡ್ ತಮಿಳುನಾಡು, ವಿಷು ಕೇರಳ, ಉತ್ತರಾಂಚಲ್, ಹರಯಾಣಿಗರಿಗೂ ಇಂದು ಹೊಸ ವರುಷ ಹೊಸ ಹರುಷ.

ಸೌರಮಾನ ಪಂಚಾಂಗ ಸೂರ್ಯನ ಚಲನೆಯಾಧಾರಿತ. ಎಲ್ಲಾ ವಿರೋಧಗಳನ್ನೂ ಮೆಟ್ಟಿ ನಿಂಟು ಹೊಸ ವರುಷಕೆ ನವ ಚೈತನ್ಯ ತುಂಬುವ, ವಿರೋಧಿನಾಮ ಸಂವತ್ಸರ ಸ್ವಾಗತಿಸುವ "ಬಿಸು ಪರ್ಬ" ಇಂದು. ಕರ್ನಾಟಕದ ಬಯಲು ಸೀಮೆ, ಮೈಸೂರು, ಬೆಂಗಳೂರು, ಆಂಧ್ರ, ಮಹಾರಾಷ್ಟ್ರದವರು ಚಾಂದ್ರಮಾನ ಪರಿಪಾಲಕರಾದರೆ ಕರ್ನಾಟಕದ ದಕ್ಷಿಣ ಕರಾವಳಿ, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲಪ್ರದೇಶ, ಅಸ್ಸಾಂ, ಶ್ರೀಲಂಕಾ ಹಾಗೂ ನೇಪಾಳಿಗರು ಸೌರಮಾನ ಪರಿಪಾಲಕರು. ಈ ಪಂಚಾಂಗಗಳ ಅನುಕರಣೆ ಪ್ರಾಯಶಃ ನಮ್ಮಲ್ಲಿದ್ದ ರಾಜ್ಯ ವಿಂಗಡಣೆ ಕಾರಣವಾಗಿರಬಹುದೋ ಏನೋ?

ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇತ್ತು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.

ಕೇರಳದಲೂ ಇದೇ ರೀತಿ ಖಣಿ ಇಡುವ ಪದ್ದತಿ. ಕೇರಳದಲಿ ಅಡಿಕೆ ಹೂವು, ಅರಿಶಿನ ಕೊಂಬು, ಮಾವು, ಹಲಸು, ಕೊಬ್ಬರಿ ಎಲ್ಲವನೂ ಅಗಳ ಬಾಯಿರುವ ಪಂಚಲೋಹದ ಪಾತ್ರೆಯಲಿ ಇಡುತ್ತಾರೆ. ಇದನ್ನು ಮನೆಯ ಹಿರಿಯ ಹೆಂಗಸು ಹಿಂದಿನ ರಾತ್ರಿ ದೇವರ ಮುಂದೆ ಇಡುತ್ತಾರೆ. ಇದರ ಪಕ್ಕದಲಿ ನೀಲ ವಿಳಕ್ಕು( ದೀಪ) ಹಚ್ಚುತ್ತಾರೆ. ಖಣಿ ಎಂದರೆ ನೋಡುವುದು ಎಂದರ್ಥ. ವಿಷುಖನಿ ಎಂದರೆ ಮೊದಲು ನೋಡುವುದು. ಬೆಳಿಗ್ಗೆ ಮಕ್ಕಳನು ಎಬ್ಬಿಸಿ ಅವರ್ ಕಣ್ ಮುಚ್ಚಿ ಮೊದಲು ಖಣಿ ತೋರಿಸಿ ಆನಂತರ ಸೂರ್ಯ ದರುಶನ ಮಾಡುವ ಪದ್ದತಿ. ಕೇರಳದ ದೇಗುಲಗಳಲಿ ರಾಮಾಯಣ ವಾಚನ. ಖಣಿಯಲಿ ತುಂಬಿದೆ ದೇವರು, ಧನ, ಧಾನ್ಯ, ವಸ್ತ್ರ, ಒಡವೆ. ವರುಷ ಪ್ರಾರಂಭದ ಇವನ್ನು ನೋಡಿದರೆ ವರುಷವಿಡೀ ಇವೆಲ್ಲವೂ ಸಮೃದ್ಧಿಯಾಗಿ ದೊರಕುವುದೆಂಬಬುದು ಇದರ ಸಂಕೇತ. ಶ್ರೀಲಂಕ ತಮಿಳರಿಗೆ ಹೊಸವರುಷದಂದು ಹೊಸ ಲೆಕ್ಕ. ರಾಮಾಯಣ ಪಾರಾಯಣ ಹಿಂದೂ ದೇಗುಲಗಳಲ್ಲಿ. ಕೈ-ವಿಷೇಶಮ್ ಇದು ಹಿರಿಯರು ಕಿರಿಯರಿಗೆ ನೀಡುವ ಕಾಣಿಗೆ. ವಿಶು ಎಂದರೆ ಸಮ.

ಎಲ್ಲ ಹಬ್ಬಕ್ಕೂ ಒಂದು ವಿಶೇಷತೆ ಇದೆ. ಎಲ್ಲ ಹಬ್ಬಗಳೂ ಎಲ್ಲವನೂ ದೇವರಿಗೆ ಪ್ರಕೃತಿ ಪೂಜೆಗೆ ಅರ್ಪಿಸುವ, ಕೃತಜ್ಞತೆ ಸಲ್ಲಿಸುವ ದಿನಗಳು. ಜೀವನದ ಜಗ್ಗಾಟದಲಿ, ಯಾಂತ್ರಿಕ ಬದುಕಿನಲಿ ಹಬ್ಬ, ಹರಿದಿನಗಳು ಪಾಲಿಸುವುದು ಹೊಸ ಚೈತನ್ಯ, ಹೊಸ ಹುರುಪು ತರುತ್ತದೆ. ಹಬ್ಬಗಳಂದು ವಿಧವಿಧ ಪಕ್ವಾನ್ನಗಳು, ಹಸಿರು, ಪೂಜೆ, ಹೊಸ ಬಟ್ಟೆ, ಹಿರಿಯರ ಭೇಟಿ ಇವು ಉಲ್ಲಾಸ ನೀಡುತ್ತದೆ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ
ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

ಯುಗಾದಿಯಂತೆಯೇ ಎಲ್ಲ ಹಬ್ಬಗಳ ಚಕ್ರಗಳು ತಿರುಗುತ್ತಲೇ ಇರುತ್ತದೆ. ಹೊಸ ಹರುಷವ ತರುತ್ತಲೇ ಇರುತ್ತದೆ. ವಿರೋಧಿ ನಾಮ ಸಂವತ್ಸರ ಎಲ್ಲೆಡೆಯಲಿ ಎಲ್ಲರಿಗೂ ಹೊಸ ಸಂತಸ, ಶಾಂತಿ, ಸಮಾಧಾನಗಳು ತರಲಿ ಎಂದು ಶುಭ ಹಾರೈಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+