ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿಯಂದು ಸೂರ್ಯಗ್ರಹಣ.. ತುಸು ಪೇಚಾಟ!

By Staff
|
Google Oneindia Kannada News


ಬೆಂಗಳೂರು : ಮಾ.19ರಂದು ಯುಗಾದಿ ಹಬ್ಬ. ಅದೇ ದಿನ ಸೂರ್ಯಗ್ರಹಣವೂ ಇದೆ. ‘ಹೇಗಪ್ಪಾ , ಹಬ್ಬ ಮಾಡೋದು’ ಎಂದು ಅನೇಕರು ಪೇಚಾಡುತ್ತಿದ್ದಾರೆ. ಆದರೆ ಇದರಿಂದ ಯಾವುದೇ ತೊಡಕಿಲ್ಲ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಂದು ಬೆಳಗ್ಗೆ 6.08ನಿಮಿಷದಿಂದ 09.58ನಿಮಿಷದವರೆಗೆ ಗ್ರಹಣ ಸಂಭವಿಸಲಿದೆ. ಆ ನಂತರ ಹಬ್ಬದ ಆಚರಣೆ ಮಾಡಬಹುದು ಎಂಬ ಸಲಹೆ ಕೇಳಿ ಬಂದಿದೆ. ಭಾರತ, ಚೀನಾ, ಹಾಂಗ್‌ ಕಾಂಗ್‌, ಜಪಾನ್‌, ರಷ್ಯಾ ಮತ್ತಿತರ ದೇಶಗಳಲ್ಲಿ ಗ್ರಹಣ ಗೋಚರಿಸಲಿದೆ.

ಗ್ರಹಣ ನೋಡಲು ಬನ್ನಿ : ನಗರದ ಕಸ್ತೂರ್ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದಲ್ಲಿ ಸೂರ್ಯ ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಗ್ರಹಣದ ಟೆಲಿಸ್ಕೋಪ್‌ ಚಿತ್ರಗಳನ್ನು ಮಾ.19ರಂದು ಬೆಳಗ್ಗೆ 6.15ರಿಂದ 7.22ರವರೆಗೆ ವೀಕ್ಷಿಸಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ -22864009, 22864563.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X