ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿ-ಸಂಭ್ರಮದ ಯುಗಾದಿಗೊಂದು ಮುನ್ನುಡಿ!

By Staff
|
Google Oneindia Kannada News


ಯುಗಾದಿ ದಿನ ಬೆಳಗ್ಗೆ ಎಳ್ಳೆಣ್ಣೆಯಿಂದ ಅಭ್ಯಂಗ ಸ್ನಾನವನ್ನು ಮಾಡುವರು. ನಂತರ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು , ಶಾಂಪೂ ಬೇಡ :-) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಯುಗಾದಿ ದಿನ ದಾನ-ಧರ್ಮ

ಯುಗಾದಿ ದಿನ ವಿಷ್ಣುವು ಮತ್ಸ್ಯಾವತಾರವನ್ನು ತಳೆದ ದಿನ ಮತ್ತು ಶ್ರೀರಾಮನು ವನವಾಸದಿಂದ ಮರಳಿದ ದಿನ. ಅಂದು ‘ಯವಿಷ್ಠ’ ಎಂಬ ಅಗ್ನಿಯನ್ನು ಆವಾಹನೆ ಮಾಡಬೇಕು. ಗುರುಗಳಿಗೂ ಮತ್ತು ಅವರ ಕುಟುಂಬದವರಿಗೆ ವಸ್ತ್ರ ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು.

ಯೋಗ್ಯರಾದ ಜೋಯಿಸರಿಂದ ಹೊಸ ವರ್ಷದ ನಾಯಕರು ಮತ್ತು ಅವರ ಫಲಗಳನ್ನು ಪಂಚಾಂಗದ ಮೂಲಕ ತಿಳಿದು, ಅವರಿಗೆ ದಾನ ಮಾಡಬೇಕು. ಅಂದಿನ ದಾನದಲ್ಲಿನ ವಿಶೇಷ ವಸ್ತುಗಳೆಂದರೆ ಪಂಚಾಂಗ ಮತ್ತು ನೀರಿನ ಪಾತ್ರೆ. ಅದಲ್ಲದೇ ಬಡಬಗ್ಗರಿಗೆ ಯಥೋಚಿತವಾದ ದಾನವನ್ನು ಮಾಡಬೇಕು.

(ಪ್ರಾಪ್ತೇ ನೂತನ ಸಂವತ್ಸರೇ ಪ್ರತಿಗೃಹ್ಯಂ ಕುರ್ಯಾದ್ವಜಾರೋಪಣಂ
ಸ್ನಾನ ಮಂಗಲಮಾಚರೇದ್‌ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ।
ದೇವಾನಾಂ ಗುರುಯೋಷಿತಾಂ ಚ ಶಿಸವೋಲಂಕಾರವಸ್ತ್ರಾದಿಭಿಃ
ಸಂಪೂಜ್ಯಾ ಗಣಕಃ ಫಲಂ ಚ ಶೃಣುಯಾತ್ತಸ್ಮಾಚ್ಚ ಲಾಭಪ್ರದಂ।।)

ಬ್ರಹ್ಮ ಪುರಾಣದಲ್ಲಿ ಯುಗಾದಿ

ಈ ಹಬ್ಬ ಬರುವುದು ವಸಂತ ಋತುವಿನಲ್ಲಿ. ವಸಂತ ಎಲ್ಲ ದೇವತೆಗಳಿಗೂ ಮತ್ತಿತರಿಗೂ ಪ್ರಿಯವಾದ ಋತು. ಆ ಸಮಯದಲ್ಲಿ ನಿಸರ್ಗವು ಹೊಸ ಚಿಗುರು ಮತ್ತು ಹೂಗಳಿಂದ ನಳನಳಿಸುವುದು. ಈ ಋತುವಿನ ಸಮಶೀತೋಷ್ಣವಾದ ವಾತಾವರಣವು ದೇವತಾಪೂಜೆಗೆ ಮತ್ತು ಇನ್ನೆಲ್ಲಾ ಶುಭಕಾರ್ಯಗಳಿಗೆ ಹಿತಕರವಾಗಿದೆ. ಬ್ರಹ್ಮಪುರಾಣದಲ್ಲಿ ಹೀಗಿ ಹೇಳಿದೆ

‘ಅಹಮಗ್ನಿರ್ಮಹಾತೇಜಾಃ ಸೋಮಶ್ಚೈಷಾ ಮಮಾಂಬಿಕಾ।
ಅಹಮಗ್ನಿಶ್ಚ ಸೋಮಶ್ಚ ಪ್ರಕೃತ್ಯಾ ಪುರುಷಃ ಸ್ವಯಂ।।’

ಈ ಶೈತ್ಯ ಉಷ್ಣತೆಗಳ ಸಂಗಮ ಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದು ಸರ್ವಥಾ ಉಚಿತವಾಗಿದೆ. ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧಿ. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಸಂವಿಧಾನಕ್ಕೂ ಸ್ಫೂರ್ತಿ ನೀಡುವ ಸಂಧಿಸಮಯ ಇದು. ತನ್ನ ಸೃಷ್ಟಿರಹಸ್ಯವಾದ ವೇದವಿದ್ಯೆಯನ್ನು ಸೃಷ್ಟಿಯ ಆದಿಯಲ್ಲಿ ಉಪದೇಶ ಮಾಡಿದ ಭಗವಂತನ ಮತ್ಸ್ಯಾವತಾರದ ಜಯಂತಿ ಎನಿಸುಕೊಳ್ಳುವ ಸುದಿವಸವಿದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X