ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019
ಹಿಂದೂ ಪಂಚಾಂಗದ ಪ್ರಕಾರ ಗಂಡನ ಪೂಜೆ - ಭೀಮನ ಅಮಾವಾಸ್ಯೆಯೊಂದಿಗೆ ಸಾಲು ಸಾಲು ಹಬ್ಬಗಳ ಪರ್ವ ಆರಂಭವಾಗಲಿದೆ. ಇದೇ ಶುಕ್ರವಾರದಿಂದ (ಆ 2) ಶ್ರಾವಣ ಮಾಸ ಆರಂಭ.
ಕಳೆದ ವರ್ಷದಂತೆ ಈ ಬಾರಿಯೂ ಹಲವು ಹಬ್ಬಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ ಸಾಲುಸಾಲು ಹಬ್ಬಗಳ ರಜೆಯನ್ನು ಸವಿಯಬಹುದಾಗಿದೆ. ಜೊತೆಗೆ, ಫುಲ್ &, ಕಲರ್ ಫುಲ್ ಮೀಲ್ಸ್ ಗಳ ಭರಾಟೆ.
ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ ಹಬ್ಬದ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದ ಎನ್ನದೇ ತಮ್ಮ ತಮ್ಮ ಶಕ್ತ್ಯಾನುಸಾರ ಬರುವ ಹಬ್ಬಗಳನ್ನು ಸ್ವಾಗತಿಸಿ, ಆಚರಿಸಿ, ಸಂಭ್ರಮಿಸುವ ಮಾಸ.

ಪ್ರತೀ ವರ್ಷದಂತೆ, 'ಒನ್ ಇಂಡಿಯಾ ಕನ್ನಡ', ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಇದರ ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ ಅಥವಾ ಬುಕ್ ಮಾರ್ಕ್ ಮಾಡಿಕೊಳ್ಳಿ. ಹ್ಯಾಪ್ಪೀ ಫೆಸ್ಟಿವಲ್ಸ್..
| ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ | |||
| ಕ್ರ. ಸಂಖ್ಯೆ | ದಿನಾಂಕ | ದಿನ | ಹಬ್ಬ |
|---|---|---|---|
| 1 | ಆಗಸ್ಟ್ 1 | ಗುರುವಾರ | ದೀವಿಗೆ ಅಮಾವಾಸ್ಯೆ, ಭೀಮನ ಅಮಾವಾಸ್ಯೆ |
| 2 | ಆಗಸ್ಟ್ 3, 10, 17, 24 | ಶನಿವಾರ | ಶ್ರಾವಣ ಶನಿವಾರ |
| 3 | ಆಗಸ್ಟ್ 5 | ಸೋಮವಾರ | ನಾಗರ ಪಂಚಮಿ, ಕಲ್ಕೀ ಜಯಂತಿ |
| 4 | ಆಗಸ್ಟ್ 6 | ಮಂಗಳವಾರ | ಮಂಗಲಗೌರೀ ವ್ರತ |
| 5 | ಆಗಸ್ಟ್ 9 | ಶುಕ್ರವಾರ | ವರಮಹಾಲಕ್ಷ್ಮೀ ವ್ರತ, ನಿರ್ಭಂದಿತ ರಜೆ |
| 6 | ಆಗಸ್ಟ್ 12 | ಸೋಮವಾರ | ಬಕ್ರೀದ್, ಈದ್-ಉಲ್-ಜುಹಾ, ಸರಕಾರೀ ರಜೆ |
| 7 | ಆಗಸ್ಟ್ 14 | ಬುಧವಾರ | ಚಾಂದ್ರ ಋಗೋಪಾಕರ್ಮ |
| 8 | ಆಗಸ್ಟ್ 15 | ಗುರುವಾರ | ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ, ಯಜುರುಪಾಕರ್ಮ, ನೂಲ ಹುಣ್ಣಿಮೆ, ಸಾರ್ವತ್ರಿಕ ರಜೆ |
| 9 | ಆಗಸ್ಟ್ 17 | ಶನಿವಾರ | ಗುರು ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ |
| 10 | ಆಗಸ್ಟ್ 23 | ಶುಕ್ರವಾರ | ಶ್ರೀಕೃಷ್ಣ ಜನ್ಮಾಷ್ಟಮಿ, ನಿರ್ಭಂದಿತ ರಜೆ |
| 11 | ಆಗಸ್ಟ್ 24 | ಶನಿವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸ |
| 12 | ಸೆಪ್ಟಂಬರ್ 1 | ಭಾನುವಾರ | ಗೌರೀ ತೃತೀಯ, ಮೊಹರಂ ಪ್ರಾರಂಭ |
| 13 | ಸೆಪ್ಟಂಬರ್ 2 | ಸೋಮವಾರ | ಗಣೇಶ ಚತುರ್ಥೀ, ಸಾಮೋಪಾಕರ್ಮ, ಸರಕಾರೀ ರಜೆ |
| 14 | ಸೆಪ್ಟಂಬರ್ 3 | ಮಂಗಳವಾರ | ಋಷಿ ಪಂಚಮೀ |
| 15 | ಸೆಪ್ಟಂಬರ್ 5 | ಗುರುವಾರ | ಡಾ. ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನ |
| ಸೆಪ್ಟಂಬರ್ 8 | ಭಾನುವಾರ | ಸಂತ ಮೇರಿಯಮ್ಮ ಹಬ್ಬ, ನೇಟಿವಿಟಿ | |
| 17 | ಸೆಪ್ಟಂಬರ್ 10 | ಮಂಗಳವಾರ | ಮೊಹರಂ, ಸರಕಾರೀ ರಜೆ |
| 18 | ಸೆಪ್ಟಂಬರ್ 11 | ಮಂಗಳವಾರ | ಸೌರಋಗೋಪಾಕರ್ಮ, ತಿರು ಓಣಂ |
| 19 | ಸೆಪ್ಟಂಬರ್ 12 | ಗುರುವಾರ | ಅನಂತ ಚತುರ್ದಶೀ ವ್ರತ, ನೋಂಪು |
| 20 | ಸೆಪ್ಟಂಬರ್ 13 | ಶುಕ್ರವಾರ | ನಾರಾಯಣ ಗುರು ಜನ್ಮದಿನ |
| 21 | ಸೆಪ್ಟಂಬರ್ 17 | ಮಂಗಳವಾರ | ವಿಶ್ವಕರ್ಮ ಜಯಂತಿ |
| 22 | ಸೆಪ್ಟಂಬರ್ 28 | ಶನಿವಾರ | ಮಹಾಲಯ ಅಮಾವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ನವರಾತ್ರಿ ಆರಂಭ, ಶಾಲಿವಾಹನ ಶಕ 1942 ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಅಶ್ವಯುಜ ಮಾಸ |
| 23 | ಅಕ್ಟೋಬರ್ 2 | ಬುಧವಾರ | ಗಾಂಧೀ ಜಯಂತಿ, ಲಲಿತ ಪಂಚಮಿ, ಸಾರ್ವತ್ರಿಕ ರಜೆ |
| 24 | ಅಕ್ಟೋಬರ್ 5 | ಶನಿವಾರ | ಶಾರದಾಪೂಜೆ |
| 25 | ಅಕ್ಟೋಬರ್ 6 | ಭಾನುವಾರ | ದುರ್ಗಾಷ್ಟಮಿ |
| 26 | ಅಕ್ಟೋಬರ್ 7 | ಸೋಮವಾರ | ಮಹಾನವಮಿ, ಆಯುಧಪೂಜೆ, ಸರಕಾರೀ ರಜೆ |
| 27 | ಅಕ್ಟೋಬರ್ 8 | ಮಂಗಳವಾರ | ವಿಜಯದಶಮಿ, ಮಧ್ವ ಜಯಂತಿ, ಸರಕಾರೀ ರಜೆ |
| 28 | ಅಕ್ಟೋಬರ್ 13 | ಭಾನುವಾರ | ವಾಲ್ಮೀಕಿ ಜಯಂತಿ |
| 29 | ಅಕ್ಟೋಬರ್ 27 | ಭಾನುವಾರ | ನರಕ ಚತುರ್ದಶೀ |
| 30 | ಅಕ್ಟೋಬರ್ 28 | ಸೋಮವಾರ | ದೀಪಾವಳಿ, ಸೋಮಾವತೀ ಅಮಾವಾಸ್ಯೆ |
| 31 | ಅಕ್ಟೋಬರ್ 29 | ಮಂಗಳವಾರ | ಬಲಿಪಾಡ್ಯಮಿ, ಸರಕಾರೀ ರಜೆ |
| 32 | ನವೆಂಬರ್ 1 | ಶುಕ್ರವಾರ | ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ |












Click it and Unblock the Notifications