ಜನ್ಮಾಷ್ಟಮಿ ವಿಶೇಷ: ಸರ್ವಗುಣ ಸಂಪನ್ನ ನಮ್ಮ ಬೆಣ್ಣೆ ಕೃಷ್ಣ!
Recommended Video

ಜಗದೋದ್ಧಾರಕ ಶ್ರೀಕೃಷ್ಣನ ಜನ್ಮದಿನವಾದ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯನ್ನು ಭಾರತದಾದ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 2 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಕುರಿತ ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ.
ಕೃಷ್ಣನಿಗೆ ಅಷ್ಟಭಾರ್ಯ - ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಾಲಿಂದಿ, ಮಿತ್ರವಿಂದ, ನಾಗ್ನಜಿತಿ, ಭದ್ರ ಮತ್ತು ಲಕ್ಷ್ಮಣ ಎಂದು ಹೇಳುತ್ತಾರೆ. ನರಕಾಸುರನನ್ನು ಕೊಂದು ಅವನ ಸೆರೆಮನೆಯಲ್ಲಿರುವ 16100 ರಾಣಿಯರನ್ನು ಮುಕ್ತಗೊಳಿಸಿದನು ಎಂದೂ ಸಹ ಹೇಳುತ್ತಾರೆ.
ಕೃಷ್ಣನು ಮುಖ್ಯವಾಗಿ ಕಂಸ, ಪೂನತಿ, ತ್ರಿನರ್ವತ, ಧೆನುಕಾಸುರ, ವತ್ಸಸುರ, ಕೇಶಿ, ಅಘಸುರ, ಅರಿಷ್ಟಸುರ, ಬಕಾಸುರ, ವ್ಯೋಮಸುರ, ಪ್ರಲಂಬಾಸುರ, ಶಕತಸುರ, ನರಕಾಸುರ, ಬಾಣಸುರ ಮುಂತಾದ ಅನೇಕ ಅಸುರರನ್ನು ಸಂಹಾರ ಮಾಡಿದನು.

ಎಲ್ಲೆಲ್ಲಿದೆ ಕೃಷ್ಣನ ಉಲ್ಲೇಖ?
ಕೃಷ್ಣನ ಬಗ್ಗೆ ಭಾಗವತ ಪುರಾಣ, ವಿಷ್ಣು ಪುರಾಣ, ಮಹಾಭಾರತ ಹಾಗೂ ಭಗವದ್ಗೀತೆ, ಬೌದ್ಧ ಧರ್ಮ, ಜೈನ ಧರ್ಮದಲ್ಲಿ ಉಲ್ಲೇಖವಿದೆ. ವಿಶೇಷವಾಗಿ ಅವನ ಬಾಲಲೀಲೆಯ ಬಗ್ಗೆ ಭಾಗವತದಲ್ಲಿ ವರ್ಣನೆ ಇದ್ದರೆ ಮಹಾಭಾರತದಲ್ಲಿ ಉಪದೇಶವಿದೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲರೂ ಈ ಕತೆಗಳನ್ನು ಆಧರಿಸಿ ಭಜನೆಗಳನ್ನು ರಚಿಸಿದ ಮಹಾನ ಕವಿಗಳಾಗಿದ್ದಾರೆ. ಶ್ರೀಕೃಷ್ಣನ ನೆಲೆಯನ್ನು ಗೋಲಕ ವೃಂದಾವನ, ಗೋಕುಲ, ದ್ವಾರಕಾ, ಮಥುರ ಎಂದು ಬರೆಯಲಾಗಿದೆ. ಅವನ ವಿಶೇಷ ಪೂಜೆ ದ್ವಾರಕಾಧೀಶ-ಗುಜರಾತ್, ಜಗನ್ನಾಥ-ಒರಿಸ್ಸಾ, ವಿಠೋಬಾ-ಮಹಾರಾಷ್ಟ್ರ, ಬಾಲಾಜಿ-ತಿರುಪತಿಯ ಮಂದಿರಗಳಲ್ಲಿ ನಡೆಯತ್ತದೆ.

ಎಷ್ಟೆಲ್ಲ ಹೆಸರು ಕೃಷ್ಣಂಗೆ!
ಶ್ರೀಕೃಷ್ಣನಿಗೆ ಭಕ್ತರು ಸುಂದರ, ಮನಮೋಹನ, ಚಿತ್ತಚೋರ ಎಂದು ಕರೆಯುತ್ತಾರೆ. ಶ್ರೀಕೃಷ್ಣನನ್ನು ಸೌಂದರ್ಯದ ಗಣಿ ಎಂದು ಹೇಳಬಹುದು. 'ಶ್ರೀಕೃಷ್ಣ' ಶಬ್ದದ ಅರ್ಥ 'ಆಕರ್ಷಣೆ ಮಾಡುವವನು' 'ಆನಂದ ಸ್ವರೂಪ' 'ದುರ್ನಡತೆಯಿಂದ ಬಿಡಸುವವನು' ಎಂಬುದಾಗಿದೆ. ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಚಿಕ್ಕಮಕ್ಕಳಿಗೆ ಮುದ್ದು ಕೃಷ್ಣನಂತೆ ವೇಷಭೂಷಣ ತೊಡಿಸಿ ಕಿರೀಟ, ಕೊಳಲುನ್ನು ನೀಡಿ ಶೃಂಗರಿಸಿದಾಗ, ಜನರು ಮಂತ್ರಮುಗ್ಧರಾಗಿ, ಮಕ್ಕಳನ್ನು ಮರೆತು ಅವರಲ್ಲಿ ಶ್ರೀಕೃಷ್ಣನನ್ನು ಕಾಣುತ್ತಾರೆ.

ಸರ್ವಗುಣ ಸಂಪನ್ನ ಶ್ರೀಕೃಷ್ಣ
ಇಂದಿನ ಜಗತ್ತಿನಲ್ಲಿ ರೂಪವಂತರು ಬಹಳ ಜನರಿದ್ದಾರೆ. ಆದರೆ ಶ್ರೀಕೃಷ್ಣನ ಸಮಾನ ಸರ್ವಾಂಗ ಸುಂದರ, ಸರ್ವಗುಣಸಂಪನ್ನ, 16 ಕಲಾಸಂಪನ್ನ, ಸಂಪೂರ್ಣ ನಿರ್ವಿಕಾರಿ, ಮರ್ಯಾದ ಪುರುಷೋತ್ತಮ ಮತ್ತಾರೂ ಇರಲಾರರು. ಈ ಕಲಿಯುಗದಲ್ಲಿ ದೃಷ್ಟಿ-ವೃತ್ತಿಯನ್ನು ಕಲುಷಿತಗೊಳಿಸಿಕೊಳ್ಳದಿರುವವರು, ಕ್ರೋಧಕ್ಕೆ ವಶವಾಗದೇ ಇರುವವರು, ಮೋಹದ ಪಾಶಕ್ಕೆ ಬಲಿಯಾಗದೇ ಇರುವವರು, ಅಹಂಕಾರಕ್ಕೆ ಸಿಲುಕದೇ ಇರುವವರು ಯಾರೂ ಸಿಗುವುದಿಲ್ಲ. ಆದರೆ ಶ್ರೀಕೃಷ್ಣನು ನಿರ್ಮೋಹಿ, ನಿರಹಂಕಾರಿ, ಮಹಾಯೋಗಿ ಆಗಿದ್ದನು.

ಶ್ರೀಕೃಷ್ಣನ ಮನಸ್ಸು ಮಂದಿರಕ್ಕೆ ಸಮಾನ
ಶ್ರೀಕೃಷ್ಣನ ಮೂರ್ತಿಯನ್ನು ಇವತ್ತಿಗೂ ಮಂದಿರಗಳಲ್ಲಿ ಶೃಂಗಾರ ಮಾಡಿ ಪೂಜಿಸಲಾಗುತ್ತದೆ. ಅವನ ಮನಸ್ಸು ಮಂದಿರಕ್ಕೆ ಸಮಾನವಾಗಿತ್ತು. ಶ್ರೀಕೃಷ್ಣನ ಚಿತ್ರಗಳನ್ನು ನೋಡಿದಾಗ ನಯನಗಳಲ್ಲಿ ಶೀತಲತೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಕೃಷ್ಣನನ್ನು ಪಿತಾಂಬರಧಾರಿಯಾಗಿ ಕೊಳಲನ್ನು ನುಡಿಸುತ್ತಿರುವಂತೆ ತೋರಿಸುತ್ತಾರೆ. ಅವನ ಸುತ್ತಮುತ್ತಲೂ ಹಸುಗಳು ಮತ್ತು ಸಂಗಡಿಗರನ್ನು ತೋರಿಸುತ್ತಾರೆ. ಭಕ್ತರು ಕೃಷ್ಣನಮೂರ್ತಿಯ ಚರಣಕಮಲಗಳನ್ನು ತೊಳೆದು ಚರಣಾಮೃತವನ್ನು ಸ್ವೀಕರಿಸಿ ತಾವು ಧನ್ಯರಾದೆವು ಎಂದು ಭಾವಿಸುತ್ತಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications