ಪುಟ್ಟಗೌರಿಯ ಲಕ್ಷ್ಮಿ ವ್ರತ
ಕಮಲದಾ ಮೊಗದೋಳೆ, ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ, ಮಹಾಲಕ್ಷ್ಮಿ ಮನೆಗೆ ಬಾರಮ್ಮ್ಮಾ... ವಿವಿಧ ಭಾರತಿ ಹಾಡುಗಳು ಎಣ್ಣೆನೀರು ಹಾಕಿಕೊಂಡು, ಕಲಶ ಸಿದ್ಧ ಮಾಡುವ ಹೆಂಗಸಿಗೆ ಹಿನ್ನೆಲೆ ಸಂಗೀತ.
ಮನೆ ಮುಂದೆ ಮೂರೇ ನಿಮಿಷದಲ್ಲಿ ಹಾಕಿದ ರಂಗೋಲಿ ಮೇಲಾಗಲೇ ಹಾಲಿನವನ ಸೈಕ್ಲಲಿನ ಟೈರಿನ ಗುರುತು ಮೂಡಿದೆ. ಮಾರ್ಕೆಟ್ಟಿಂದ ತಂದಿದ್ದ ಕಾಸ್ಟ್ಲಿ ಮಾವಿನ ಸೊಪ್ಪಿನ ಯಾವ ಎಲೆಯನ್ನೂ ಹೊರ ಹಾಕದೆ ಕಟ್ಟಿರುವ ತೋರಣ ಇನ್ನೂ ಹಸುರಾಗಿದೆ.
ಮಗಳಿಗೆ 'ಆ ಬೀರು ತೆಗೆದು, ನಿಂದು ನಂದು ಏನೇನು ಒಡವೆಗಳಿವೆಯೋ ಎಲ್ಲಾ ತಗೊಂಡು ಬಾ" ಅಣತಿ. ಬೇರಾವ ಕೆಲಸವನ್ನೂ ಹೇಳಿದ ತಕ್ಷಣ ಮಾಡದ ಹುಡುಗಿ ಪಾದರಸದಂತೆ ಓಡಿ ಹೋಗುತ್ತಾಳೆ. ಈ ನೆವದಲ್ಲಾದರೂ ತನ್ನ ಒಡವೆಗಳನ್ನು ನೋಡುವ, ತೊಡುವ ಬಯಕೆ ಆಕೆಯದು. ಕಳ್ಳರ ಬಗೆಗಿನ ಭಯ. ನಿತ್ಯ ಸ್ಕೂಲಿಗೆ ಒಡವೆ ಹಾಕಿ ಕಳಿಸೋಕಾಗಲ್ಲ. ಇನ್ನು ಯಾವುದಾದರೂ ಫಂಕ್ಷನ್ನಿಗೆ ಹೋದರೆ ಆಡೋವಾಗ ಇವಳಿಗೆ ಮೈ ಮೇಲೆ ಪರಿಜ್ಞಾನವೇ ಇರೋದಿಲ್ಲ ಅನ್ನೋ ಕಾರಣಕ್ಕೆ ಒಡವೆ ನಿಷೇಧ. 'ಯುಗಾದಿ ದಿನ ಸಂಜೆ ಹಾಕ್ಕೊಂಡಿದ್ದ ನೆಕ್‌ಲೇಸು. ಬಲವಂತದಿಂದ ಅಮ್ಮ ಬಿಚ್ಚಿಟ್ಟಿದ್ದಳು. ಈವತ್ತು ಅದನ್ನ ಮತ್ತೆ ತೊಡೋ ಭಾಗ್ಯ ಬಂದಿದೆ" ಸ್ವಗತ ಹೇಳ್ಕೋತಾ ಒಡವೆ ತಂದುಕೊಡ್ತಾಳೆ ಮಗಳು. ಕ್ಷಣದಲ್ಲಿ ಅವಳ ಸ್ವಗತ ಸುಳ್ಳಾಗುತ್ತದೆ. ಆ ನೆಕ್‌ಲೇಸು ಕಲ-ಶದ ಮೇಲೆ ಕುಳಿತಿರುವ ಲಕ್ಷ್ಮಿಯನ್ನ ಅಲಂಕರಿಸಿರುತ್ತೆ.
ಸ್ವಲ್ಪ ಹೊತ್ತು ಮುಖ ಸಿಂಡರಿಸಿ ಒಡ್ಡೊಡ್ಡಾಗಿ ವರ್ತಿಸಿದರೂ, ಅಮ್ಮನ ಬೆಂಡೋಲೆ ಸರಗಳೂ ಲಕ್ಷ್ಮಿ ಮಾಮಿ ಯ ಅಲಂಕರಿಸೋದನ್ನು ನೋಡಿದಾಗ ಹುಡುಗಿ ತಾನಾಗೇ ತಣ್ಣಗಾಗುತ್ತಾಳೆ. ಹೋಗಲಿ ಬಿಡು ಹೊಸ ಬಟ್ಟೆ ಇದೆಯಲ್ಲಾ ... ಅಂದ್ಕೊಂಡು ಸುಮ್ಮನಾಗುತ್ತಾಳೆ.
ಗಣೇಶ ಭಟ್ಟರು ಬರದಿದ್ದರೂ ಅವರ ಮಂತ್ರ ಮನೆ ತುಂಬುತ್ತದೆ : ಅಪ್ಪ ಡ್ರಾನಲ್ಲಿ ಕ್ಯಾಸೆಟ್ಟೊಂದನ್ನು ಹುಡುಕಿ ತಂದು, ಟೇಪ್ ರೆಕಾರ್ಡರನ್ನು ದೇವರ ಮನೆಯ ಪಕ್ಕದಲ್ಲೇ ಇಟ್ಟು ರಿವೈಂಡ್ ಮಾಡುತ್ತಾರೆ. 'ರೆಡಿನಾ?" ಕೇಳಿ, ಪ್ಲೇ ಮಾಡುತ್ತಾರೆ. ವರಮಹಾಲಕ್ಷ್ಮಿ ವ್ರತದ ಮಂತ್ರ ಪಠನೆ ಶುರು. ಅಮ್ಮನ ಜೊತೆ ಈ ಪುಟ್ಟಗೌರಿಯೂ ಲಕ್ಷ್ಮಿ ಪೂಜೆ ಮಾಡುತ್ತಾಳೆ. ಅಪ್ಪ ಟೇಪ್ ರೆಕಾರ್ಡರ್ ಪಕ್ಕದಲ್ಲೇ ಕೂತಿರಬೇಕು. ನೇವೇದ್ಯ, ಮಂಗಳಾರತಿ ಮುಂತಾದವುಗಳಿಗೆ ಅಣಿ ಮಾಡಿಕೊಳ್ಳುವ ಸಮಯದಲ್ಲಿ ಕ್ಯಾಸೆಟ್ಟನ್ನು ಬಂದ್ ಮಾಡುವುದು. ಸಿದ್ಧವಾದ ನಂತರ ಮತ್ತೆ ಹಚ್ಚುವುದು ಅವರ ಕಾಯಕ. ಗಣೇಶ ಭಟ್ಟರು ಬರದಿದ್ದರೂ ಅವರ ಮಂತ್ರ ಮನೆ ತುಂಬುತ್ತದೆ. ನೈವೇದ್ಯಕ್ಕಿಡುವ ತಿನಿಸುಗಳನ್ನೇ ದಿಟ್ಟಿಸಿ, ಮೆಲ್ಲಗೆ ಕೈಹಾಕಲು ಹೋಗೋ ಹುಡುಗಿ ಅಮ್ಮನ ಅಗಲ ಕಣ್ಣು, ಹುಬ್ಬುಗಂಟು ನೋಡಿ ಸುಮ್ಮನಾಗುತ್ತದೆ.
ಬಹು ದಿನಗಳ ನಂತರ ಒಟ್ಟು ಕೂತು ಊಟ ಮಾಡುತ್ತಾರೆ : ಸೀತಾರಾಮ ಶಾಸ್ತ್ರಿ ಅಂಗಡಿಯಿಂದ ತಂದ ಒಬ್ಬಟ್ಟು (ಮನೆಯಲ್ಲಿ ಮಾಡಲು ಪುರುಸೊತ್ತಿಲ್ಲದ ಕಾರಣ), ಅಮ್ಮ ಮಾಡಿದ ಕೋಸಂಬರಿ- ಪಲ್ಯಗಳು ಮಾರ್ಕೆಟ್ಟಿಂದ ತಂದ ಬಾಳೆ ಎಲೆ ಮೇಲೆ ಬಡಿಸಲ್ಪಡುತ್ತವೆ. ಅಪ್ಪ- ಅಮ್ಮ-ಮಗಳು ಬಹು ದಿನಗಳ ನಂತರ ಒಟ್ಟು ಕೂತು ಊಟ ಮಾಡುತ್ತಾರೆ. ಮಗುವಿಗೆ ಇದು ನಿಜವಾದ ಹಬ್ಬ. ಲಕ್ಷ್ಮೀದೇವಿ ಘಮ್ಮೆನ್ನುತ್ತಿದ್ದಾಳೆ, ಸೀರಿಯಲ್ ಸೆಟ್ ಬೆಳಕು ಒಡವೆಗಳಿಗೆ ಇನ್ನೂ ಹೊಳಪು ತಂದಿದೆ. ಮಗು ಊಟ ಮಾಡುತ್ತಾ, ಮಾಮಿ ನೋಡುತ್ತಾ ಕೇಳುತ್ತದೆ- ಅಮ್ಮ ಈ ಪೂಜೆ ಯಾಕೆ ಮಾಡೋದು? ಯಾಕೇಂದರೆ...(ಅಮ್ಮ ತನಗೆ ಗೊತ್ತಿರೋ ಕಥೆಗಳನ್ನ ಒಂದೊಂದಾಗಿ ಹೇಳುತ್ತಾಳೆ)...
ಚೆಸ್ ಕಥೆ : ಒಮ್ಮೆ ಈಶ್ವರ- ಪಾರ್ವತಿ ಚೆಸ್ ಆಡ್ತಾ ಇದ್ದರಂತೆ. ಪಾರ್ವತಿ ಜಾಣೆ, ಎಲ್ಲಾ ಆಟದಲ್ಲೂ ಗೆಲ್ತಿದ್ಲು. ಈ-ಶ್ವ-ರ-ನೋ, ಬಿದ್ದ-ರೂ ಮೀಸೆ ಮಣ್ಣಾ-ಗ-ಲಿ-ಲ್ಲ ಎನ್ನು-ವ ಮೊಂಡು. ನಾನೇ ಗೆದ್ದಿದ್ದು ಅಂತ ಹುಚ್ಚು ವಾದ ಮಾಡ್ತಿದ್ದನಂತೆ. ಇದು ಸರಿಯಿಲ್ಲ. ಗೆಲ್ಲೋರು ಯಾರು ಅಂತ ತೀರ್ಮಾನಿಸೋಕೆ ಒಬ್ಬ ಅಂಪೈರನ್ನ ಕರೆಸಿ ಅಂದಳಂತೆ ಪಾರ್ವತಿ. ಅದಕ್ಕೆ ಹ್ಞೂಂ ಅಂದ ಈಶ್ವರ ತಾನೇ ಸೃಷ್ಟಿಸಿದ್ದ ಚಿತ್ರನೇಮಿ ಅನ್ನೋ ಒಬ್ಬಳನ್ನ ಅಂಪೈರ್ ಕೆಲಸ ಮಾಡೋಕೆ ಹೇಳಿದ. ಈಶ್ವರ ತನ್ನ ಸೃಷ್ಟಿ ಮಾಡಿರೋ ಭಗವಂತ ಅಲ್ವ, ಅದಕ್ಕೆ ಅವಳೂ ಈಶ್ವರಂದೆ ಗೆಲುವು ಅಂತ ಸುಳ್ಳು ತೀರ್ಪು ಕೊಟ್ಟಳು. ಪಾರ್ವತಿಗೆ ನ-ಖ ಶಿಖ ಕೋಪ ಬಂತು. ಕುಷ್ಠರೋಗಿಯಾಗು ಅಂತ ಚಿತ್ರನೇಮಿಗೆ ಶಾಪ ಕೊಟ್ಟಳು. ತಪ್ಪಾಗೋಯ್ತಮ್ಮಾ ಕ್ಷಮಿಸು ಅಂತ ಚಿತ್ರನೇಮಿ ಪಾರ್ವತಿ ಮುಂದೆ ಗೋಗರೆದಳು. ಸರಿ, ನೀನು ಶ್ರಾವಣ ಮಾಸದ ಹುಣ್ಣಿಮೆಗೆ ಮುಂಚೆ ಬರೋ ಶುಕ್ರವಾರ ವರಮಹಾಲಕ್ಷ್ಮಿ ವ್ರತ ಮಾಡು. ಹೊತ್ತಿರೋ ಶಾಪದಿಂದ ವಿಮುಕ್ತಿ ಸಿಗುತ್ತೆ ಅಂದಳಂತೆ ಪಾರ್ವತಿ. ವ್ರತ ಮಾಡಿದ್ಮೇಲೆ ಕುಷ್ಠರೋಗ ಮಟಾಮಾಯ. ಆವತ್ತಿಂದ ಎಲ್ಲಾ ಹೆಂಗಸರು- ಹೆಣ್ಣು ಮಕ್ಕಳು ಆಯುರಾಗೋಗ್ಯ - ಐಶ್ವರ್ಯ, ಒಳ್ಳೆಬುದ್ಧಿ ಕೊಡಮ್ಮ ಅಂತ ಈ ಪೂಜೆ ಮಾಡ್ತಾ ಬಂದಿದಾರೆ.
(ಊಟ ಮುಗಿಯುತ್ತೆ, ಮಂಚದ ಮೇಲೆ ಅಮ್ಮನ ಜೊತೆ ಮಲಗೋ ಮಗಳು ಇನ್ನೊಂದು ಕಥೆ ಕೇಳಮ್ಮ ಅನ್ನುತ್ತಾಳೆ. ಕಥಾವಳಿ ಮುಂದುವರೆಯುತ್ತೆ...)
ಶರ್ಮದಿ ಕಥೆ : ಶರ್ಮದಿ ಎಂಬ ಸಾಧ್ವಿಗೆ ಒಂದಿನ ಕನಸಿನಲ್ಲಿ ಲಕ್ಷ್ಮಿ ಕಾಣಿಸಿಕೊಂಡಳು. ನೀನು ತುಂಬಾ ಒಳ್ಳೆಯೋಳು. ನಿನ್ನ, ನಿನ್ನ ಸಂಸಾರದ ಕಷ್ಟವೆಲ್ಲಾ ಬಗೆಹರೀಬೇಕಾದ್ರೆ ನನ್ನ ಪೂಜೆ ಮಾಡು ಅಂದಳು. ಎಚ್ಚರವಾದೊಡನೆ ಶರ್ಮದಿ ಮಕ್ಕಳನ್ನು ಎಬ್ಬಿಸಿ, ಸ್ನಾನ ಮಾಡಿಸಿ, ತಾನೂ ಸ್ನಾನ ಮಾಡಿ ಲಕ್ಷ್ಮಿ ಪೂಜೆ ಮಾಡಿದಳು. ಅದನ್ನು ಕಂಡ ಅಕ್ಕಪಕ್ಕದ ಮನೆಯವರೂ ಲಕ್ಷ್ಮೀ ಪೂಜೆ ಮಾಡಲು ಶುರುಮಾಡಿದರಂತೆ. ಆಮೇಲೆ ಕಲಶ ಇಟ್ಟು ಪಾಂಗಿತವಾಗಿ ಪೂಜೆ ಮಾಡತೊಡಗಿದರಂತೆ. (ಕಥೆ ಮುಗಿಯೋ ಹೊತ್ತಿಗೆ ಮಗು ಕಣ್ಮುಚ್ಚಿರುತ್ತೆ)
ಆಗ ಮಗುವಿಗೆ ಹಬ್ಬ ಅಂದ್ರೆ ಇದಪ್ಪಾ ಅನಿಸುತ್ತೆ : ಸಂಜೆ. ಅರಿಶಿನ ಕುಂಕುಮ ತಗೋಳೋಕೆ ಮುತ್ತೆೈದೆಯರೆಲ್ಲಾ ಮನೆಗೆ ಬರುತ್ತಾರೆ. ಮಗು ಅದೇ ನನ್ನ ನೆಕ್‌ಲೇಸು ಗೆಳತಿಯರಿಗೆ ದೂರದಿಂದಲೇ ತೋರಿಸುತ್ತೆ. ರಾತ್ರಿ ಮತ್ತೊಮ್ಮೆ ಪೂಜೆ ಮಾಡಿ, ಕಲಶ ಕದಲಿಸಿದ ಮೇಲೆ, ಲಕ್ಷ್ಮಿ ನಿರಾಭರಣಳಾಗುತ್ತಾಳೆ. ತನ್ನ ನೆಕ್‌ಲೇಸನ್ನು ಕೈಲಿ ಹಿಡಿವ ಮಗು, 'ಅಮ್ಮ ಒಂದು ಸ್ವಲ್ಪ ಹೊತ್ತು ಹಾಕೊಂತೀನಮ್ಮಾ" ಅಂತ ನಿವೇದಿಸುತ್ತೆ. ಸ್ವಲ್ಪ ತಡೆಯುವ ಅಮ್ಮ, 'ಸರಿ, ಎಲ್ಲೂ ಹೊರಗ್ಹೋಗಬೇಡ" ಅಂತಾಳೆ. ನೆಕ್‌ಲೇಸ್ ಹಾಕ್ಕೊಂಡ ಮಗು ಕನ್ನಡಿ ಮುಂದೆ ನಿಂತು -ಕ-ನ್ನ-ಡಿ-ಯ-ಲ್ಲೇ ಕರಗಿ ಹೋ-ಗು-ತ್ತಾ-ಳೆ, ಅಮ್ಮ -ಕಿ-ರು-ಚು-ವ-ವ-ರೆ-ಗೂ. ಮಗುವಿ-ನ ಪಾಲಿ-ಗೆ ಹಬ್ಬ ಅಂದ್ರೆ ಇದಪ್ಪಾ ಅನಿಸುತ್ತೆ.ಮಾರನೇ ದಿನ ಗೆಳತಿಯರು, 'ಏನೇನ್ಮಾಡಿದ್ರೆ ನಿಮ್ಮನೇಲಿ" ಅಂತ ಕೇಳುವಾಗ ತಾನು ನೆಕ್‌ಲೇಸ್ ತೊಟ್ಟದ್ದನ್ನೇ ಮೊದಲು ಹೇಳುವ ಹುಡುಗಿ ಅಮ್ಮ ಹೇಳಿದ ಕಥೆಗಳ-ನ್ನು ಹೇಳುವಾ-ಗ ತಡ-ವ-ರಿ-ಸು-ತ್ತಾ-ಳೆ.











Click it and Unblock the Notifications