Happy Mahashivratri 2024 Wishes: ಶಿವರಾತ್ರಿಯಂದು ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸಿ
ಮಹಾಶಿವರಾತ್ರಿ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. 2024ರಲ್ಲಿ ಅಂದರೆ ಈ ವರ್ಷ ಮಹಾಶಿವರಾತ್ರಿ ಹಬ್ಬವನ್ನು ಮಾರ್ಚ್ 8 ರಂದು(Mahashivratri 2024)ಆಚರಿಸಲಾಗುತ್ತದೆ. ಈ ದಿನದಂದು ಎಲ್ಲಾ ಭಕ್ತರು ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥಗಳ ನೆರವೇರಿಕೆಗಾಗಿ ಪ್ರಾರ್ಥಿಸುತ್ತಾರೆ.
ಮಹಾಶಿವರಾತ್ರಿಯನ್ನು 'ಶಿವನ ಮಹಾ ರಾತ್ರಿ' ಎಂದು ಕರೆಯಲಾಗುತ್ತದೆ. ಸಾಗರ ಮಂಥನದ ಸಮಯದಲ್ಲಿ ಸಾಗರದಿಂದ ಹೊರಬಂದ ವಿಷವನ್ನು ಶಿವನು ತನ್ನ ಗಂಟಲಿನಲ್ಲಿ ಇಟ್ಟುಕೊಂಡು ಇಡೀ ವಿಶ್ವವನ್ನು ರಕ್ಷಿಸಿದನು ಎಂದು ಹೇಳಲಾಗುತ್ತದೆ. ಈ ವಿಷದಿಂದ ಶಿವ ನಿದ್ದೆಗೆ ಜಾರದಂತೆ ನೋಡಿಕೊಳ್ಳಲು ದೇವಾನುದೇವತೆಗಳು ರಾತ್ರಿಯಿಡಿ ಜಾಗರಣೆ, ಜಪ-ತಪ ಮಾಡುತ್ತಾರೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.

ಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ?
ಪುರಾಣಗಳ ಪ್ರಕಾರ ಶಿವನು ಮಹಾಶಿವರಾತ್ರಿಯ ದಿನದಂದು ಪಾರ್ವತಿ ದೇವಿಯನ್ನು ವಿವಾಹವಾದನು. ಅದೇ ರಾತ್ರಿ ಪರಶಿವನು ತಾಂಡವ ನೃತ್ಯವನ್ನು ಮಾಡಿದನು ಎಂದು ಹೇಳಲಾಗುತ್ತದೆ. ಹೀಗಾಗಿ ಈ ದಿನ ಪಾರ್ವತಿ ದೇವಿಯನ್ನು ಮಹಿಳೆಯರು ಪೂಜಿಸುತ್ತಾರೆ. ಜೊತೆಗೆ ಉತ್ತಮ ಪತಿ ಮತ್ತು ದೀರ್ಘ ದಾಂಪತ್ಯ ಜೀವನವನ್ನು ನೀಡುವಂತೆ ಬೇಡಿಕೊಳ್ಳುತ್ತಾರೆ. ಈ ದಿನ ಭಕ್ತರು ಶಿವಲಿಂಗಕ್ಕೆ ಹಣ್ಣು, ಹೂವು ಮತ್ತು ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ ಉಪವಾಸ ಆಚರಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ನೀವು ಈ ಸಂದೇಶಗಳನ್ನು ಕಳುಹಿಸಬಹುದು.
ಮಹಾಶಿವರಾತ್ರಿ ಸಂದೇಶಗಳು, ಶುಭಾಶಯಗಳು...
*ಶಿವನ ಆರಾಧನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಬೆಳಕನ್ನು ನೀಡುತ್ತದೆ. ಹೀಗಾಗಿ ಶಿವರಾತ್ರಿಯಂದು ಶ್ರದ್ಧಾ ಭಕ್ತಿಯಿಂದ ಶಿವನನ್ನು ಪೂಜಿಸಿ ಪರಮಾತ್ಮನ ಅನುಗ್ರಹವನ್ನು ಪಡೆಯಿರಿ. ಜೈ ಬಾಬಾ ಅಮರನಾಥ!
*ನಿಮ್ಮೆಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು. ಭೋಲೆನಾಥನು ಈ ಜಗತ್ತಿನ ಎಲ್ಲ ಜನರಿಗಾಗಿ ತನ್ನನ್ನು ತಾನು ಅರ್ಪಿಸಲು ಸಿದ್ದನಾದನು. ಹೀಗಾಗಿ ಆ ಪರಶಿವನಿಗಾಗಿ ಪ್ರಾರ್ಥಿಸೋಣ. ಶಿವ ನಿಮಗೆ ಸಂತೋಷ, ಶಾಂತಿ ಮತ್ತು ಸಾಕಷ್ಟು ನಗುವನ್ನು ನೀಡಲಿ. ಇದು ಇಂದಿನ ನನ್ನ ಪ್ರಾರ್ಥನೆ. ಓಂ ನಮಃ ಶಿವಾಯ!!
*ಮಹಾ ಶಿವರಾತ್ರಿಯ ಈ ಹಬ್ಬದಂದು ಶಿವ ಮತ್ತು ತಾಯಿ ಪಾರ್ವತಿ ದೇವಿಯ ಶಕ್ತಿಯು ನಿಮ್ಮೆಲ್ಲರನ್ನು ಆಶೀರ್ವದಿಸಲಿ.
* ಶಿವನು ಎಲ್ಲರಿಗೂ ತನ್ನ ಆಶೀರ್ವಾದವನ್ನು ನೀಡಲಿ ಮತ್ತು ಅವರ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ಶಕ್ತಿಯನ್ನು ನೀಡಲಿ. ಮಹಾ ಶಿವರಾತ್ರಿಯ ಶುಭಾಶಯಗಳು.
*ಜೈ ಶಿವಶಂಕರ್ ಭೋಲೆನಾಥ್!!! ಉದಾತ್ತ ಜ್ಞಾನದಿಂದ ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಮಗೆ ಅನುಗ್ರಹಿಸು ಪರಶಿವನೆ. ಪ್ರತಿ ಮನೆಯಲ್ಲೂ ಸುಖ ಶಾಂತಿ ನೆಲೆಸುವಂತೆ ಮಾಡು!!!
*ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಸರ್ವಶಕ್ತನಾದ ಶಿವನು ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಮತ್ತು ಪರಿಪೂರ್ಣ ಆರೋಗ್ಯವನ್ನು ದಯಪಾಲಿಸಲಿ.
*ನಿಮ್ಮೆಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ಎಲ್ಲರಿಗೂ ಆಶೀರ್ವಾದವನ್ನು ನೀಡಲಿ. ಈ ಹಬ್ಬ ಎಲ್ಲರಿಗೂ ಸಾರ್ಥಕತೆಯನ್ನು ತರಲಿ.
*ಮಹಾಶಿವರಾತ್ರಿಯ ರಾತ್ರಿಯನ್ನು ಆಚರಿಸೋಣ. ಯಾಕೆಮದರೆ ಇದು ಶಿವ ಮತ್ತು ಪಾರ್ವತಿಯ ಮಿಲನದ ರಾತ್ರಿ. ಇದು ಸೃಷ್ಟಿಯ ರಾತ್ರಿಯೂ ಹೌದು.. ಶಿವರಾತ್ರಿಯ ಶುಭಾಶಯಗಳು!
*ಭಗವಾನ್ ಶಿವನು ನಿಮ್ಮ ಎಲ್ಲಾ ಶಕ್ತಿಯನ್ನು ನಿಮಗೆ ನೆನಪಿಸಲಿ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಜೀವನದಲ್ಲಿ ಶ್ರಮಿಸಲು ನಿಮ್ಮನ್ನು ಪ್ರೇರೇಪಿಸಲಿ. ನಾನು ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ.
*ಭಗವಾನ್ ಶಿವನ ಆಶೀರ್ವಾದ ನಿಮಗೆ ಸಂತೋಷ, ಶಾಂತಿ, ಉತ್ತಮ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಸಾಮರಸ್ಯವನ್ನು ತರಲಿ. ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳು.
*ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರಲು ಭಗವಾನ್ ಶಿವನ ದೈವಿಕ ಶಕ್ತಿ ಯಾವಾಗಲೂ ಇರಲಿ. ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳು.
* ಶಿವರಾತ್ರಿಯ ಈ ಶುಭ ಸಂದರ್ಭವು ನಿಮ್ಮ ಸುತ್ತಲಿನ ಎಲ್ಲಾ ಅಂಧಕಾರ ಮತ್ತು ಸಮಸ್ಯೆಗಳನ್ನು ಹೋಗಲಾಡಿಸುವ ಮೂಲಕ ನಿಮ್ಮ ಜೀವನವನ್ನು ಸಕಾರಾತ್ಮಕತೆಯಿಂದ ತುಂಬಲಿ ಎಂದು ನಾನು ಬಯಸುತ್ತೇನೆ.
* ಓಂ ನಮಃ ಶಿವಾಯ ಪಠಣವು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಎಲ್ಲಾ ನಕಾರಾತ್ಮಕತೆಯ ವಿರುದ್ಧ ಆಶೀರ್ವದಿಸಲಿ. ಮಹಾಶಿವರಾತ್ರಿಯ ಶುಭಾಶಯಗಳು.
*ಈ ಪವಿತ್ರ ದಿನವನ್ನು ನಮ್ಮ ಪ್ರೀತಿಪಾತ್ರರೊಂದಿಗೆ ಆಚರಿಸಲು ಶಿವನನ್ನು ಪ್ರಾರ್ಥಿಸೋಣ... ಮಂತ್ರಗಳನ್ನು ಪಠಿಸೋಣ. ಆನಂದದಾಯಕ ಮತ್ತು ಯಶಸ್ವಿ ಜೀವನಕ್ಕಾಗಿ ಅವರ ಆಶೀರ್ವಾದವನ್ನು ಪಡೆಯೋಣ ... ನನ್ನ ಹೃದಯದಿಂದ, ನಾನು ನಿಮಗೆ ನೀಡುವ ಮಹಾ ಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ.












Click it and Unblock the Notifications