ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಶಿವರಾತ್ರಿ ವಿಶೇಷ: ಮೈಸೂರಿನಲ್ಲಿ 21 ಅಡಿ ಎತ್ತರದ ತೆಂಗಿನಕಾಯಿ ಶಿವಲಿಂಗ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 10: ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಆಚರಣೆಯ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಭಕ್ತರು ಶಿವನ ಜಪ ಮಾಡಲು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ಬಾರಿಯ ಹಬ್ಬದ ಆಚರಣೆಗೆ ಸಾಂಸ್ಕೃತಿಕ ನಗರಿಯಲ್ಲಿ ವಿಶೇಷ ಆಕರ್ಷಣೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ 21 ಅಡಿ ಎತ್ತರದ ಬೃಹತ್ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಅದೂ ಕೂಡ ಶಿವನ ಪೂಜೆಗೆ ಅರ್ಪಿಸಲಾದ ತೆಂಗಿನಕಾಯಿಗಳಿಂದ ಶಿವಲಿಂಗವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಮೈಸೂರು; ಶಿವರಾತ್ರಿಗಾಗಿ 21 ಅಡಿ ತೆಂಗಿನಕಾಯಿ ಶಿವಲಿಂಗಮೈಸೂರು; ಶಿವರಾತ್ರಿಗಾಗಿ 21 ಅಡಿ ತೆಂಗಿನಕಾಯಿ ಶಿವಲಿಂಗ

ಮೈಸೂರು ನಗರದ ಆಲನಹಳ್ಳಿ ವೃತ್ತದ ಮೈದಾನದಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹದಾಕಾರ ಶಿವಲಿಂಗ ಜನರನ್ನು ತನ್ನತ್ತ ಸೆಳೆಯುತ್ತಿದೆ. ಹಬ್ಬದ ಅಂಗವಾಗಿ ಆಲನಹಳ್ಳಿಯ ಬ್ರಹ್ಮಕುಮಾರಿ ಆಶ್ರಮದವರು ತೆಂಗಿನ ಕಾಯಿಗಳಿಂದಲೇ ಈ ಬೃಹತ್‌ ಶಿವಲಿಂಗವನ್ನು ನಿರ್ಮಾಣ ಮಾಡಿದ್ದಾರೆ.

Mysuru: 21-Foot-Tall Coconut Shivalinga Installed For Maha Shivarathri

ಈ ನಿರ್ಮಾಣದ ಹಿಂದೆ 15 ಜನ ಕಲಾವಿದರ 8 ದಿನಗಳ ಕಾಲದ ಶ್ರಮ ಇದೆ. ಇದರ ನಿರ್ಮಾಣಕ್ಕೆ ಸುಮಾರು 8 ಸಾವಿರ ತೆಂಗಿನಕಾಯಿಗಳನ್ನು ಬಳಸಲಾಗಿದೆ. ಬೃಹದಾಕಾರ ಶಿವಲಿಂಗವು 21 ಅಡಿ ಎತ್ತರವಿದ್ದು, 12 ಅಡಿ ಅಗಲ ಇದೆ. ಶಿವರಾತ್ರಿ ಅಂಗವಾಗಿ ನಿರ್ಮಾಣವಾಗಿರುವ ಬೃಹತ್ ಲಿಂಗವನ್ನು ಒಂದು ವಾರಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಸದ್ಯ ಎಲ್ಲರಿಗೂ ಉಚಿತ ಪ್ರವೇಶವನ್ನು ನೀಡಲಾಗಿದ್ದು, ಪೊಲೀಸರ ಅನುಮತಿ ಸಿಕ್ಕಲ್ಲಿ ಇನ್ನು ಒಂದಷ್ಟು ದಿನ ಪ್ರದರ್ಶನವನ್ನು ವಿಸ್ತರಿಸಲಾಗುತ್ತದೆ.

Mysuru: 21-Foot-Tall Coconut Shivalinga Installed For Maha Shivarathri

ತೆಂಗಿನಕಾಯಿಗಳ ಈ ಬೃಹತ್‌ ಸುಮಾರು 4 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಆಶ್ರಮ ಮೂಲಗಳು ತಿಳಿಸಿವೆ. ಶಿವಲಿಂಗದ ಸುತ್ತ ಶಾಮಿಯಾನ ಹಾಕಿ ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸುಂದರವಾಗಿ ಮೂಡಿಬಂದಿರುವ ಲಿಂಗವನ್ನು ನೋಡಲು ಜನರು ಈಗಾಗಲೇ ಬರುತ್ತಿದ್ದಾರೆ. ಬೃಹತ್ ಲಿಂಗದ ಬಳಿ ನಿಂತು ಪುರುಷರೂ, ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಈ ಶಿವಲಿಂಗದ ಆಕರ್ಷಣೆಗೆ ಶಿವ ಭಕ್ತರು, ಸಾರ್ವಜನಿಕರು ಖುಷಿ ಆಗಿದ್ದಾರೆ.

English summary
For the first time, a huge Coconut Shivalinga 21 feet high has been built in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X