ಮಧುರ ಅಮರವೀ ಶಿವ ಗಾನಾಮೃತ
ಸಿನಿಮಾ : ಭಕ್ತ ಸಿರಿಯಾಳ, ಗಾಯಕ : ಎಸ್.ಪಿ. ಬಾಲ ಸುಬ್ರಹ್ಮಣ್ಯಂ
ಶಿವ ಶಿವ ಎಂದರೆ ಭಯವಿಲ್ಲ , ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತನಿಗೆ ನರಕಾ ಇಲ್ಲ
ಜನುಮ ಜನುಮಗಳ ಕಾಟವು ಇಲ್ಲ II ಪಲ್ಲವಿ II
ಅನ್ನದಾನವ ಮರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸಿ ಹಗಲಿರುಳು
ದೀನಾನಾಥನ ಮರೆಯದಿರು
ಕಾಯಕ ಮಾಡುತ ಎಂದೆಂದೂ
ಅತ್ಯಾನಂದ ಪಡೆಯುತಿರು
ದಾನವೆ ಜಗದೊಳು ತಪವಯ್ಯ
ಧ್ಯಾನವೆ ಜನಕರ ಜಪವಯ್ಯ
ಅಪಕಾರವನು ನೀ ಮಾಡಿದರೆ
ಕೈಲಾಸವದು ಸಿಗದಲ್ಲಾ
ಸಿನಿಮಾ : ಕಿತ್ತೂರು ಚೆನ್ನಮ್ಮ
ರಚನೆ : ಅಕ್ಕ ಮಹಾದೇವಿ
ಗಾಯಕಿ : ಪಿ. ಸುಶೀಲಾ
ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಗಳಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ
ಹೇಳು ಚನ್ನಮಲ್ಲಿಕಾರ್ಜುನ
ಸಿನಿಮಾ : ಸತ್ಯ ಹರಿಶ್ಚಂದ್ರ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ
ಗಾಯಕ : ಘಂಟಸಾಲ
ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ
ನಮೋ ಗಿರೀಶ ಗಿರಿಜೇಶ ಶಂಭೋ
ಹೇ ಪಾರ್ವತಿ ಹೃದಯ ವಲ್ಲಭ ಚಂದ್ರಮೌಳೇ
ಭೂತಾದಿಪ ಪ್ರತಾಪ
ನಮೋ ಭೂತನಾಥ
ನಮೋ ದೇವದೇವ
ನಮೋ ಭಕ್ತಪಾಲ
ನಮೋ ದಿವ್ಯ ತೇಜಾ II ಪಲ್ಲವಿ II
ಭವ ವೇದಸಾರ
ಸದಾ ನಿರ್ವಿಕಾರ
ನಮೋ ಲೋಕಪಾಲ
ನಮೋ ನಾದಲೋಲ
ಪಾರ್ವತಿ ವಲ್ಲಭ ನೀಲಕಂಠ
ಸದಾ ಸುಪ್ರಕಾಶ
ಮಹಾ ಪಾಪನಾಶ
ಕಾಶಿ ವಿಶ್ವನಾಥ
ದಯಾಸಿಂಧು ದಾಸ
ನಮೋ ಪಾರ್ವತಿ ವಲ್ಲಭ ನೀಲಕಂಠ












Click it and Unblock the Notifications