ಕನ್ನಡದ ಮೋಡಿ ನಿಮ್ಮ ಬಟ್ಟೆ ಮೇಲಿದೆ ನೋಡಿ..

Kannada Wording T Shirts
ಇವತ್ತು ಕನ್ನಡದ ಹುಟ್ಟುಹಬ್ಬ. ಎದೆಯಾಳದಲ್ಲಿ ಹುದುಗಿರುವ ಚೆಂದದ ಕನ್ನಡ ಭಾಷೆಗೆ ನಮ್ಮ ನಮನ ಸಲ್ಲಿಸುವ ಸುದಿನ. ಭಾಷಾಭಿಮಾನವನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಕ್ತಪಡಿಸುತ್ತಾರೆ. ನೀವೂ ವಿಭಿನ್ನ ರೀತಿಯಲ್ಲಿ ನಿಮ್ಮ ಭಾಷಾಭಿಮಾನ ವ್ಯಕ್ತ ಪಡಿಸಬೇಕು ಅಂತ ಯೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಬಿಡಿ.

ಮೆಚ್ಚಿನ ನಾಯಕರ ಚಿತ್ರಗಳನ್ನು ಅಂಗಿ ಮೇಲೆ ಬಿತ್ತರಿಸಿಕೊಂಡು ಅಭಿಮಾನ ತೋರುವ ಹಾಗೆ ಕನ್ನಡದ ಅಭಿಮಾನವನ್ನು ಹೇಗೆ ತೋರಿಸಿಕೊಳ್ಳಬಹುದು?

ಅದೆಲ್ಲಾ ಸರಿ, ನಮ್ಮ ಹುಟ್ಟುಹಬ್ಬಕ್ಕೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡುವ ನಾವು, ಏಕೆ ನಮ್ಮ ಪ್ರೀತಿಯ ಭಾಷೆಯ ಹುಟ್ಟುಹಬ್ಬಕ್ಕೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಬಾರದು?

ಹೀಗಂತ ಯೋಚನೆ ಬಂದಿದ್ದೆ, ನೆನಪಾಗಿದ್ದು ಟೋಟಲ್ ಕನ್ನಡ. ಜಯನಗರದಲ್ಲಿರುವ ಈ ಟೋಟಲ್ ಕನ್ನಡ ವಿನೂತನವಾದ, ಕನ್ನಡದ ಅಕ್ಷರಗಳನ್ನು ಹೊಂದಿರುವ ಹೊಸ ಅಂಗಿಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೆ ಉಡುಗೊರೆ ನೀಡಲು ಕನ್ನಡ ಅಕ್ಷರ ಹೊಂದಿರುವ ಗಡಿಯಾರ, ಇನ್ನಿತರ ವಸ್ತುಗಳೂ ಇವೆ.

ಅತಿ ಆಧುನಿಕ ವಿನ್ಯಾಸದಲ್ಲಿರುವ ಈ ಕನ್ನಡದ ಅಂಗಿ ನಿಮ್ಮ ಮನಮೆಚ್ಚಿಸುವುದಲ್ಲದೆ, ಭಾಷೆಯೆಡೆಗಿನ ಅಭಿಮಾನವನ್ನು ವ್ಯಕ್ತಪಡಿಸಲೂ ಅವಕಾಶ ನೀಡಿದೆ. ಹಾಗಾದರೆ ಚಿಂತೆ ಬಿಡಿ, ಕನ್ನಡದ ಅಂಗಿಗಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+