Surya Grahan 2023: ಸೂರ್ಯಗ್ರಹಣದ ಸೂತಕ ಕಾಲದಲ್ಲಿ ನವರಾತ್ರಿ ಆರಾಧನೆ? ಜನರಲ್ಲಿ ಮನೆಮಾಡಿದ ಆತಂಕ!
2023ನೇ ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ ತಿಂಗಳ 14ರಂದು ಅಂದರೆ ಶನಿವಾರ ಸಂಭವಿಸಲಿದೆ. ಅಕ್ಟೋಬರ್ 15 ರಿಂದ ಶಾರದೀಯ ನವರಾತ್ರಿ ಆರಂಭವಾಗುತ್ತಿರುವ ಕಾರಣ ಅಕ್ಟೋಬರ್ 14 ರಂದು ಸಂಭವಿಸುವ ಈ ಗ್ರಹಣದ ಬಗ್ಗೆ ಜನರ ಮನಸ್ಸಿನಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಗ್ರಹಣ ನವರಾತ್ರಿ ಪೂಜೆಗೆ ಧಕ್ಕೆಯಾಗುವುದೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ.
ವರ್ಷದ ಎರಡನೇ ಸೂರ್ಯಗ್ರಹಣ ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ. ಅಂದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಸೂರ್ಯ ಗ್ರಹಣ ದುರ್ಗೆಯ ಆರಾಧನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಹಣ ಭೌಗೋಳಿಕ ವಿದ್ಯಮಾನವಾಗಿದ್ದರೂ ಹಿಂದೂ ಧರ್ಮದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿಲ್ಲ. ಆದ್ದರಿಂದಲೇ ಸೂರ್ಯಗ್ರಹಣದ ಸೂತಕದ ಅವಧಿ ಬಗ್ಗೆ ಜನರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ.

ಸೂತಕದ ಅವಧಿ
ಸೂರ್ಯಗ್ರಹಣದ ಸಮಯದಲ್ಲಿ ಪೂಜೆಯನ್ನು ಮಾಡಲಾಗುವುದಿಲ್ಲ ಮತ್ತು ಅದರ ಸೂತಕ ಅವಧಿಯು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಭಾರತದಲ್ಲಿ ಗ್ರಹಣವು ಗೋಚರಿಸುವುದಿಲ್ಲ, ಆದ್ದರಿಂದ ಈ ಸೂರ್ಯಗ್ರಹಣದ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ ಎಂದು ನಂಬಲಾಗಿದೆ. ಅಕ್ಟೋಬರ್ ತಿಂಗಳ 14ರಂದು ಸೂರ್ಯಗ್ರಹಣ ಸಂಭವಿಸುವುದರಿಂದ ಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕ ಅವಧಿಯು ಪ್ರಾರಂಭವಾಗುತ್ತದೆ. ಅಂದರೆ ನವರಾತ್ರಿ ಆರಂಭವಾಗುವ ಮೊದಲು ಸೂತಕ ಅವಧಿ ಪೂರ್ಣಗೊಳ್ಳುತ್ತದೆ.
ಎರಡನೇ ಚಂದ್ರಗ್ರಹಣ ಕೂಡ ಇದೇ ತಿಂಗಳು
ಇದೇ ತಿಂಗಳಿನಲ್ಲಿ ವರ್ಷದ ಎರಡನೇ ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಚಂದ್ರಗ್ರಹಣವು ಅಕ್ಟೋಬರ್ 28-29 ರ ರಾತ್ರಿ ಸಂಭವಿಸುತ್ತದೆ. ಇದು ಭಾರತದಲ್ಲಿ ಗೋಚರಿಸುತ್ತದೆ.

ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?
ಅಕ್ಟೋಬರ್ 14ರ ಶನಿವಾರ ರಾತ್ರಿ 8:34ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗಿನ ಜಾವ 2:25ಕ್ಕೆ ಮುಕ್ತಾಯವಾಗಲಿದೆ. ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ ತಿಂಗಳಲ್ಲಿ ಸಂಭವಿಸಿತ್ತು. ಈ ವರ್ಷ ಶಾರದೀಯ ನವರಾತ್ರಿಯ ಕಲಶ ಸ್ಥಾಪನಾ ಸಮಯ ಅಕ್ಟೋಬರ್ 15 ರಂದು ಬೆಳಿಗ್ಗೆ 11:44 ರಿಂದ ಆರಂಭವಾಗುತ್ತದೆ. ಹೀಗಾಗಿ ಸೂರ್ಯಗ್ರಹಣ ಸೂತಕ ಸಮಯದ ಬಗ್ಗೆ ಆತಂಕ ಪಡುವ ಆತಂಕಪಡುವ ಅಗತ್ಯವಿಲ್ಲ.
ಸೂರ್ಯಗ್ರಹಣ ಎಲ್ಲಿ ಗೋಚರಿಸುತ್ತದೆ?
ಸೂರ್ಯಗ್ರಹಣವು ಆಫ್ರಿಕಾದ ಪಶ್ಚಿಮ ಭಾಗ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುತ್ತದೆ.
ಸೂರ್ಯಗ್ರಹಣವನ್ನು ಏನೆಂದು ಕರೆಯುತ್ತಾರೆ?
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ, ಸೂರ್ಯನು ಸ್ವಲ್ಪ ಸಮಯದವರೆಗೆ ಅದರ ಹಿಂದೆ ಇರುತ್ತಾನೆ. ಅದೇ ಘಟನೆಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಘಟನೆ ಯಾವಾಗಲೂ ಅಮವಾಸ್ಯೆಯಂದು ನಡೆಯುತ್ತದೆ.

ಸೂರ್ಯ ಗ್ರಹಣದಂದು ದೇವಸ್ಥಾನ ಮುಚ್ಚಲು ಕಾರಣವೇನು?
ಹಿಂದೂ ಸಂಪ್ರದಾಯದಲ್ಲಿ ಗ್ರಹಣ ಧಾರ್ಮಿಕ ಮಹತ್ವವನ್ನು ಹೋಮದಿದೆ. ಗ್ರಹಣ ಎರಡು ವಿಧವಾಗಿದೆ. ಒಂದು ಸೂರ್ಯ ಗ್ರಹಣ ಮತ್ತೊಂದು ಸಂಚ್ರಗ್ರಹಣ. ಗ್ರಹಣ ಸಮಯದಲ್ಲಿ ಸಾಮಾನ್ಯವಾಗಿ ಪ್ರಕೃತಿಯು ಕಲ್ಮಶವಾಗಿರುತ್ತದೆ. ಅದನ್ನು ಮೈಲಿಗೆ ಎಂದು ಸಹ ಪರಿಗಣಿಸಲಾಗುವುದು. ಇಂತಹ ಸಂದರ್ಭದಲ್ಲಿ ದೇವರ ವಿಗ್ರಹವನ್ನು ನೀರಿನಲ್ಲಿ ಅಥವಾ ಅಕ್ಕಿಯಲ್ಲಿ ಮುಳುಗಿಸಿ ಇಡುವ ಪದ್ಧತಿ ಇದೆ. ದೇವಾಲಯಗಳನ್ನು ಮುಚ್ಚಲಾಗುತ್ತದೆ.
ಭೂಮಿಯಿಂದ ಸಾವಿರಾರು ಕಿ.ಮೀ ದೂರದಲ್ಲಿ ಇರುವ ಖಗೋಳದಲ್ಲಿ ಈ ಬದಲಾವಣೆಗಳಾದರೂ ಭೂಮಿಯ ಮೇಲೆ ಸಾಕಷ್ಟು ಬದಲಾವಣೆ ಹಾಗೂ ಪರಿಹಾರ ಕಾಣಲು ಸಾಕಷ್ಟು ನಿಯಮಗಳನ್ನು ಅನುಸರಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಸೂಕರ್ಯಗ್ರಹಣ ಸಂಭವಿಸಿದರೆ, ಚಂದ್ರ ಗ್ರಹಣವು ಹುಣ್ಣಿಮೆಯ ದಿನದಂದು ನಡೆಯುತ್ತದೆ.












Click it and Unblock the Notifications