ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಕೈ

By Staff
|
Google Oneindia Kannada News

lsquo;ಆಯುಷ್ಯವಂತಳಾಗಿ, ಆರೋಗ್ಯವಂತಳಾಗಿ, ವಿದ್ಯಾವಂತಳಾಗಿ, ಗುಣವಂತಳಾಗಿ, ಹಣವಂತಳಾಗಿ, ಪುಟ್ಟ ಗಂಡನ್ನ ಮದುವೆ ಮಾಡಿಕೊಂಡು,ಪಟ್ಟದ ಸೀರೆ ಉಟ್ಕೊಂಡು,ಚಿನ್ನದಂತಹ ಮಕ್ಕಳನ್ನ ಪಡ್ಕೊಂಡು ಸುಖವಾಗಿರು" ಎಂದು ಎಣ್ಣೆ ಒತ್ತಿ ನೀರೆರೆದು ಹರಸಿದ ಕೈನನ್ನ ಉದ್ದನೆಯ ಕೂದಲ ಬಾಚಿಸಿಕ್ಕು ಬಿಡಿಸಿ, ಜಡೆ ಹೆಣೆದುಗಲ್ಲ ಹಿಡಿದು ಮುಖವನೆತ್ತಿ'ಮುದಿಗಂಡ ಸಿಗದಿರಲಿ "ಎಂದು ಮುಂದಲೆಯ ಬಾಚಿ ಹೂ ಮುಡಿಸಿದ ಕೈ 'ಹಾಳು ಕಣ್ಣು, ಬೋಳಿ ಕಣ್ಣು , ನಾಯಿ ಕಣ್ಣು, ನರಿ ಕಣ್ಣು ಆ ಕಣ್ಣು, ಈ ಕಣ್ಣು " ಎಂದುಉಪ್ಪು ನೀವಳಿಸಿ ದೃಷ್ಟಿ ತೆಗೆದು,ಚಿಟಚಿಟನೆ ನೆಟ್ಟಿಗೆ ತೆಗೆದ ಕೈಬೆಳದಿಂಗಳ ರಾತ್ರಿಯಲ್ಲಿ ಅಂಗಳದ ತುಳಸಿಕಟ್ಟೆಯ ಬಳಿಹುಳಿ ಅನ್ನದ ಕೈ ತುತ್ತು ಹಾಕಿಮೊಸರನ್ನದ ಬಳಬಚ್ಚಿ ಭಾಗ್ಯವನಲ್ಮೆಯಿಂದ ಉಣಿಸಿದ ಕೈ ನಾ ತುಂಟಾಟ ಮಾಡಿದಾಗಹೇಳಿದ ಮಾತು ಕೇಳದೆಹಟ ಹಿಡಿದು ನಿಂತಾಗಮೆಲ್ಲನೆ ಎರಡೇಟು ಹೊಡೆದುಸರಿದಾರಿ ತೋರಿದ ಕೈಎಂದಾದರೊಮ್ಮೆ ತಲೆನೋವು ತಾಳಲಾರದೆನನ್ನ ಮುಖ ಸಪ್ಪಗಾದಾಗಮೃದು ಮಾತನಾಡುತ್ತಾ ಅಮೃತಾಂಜನವ ಹಚ್ಚಿ ಹಿತವಾಗಿ ತಲೆಯನೊತ್ತಿದ ಕೈತಾನೇ ಹೇಳಿಕೊಟ್ಟ ಹಾಡು ಹಸೆಯ ನಾನು ಚೆನ್ನಾಗಿ ಹಾಡಿ ತೋರಿಸಿದಾಗಕಂಡೂ ಕಾಣದ ಹಾಗೆ ಹೆಮ್ಮೆಯ ನಗೆ ಬೀರಿ ಚಪ್ಪಾಳೆ ತಟ್ಟುತ್ತಾ ಉತ್ತೇಜಿಸಿದ ಕೈಇಂದಿಗೂ ಆ ಕೈಗಳ ಒಲುಮೆಯ ಧಾರೆ ಹರಿಯುತ್ತಲೇ ಇದೆ...'ನಾನು ಮಾಡಿದ ಚಟ್ನಿ ಪುಡಿ,ಮೆಣಸಿನ ಪುಡಿ ನಿನಗಿಷ್ಟ ಕಣೆ" ಎಂದು ಊರಿಂದ ಹೊರಡುವಾಗ ಪುಡಿಗಳ ಮಾಡಿಕೊಡುವ ಕೈರಾತ್ರಾನುರಾತ್ರಿ ಕೋಡುಬಳೆ, ಚಕ್ಕುಲಿ ಕರಿದು ನನ್ನ ಸೂಟ್‌ಕೇಸೆಲ್ಲ ತುಂಬಿಸಿಡುವ ಕೈಜಗತ್ತಿನಲ್ಲಿ ನಾನೆಲ್ಲೇ ಇದ್ದರೂ ಅಮ್ಮನ ಈ ಕೈ ನನ್ನ ನೆತ್ತಿಯ ಮೇಲಿರುವ ತನಕ ವಿಜಯದ ಪತಾಕೆ ನನ್ನದೇ ಸೈ !

ಸಂಧ್ಯಾ ರವೀಂದ್ರನಾಥ್‌

'ಆಯುಷ್ಯವಂತಳಾಗಿ, ಆರೋಗ್ಯವಂತಳಾಗಿ,
ವಿದ್ಯಾವಂತಳಾಗಿ, ಗುಣವಂತಳಾಗಿ,
ಹಣವಂತಳಾಗಿ, ಪುಟ್ಟ ಗಂಡನ್ನ ಮದುವೆ ಮಾಡಿಕೊಂಡು,
ಪಟ್ಟದ ಸೀರೆ ಉಟ್ಕೊಂಡು,
ಚಿನ್ನದಂತಹ ಮಕ್ಕಳನ್ನ ಪಡ್ಕೊಂಡು ಸುಖವಾಗಿರು" ಎಂದು
ಎಣ್ಣೆ ಒತ್ತಿ ನೀರೆರೆದು ಹರಸಿದ ಕೈ

ನನ್ನ ಉದ್ದನೆಯ ಕೂದಲ ಬಾಚಿ
ಸಿಕ್ಕು ಬಿಡಿಸಿ, ಜಡೆ ಹೆಣೆದು
ಗಲ್ಲ ಹಿಡಿದು ಮುಖವನೆತ್ತಿ
'ಮುದಿಗಂಡ ಸಿಗದಿರಲಿ "
ಎಂದು ಮುಂದಲೆಯ ಬಾಚಿ ಹೂ ಮುಡಿಸಿದ ಕೈ

'ಹಾಳು ಕಣ್ಣು, ಬೋಳಿ ಕಣ್ಣು ,
ನಾಯಿ ಕಣ್ಣು, ನರಿ ಕಣ್ಣು
ಆ ಕಣ್ಣು, ಈ ಕಣ್ಣು " ಎಂದು
ಉಪ್ಪು ನೀವಳಿಸಿ ದೃಷ್ಟಿ ತೆಗೆದು,
ಚಿಟಚಿಟನೆ ನೆಟ್ಟಿಗೆ ತೆಗೆದ ಕೈ

ಬೆಳದಿಂಗಳ ರಾತ್ರಿಯಲ್ಲಿ
ಅಂಗಳದ ತುಳಸಿಕಟ್ಟೆಯ ಬಳಿ
ಹುಳಿ ಅನ್ನದ ಕೈ ತುತ್ತು ಹಾಕಿ
ಮೊಸರನ್ನದ ಬಳಬಚ್ಚಿ ಭಾಗ್ಯವ
ನಲ್ಮೆಯಿಂದ ಉಣಿಸಿದ ಕೈ

ನಾ ತುಂಟಾಟ ಮಾಡಿದಾಗ
ಹೇಳಿದ ಮಾತು ಕೇಳದೆ
ಹಟ ಹಿಡಿದು ನಿಂತಾಗ
ಮೆಲ್ಲನೆ ಎರಡೇಟು ಹೊಡೆದು
ಸರಿದಾರಿ ತೋರಿದ ಕೈ

ಎಂದಾದರೊಮ್ಮೆ ತಲೆನೋವು ತಾಳಲಾರದೆ
ನನ್ನ ಮುಖ ಸಪ್ಪಗಾದಾಗ
ಮೃದು ಮಾತನಾಡುತ್ತಾ
ಅಮೃತಾಂಜನವ ಹಚ್ಚಿ
ಹಿತವಾಗಿ ತಲೆಯನೊತ್ತಿದ ಕೈ

ತಾನೇ ಹೇಳಿಕೊಟ್ಟ ಹಾಡು ಹಸೆಯ
ನಾನು ಚೆನ್ನಾಗಿ ಹಾಡಿ ತೋರಿಸಿದಾಗ
ಕಂಡೂ ಕಾಣದ ಹಾಗೆ
ಹೆಮ್ಮೆಯ ನಗೆ ಬೀರಿ
ಚಪ್ಪಾಳೆ ತಟ್ಟುತ್ತಾ ಉತ್ತೇಜಿಸಿದ ಕೈ

ಇಂದಿಗೂ ಆ ಕೈಗಳ ಒಲುಮೆಯ ಧಾರೆ ಹರಿಯುತ್ತಲೇ ಇದೆ...

'ನಾನು ಮಾಡಿದ ಚಟ್ನಿ ಪುಡಿ,
ಮೆಣಸಿನ ಪುಡಿ ನಿನಗಿಷ್ಟ ಕಣೆ" ಎಂದು
ಊರಿಂದ ಹೊರಡುವಾಗ ಪುಡಿಗಳ ಮಾಡಿಕೊಡುವ ಕೈ
ರಾತ್ರಾನುರಾತ್ರಿ ಕೋಡುಬಳೆ, ಚಕ್ಕುಲಿ ಕರಿದು
ನನ್ನ ಸೂಟ್‌ಕೇಸೆಲ್ಲ ತುಂಬಿಸಿಡುವ ಕೈ

ಜಗತ್ತಿನಲ್ಲಿ ನಾನೆಲ್ಲೇ ಇದ್ದರೂ
ಅಮ್ಮನ ಈ ಕೈ
ನನ್ನ ನೆತ್ತಿಯ ಮೇಲಿರುವ ತನಕ
ವಿಜಯದ ಪತಾಕೆ ನನ್ನದೇ ಸೈ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X