Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನಾಂಕ, ಸಮಯ, ಮಹತ್ವ; ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ..
ಗೋಕುಲಾಷ್ಟಮಿ ಎಂದೂ ಕರೆಯಲ್ಪಡುವ ಶ್ರೀಕೃಷ್ಣ ಜನ್ಮಾಷ್ಟಮಿಯು ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮ ದಿನವನ್ನು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. 2023 ರಲ್ಲಿ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 6 ರಂದು ಬರುತ್ತದೆ.
ದಿನಾಂಕ ಮತ್ತು ಸಮಯ:
ರಕ್ಷಾ ಬಂಧನದಂತೆಯೇ ಈ ವರ್ಷ ಕೃಷ್ಣ ಜನ್ಮಾಷ್ಟಮಿಯ ದಿನಾಂಕದ ಬಗ್ಗೆ ಖಚಿತತೆ ಇಲ್ಲ. ಇದನ್ನು ಸೆಪ್ಟೆಂಬರ್ 6 ಅಥವಾ 7 ರಂದು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿಯು ಸತತ ಎರಡು ದಿನಗಳನ್ನು ವ್ಯಾಪಿಸುತ್ತದೆ. ಅಷ್ಟಮಿ ತಿಥಿಯು ಸೆಪ್ಟೆಂಬರ್ 6, 2023 ರಂದು 15:37 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7 ರಂದು 16:14 ಕ್ಕೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಈ ಎರಡೂ ದಿನಗಳು ಕೃಷ್ಣ ಜನ್ಮಾಷ್ಟಮಿ ಆಚರಣೆಗಳನ್ನು ಸೂಚಿಸುತ್ತದೆ.

ಕೃಷ್ಣನ ಹಲವು ಹೆಸರುಗಳು
ಶ್ರೀಕೃಷ್ಣನಿಗೆ ಹಲವಾರು ಹೆಸರುಗಳಿವೆ. ಅವುಗಳಲ್ಲಿ ಶ್ಯಾಮ, ಮದನ, ಮೋಹನ, ಮಾಧವ, ಮುರಾರಿ, ಗೋಕುಲ, ಗೋಪಾಲ, ಗೋಪೇಶ, ಕೇಶವ, ಬಿಹಾರಿ, ಗೋವಿಂದ, ಬ್ರಜೇಶ್, ಕನ್ಹಯ್ಯಾ, ವಿಠ್ಠಲ, ಮುಕುಂದ, ದಾಮೋದರ, ಗಿರಧಾರಿ, ಗೋಪಿಲೋಲ, ಯದುರಾಜ, ವಾಸುದೇವ, ಬನವಾರಿ, ನಂದಲೋಲ, ಬೆಣ್ಣೆಚೋರ, ಚಿತ್ತಚೋರ ಹೆಸರುಗಳು ಸೇರಿವೆ.
ಗೋಕುಲಾಷ್ಟಮಿ ಮಹತ್ವ:
ಹಿಂದೂ ಪುರಾಣಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಅಪಾರ ಮಹತ್ವವಿದೆ. ಈ ದಿನ ಪ್ರೀತಿ ಮತ್ತು ಸಂತೋಷದ ಅವತಾರವೆಂದು ಪರಿಗಣಿಸಲ್ಪಟ್ಟ ಕೃಷ್ಣನ ಜನ್ಮವನ್ನು ಸೂಚಿಸುತ್ತದೆ. ಈ ಹಬ್ಬ ಕೃಷ್ಣನ ಜನ್ಮದಿನದ ಆಚರಣೆ ಮಾತ್ರವಲ್ಲದೆ ಕೃಷ್ಣನ ಬೋಧನೆಗಳು ಮತ್ತು ಆತನು ನಿಂತಿರುವ ಮೌಲ್ಯಗಳನ್ನು ನೆನಪಿಸುತ್ತದೆ. ಮಹಾಕಾವ್ಯವಾದ ಮಹಾಭಾರತ ಮತ್ತು ಇತರ ಪಠ್ಯಗಳಲ್ಲಿ ಚಿತ್ರಿಸಿರುವಂತೆ ಶ್ರೀಕೃಷ್ಣನ ಜೀವನ ಮತ್ತು ಕಥೆಗಳು ಜನರನ್ನು ಪ್ರೇರೇಪಿಸುತ್ತಲೇ ಇರುತ್ತವೆ.

ಕೃಷ್ಣ ಜನ್ಮಾಷ್ಟಮಿ ಆಚರಣೆಗಳು:
ಉಪವಾಸ: ಭಕ್ತರು ಜನ್ಮಾಷ್ಟಮಿಯಂದು ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. ಯಾವುದೇ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಮಧ್ಯರಾತ್ರಿಯ ಆರತಿ (ಪ್ರಾರ್ಥನೆ) ನಂತರವೇ ಉಪವಾಸವನ್ನು ಬಿಡುತ್ತಾರೆ.
ಪೂಜೆ ಮತ್ತು ಆರತಿ: ಮನೆಗಳಲ್ಲಿ ಮತ್ತು ಶ್ರೀ ಕೃಷ್ಣನ ದೇವಾಲಯಗಳಲ್ಲಿ ಪೂಜೆಗಳನ್ನು (ಪ್ರಾರ್ಥನಾ ಸಮಾರಂಭಗಳು) ನಡೆಸಲಾಗುತ್ತದೆ. ಭಕ್ತರು ಶ್ರೀಕೃಷ್ಣನ ವಿಗ್ರಹಗಳನ್ನು ಅಲಂಕರಿಸುತ್ತಾರೆ. ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ ಮತ್ತು ಭಕ್ತಿಗೀತೆಗಳನ್ನು ಹಾಡುತ್ತಾ ಆರತಿ ಮಾಡುತ್ತಾರೆ.
ಮಧ್ಯರಾತ್ರಿಯ ಆಚರಣೆಗಳು: ಶ್ರೀಕೃಷ್ಣನ ಜನ್ಮ ಮಧ್ಯರಾತ್ರಿಯಲ್ಲಿ ಸಂಭವಿಸಿದೆ ಎಂದು ನಂಬಲಾಗಿದೆ. ಹೀಗಾಗಿ ಈ ದಿನ ಭಕ್ತರು ಮಧ್ಯರಾತ್ರಿಯವರೆಗೆ ಎಚ್ಚರವಾಗಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾರ್ಥನೆಗಳು, ಭಜನೆಗಳು (ಭಕ್ತಿಗೀತೆಗಳು), ಮತ್ತು ಕೃಷ್ಣನ ಜೀವನ ಕಥೆಗಳನ್ನು ಓದುತ್ತಾರೆ.

ದಹಿ ಹಂಡಿ: ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ದಹಿ ಹಂಡಿ ಸಂಪ್ರದಾಯವು ನಡೆಯುತ್ತದೆ. ಮೊಸರಿನ ಮಡಕೆಯನ್ನು (ದಹಿ) ಎತ್ತರದಲ್ಲಿ ನೇತುಹಾಕಲಾಗುತ್ತದೆ ಮತ್ತು ಯುವಕರ ಗುಂಪುಗಳು ಅದನ್ನು ಒಡೆಯಲು ಮಾನವ ಪಿರಮಿಡ್‌ಗಳನ್ನು ರಚಿಸುತ್ತಾರೆ. ಈ ಸಂಪ್ರದಾಯವು ಶ್ರೀಕೃಷ್ಣನ ಲವಲವಿಕೆಯ ಸ್ವಭಾವವನ್ನು ಸಂಕೇತಿಸುತ್ತದೆ.
ಉಯ್ಯಾಲೆಗಳು: ಹೂವುಗಳು ಮತ್ತು ಎಲೆಗಳಿಂದ ಅಲಂಕರಿಸಿದ ಉಯ್ಯಾಲೆಗಳನ್ನು ಮನೆಗಳು ಮತ್ತು ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತದೆ. ಇದು ಕೃಷ್ಣನ ಬಾಲ್ಯವನ್ನು ಸಂಕೇತಿಸುತ್ತದೆ.
ರಾಸ್ ಲೀಲಾ: ಕೆಲವು ಸ್ಥಳಗಳಲ್ಲಿ ರಾಸ್ ಲೀಲಾ ಎಂದು ಕರೆಯಲ್ಪಡುವ ಭಕ್ತಿ ಪ್ರದರ್ಶನಗಳು ರಾಧಾ ಮತ್ತು ಕೃಷ್ಣರ ನಡುವಿನ ದೈವಿಕ ಪ್ರೀತಿಯನ್ನು ಚಿತ್ರಿಸಲಾಗುತ್ತದೆ. ಭಕ್ತರು ಕೆಲ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೃಷ್ಣನ ಜೀವನದ ಪ್ರಸಂಗಗಳನ್ನು ನೃತ್ಯ ಮತ್ತು ನಾಟಕದ ಮೂಲಕ ಪ್ರದರ್ಶಿಸುತ್ತಾರೆ.
ಆಧ್ಯಾತ್ಮಿಕ ಮಹತ್ವ: ಕೃಷ್ಣ ಜನ್ಮಾಷ್ಟಮಿ ಕೇವಲ ಸಾಂಸ್ಕೃತಿಕ ಆಚರಣೆಯಾಗಿರದೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಭಗವದ್ಗೀತೆ ಸೇರಿದಂತೆ ಶ್ರೀಕೃಷ್ಣನ ಬೋಧನೆಗಳು ಸದಾಚಾರ, ಕರ್ತವ್ಯ, ಭಕ್ತಿ ಮತ್ತು ಪ್ರೀತಿಯ ಮಹತ್ವವನ್ನು ಒತ್ತಿಹೇಳುತ್ತವೆ. ಕೃಷ್ಣನ ದೈವಿಕ ಬುದ್ಧಿವಂತಿಕೆಯು ಜನರನ್ನು ಸದಾಚಾರ ಮತ್ತು ಸ್ವಯಂ-ಸಾಕ್ಷಾತ್ಕಾರದ ಹಾದಿಯಲ್ಲಿ ನಡೆಸುತ್ತದೆ.
ಕೃಷ್ಣ ಜನ್ಮಾಷ್ಟಮಿಯು ವಿಶ್ವಾದ್ಯಂತ ಹಿಂದೂಗಳಿಗೆ ಸಂತೋಷ, ಭಕ್ತಿಯ ಸಮಯವಾಗಿದೆ. ಇದು ಶ್ರೀಕೃಷ್ಣನ ಶಾಶ್ವತ ಸಂದೇಶವನ್ನು ನೆನಪಿಸುತ್ತದೆ. ಸದಾಚಾರ, ಸಹಾನುಭೂತಿ ಮತ್ತು ಭಕ್ತಿಯ ಜೀವನವನ್ನು ನಡೆಯಲು ಪ್ರೋತ್ಸಾಹಿಸುತ್ತದೆ. ಕೃಷ್ಣನ ಜನ್ಮವನ್ನು ಆಚರಿಸಲು ಭಕ್ತರು ಎಲ್ಲೆಡೆ ಒಟ್ಟಾಗಿ ಸೇರುತ್ತಾರೆ.












Click it and Unblock the Notifications