Get Updates
Get notified of breaking news, exclusive insights, and must-see stories!

ಅಮ್ಮನ ದಿನದ ವಿಶೇಷ : ಬಿಗ್ ಎಫ್ಎಂನಲ್ಲಿ ಪ್ರಪ್ರಥಮ ರೇಡಿಯೋ ಸಿನೆಮಾ

ಅಮ್ಮ ಅಂದರೆ ಯಾರಿಗೆ ಪ್ರೀತಿ ಉಕ್ಕಿ ಬರುವುದಿಲ್ಲ ಹೇಳಿ? ಅಮ್ಮ ಅಂದರೆ ಪ್ರೀತಿ, ವಾತ್ಸಲ್ಯ ಮಾತ್ರವಲ್ಲ, ಕಣ್ಣಿಗೆ ಕಾಣುವ ದೇವರು, ತಿದ್ದುವ ಶಿಕ್ಷಕಿ, ಸಾಂತ್ವನ ಹೇಳುವ ಸ್ನೇಹಿತೆ, ದಾರಿ ತೋರುವ ಮಾರ್ಗದರ್ಶಿ, ಕಷ್ಟು ದೂರವಾಗಿಸುವ ಹೀರೋ, ನೋವು ಮರೆಯಾಗಿಸುವ ವೈದ್ಯೆ ಎಲ್ಲವೂ. ಅಮ್ಮ ಅಂದ್ರೆ ಏನೋ ಹರುಷ. ಅಮ್ಮನ ಪ್ರೀತಿಗೆ ಎಲ್ಲೆ ಎಂಬುದೇ ಇರುವುದಿಲ್ಲ.

'ಅಮ್ಮ' ಎಂಬ ಹೆಸರು ಕೇಳಿದ ಕೂಡಲೆ ಉತ್ಸಾಹ, ಹುಮ್ಮಸ್ಸು ಉಕ್ಕಿ ಬರುತ್ತಿದ್ದರೆ ಕೂಡಲೆ ಪೆನ್ನು ಪೇಪರು ತೆಗೆದುಕೊಳ್ಳಿ, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಿ, ಕೈಗೆ ವಿಡಿಯೋ ಕ್ಯಾಮೆರಾ ಹಿಡಿದೆತ್ತಿಕೊಳ್ಳಿ. ಅಮ್ಮನ ಕುರಿತು ಹೃದಯಮಿಡಿಯುವ ಕಥೆಯನ್ನು, ನಿಮಗೆ ಹೇಗನ್ನಿಸುತ್ತದೋ ಹಾಗೆ ಅಭಿವ್ಯಕ್ತಪಡಿಸಿ 92.7 ಬಿಗ್ ಎಫ್ಎಂಗೆ ಕಳುಹಿಸಿಕೊಡಿ.

ಹೌದು, ಈ ವರ್ಷವೂ ಅಮ್ಮನ ದಿನಕ್ಕಾಗಿ ದೇಶದ ನಂ.1 ರೇಡಿಯೋ ಚಾನಲ್ 92.7 ಬಿಗ್ ಎಫ್ಎಂ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಅದೇನೆಂದರೆ, ಸ್ಪರ್ಧಿಗಳು ಕಳಿಸುವ ಅಮ್ಮನ ಕುರಿತು ಬರಹ, ವಿಡಿಯೋಗಳನ್ನು ಬಳಸಿ 'ಮೈ ಮದರ್, ಮೈ ಹೀರೋ' ಎಂಬ ಪ್ರಪ್ರಥಮ ರೇಡಿಯೋ ಚಲನಚಿತ್ರವನ್ನು ಆಡಿಯೋ ರೂಪದಲ್ಲಿ ತಯಾರಿಸುವುದು.

My mom, my hero : First Radio movie by 92.7 Big FM

92.7 ಎಫ್ಎಂ ಫೇಸ್ ಬುಕ್ ನಲ್ಲಿ ಈಗಾಗಲೆ ಈ ಸ್ಪರ್ಧೆಗೆ ಆಹ್ವಾನ ನೀಡಲಾಗಿದೆ. ನಿಮ್ಮ ಅಮ್ಮ ನಿಮ್ಮ ಪಾಲಿನ ಹೀರೋ ಆಗಿದ್ದರೆ ನಿಮ್ಮ ಕಥೆಯನ್ನು ಬಿಗ್ ಎಫ್ಎಂ ವೆಬ್ ಸೈಟಿಗೆ ಹೋಗಿ ಕೂಡಲೆ ಕಳುಹಿಸಿ. ಜೊತೆಗೆ ಅಮ್ಮನ ಜೊತೆಗಿನ ಸೆಲ್ಫಿಯೂ ಇರಲಿ. ಅಮ್ಮನ ಕುರಿತ ಪ್ರಥಮ ರೇಡಿಯೋ ಚಲನಚಿತ್ರದಲ್ಲಿ ನಿಮ್ಮ ಅಮ್ಮನೂ ರಾರಾಜಿಸುವಂತಾಗಲಿ.

ಐದು ಅತ್ಯುತ್ತಮ ಕಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು. ಅವುಗಳಲ್ಲಿ ಒಬ್ಬ ಅದೃಷ್ಟವಂತ/ತೆಯ ಕಥೆಯನ್ನು ರೇಡಿಯೋ ಚಲನಚಿತ್ರವನ್ನಾಗಿ ಮಾಡಲಾಗುವುದು. ಇಷ್ಟೇ ಅಲ್ಲ, ಈ ಕಥೆಯನ್ನು ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ, ಬೆಂಗಳೂರಿನ ಪ್ರಿಯಾಮಣಿ ಅವರು ಮೇ 9ರ ಬೆಳಿಗ್ಗೆ 11 ಗಂಟೆಗೆ ಕಥೆಯನ್ನು ಓದಲಿದ್ದಾರೆ.


ಈ ವಿಶಿಷ್ಟ ಅಭಿಯಾನದ ಬಗ್ಗೆ ತಿಳಿಸಿದ ನ್ಯಾಷನಲ್ ಬಿಸಿನೆಸ್ ಹೆಡ್ ಆಗಿರುವ ಅಶ್ವಿನ್ ಪದ್ಮನಾಭ್ ಅವರು, "ಅಮ್ಮ ನಿಜವಾದ ಸೂಪರ್ ಹೀರೋ. ನಾವು ಅವರಿಗೆ ಧನ್ಯವಾದವನ್ನು ಯಾವತ್ತೂ ಅರ್ಪಿಸುವುದಿಲ್ಲ. ಹೀಗಾಗಿ ಅಮ್ಮಂದಿರಿಗೆ ಅಭಿನಂದನೆ, ನಮನ ಸಲ್ಲಿಸಲು ರಾಷ್ಟ್ರದಾದ್ಯಂತ ಈ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಶ್ರೋತೃಗಳು ಕೂಡ ಈ ಅವಕಾಶವನ್ನು ಬಳಸಿಕೊಂಡು ಅಮ್ಮನ ಪ್ರೀತಿ, ತ್ಯಾಗವನ್ನು ನೆನೆಯಬೇಕು" ಎಂದು ಹೇಳಿದರು.

ಅಮ್ಮನ ದಿನವಾದ ಭಾನುವಾರ ಪೂರ್ತಿ ಅಮ್ಮನಿಗಾಗಿಯೇ ಮೀಸಲಿಡಲಾಗುತ್ತಿದ್ದು, ಇಡೀದಿನ ಅಮ್ಮನ ಹಾಡುಗಳು ಕಿವಿ ತುಂಬಲಿವೆ. ಅಮ್ಮಾ ಎಂದರೆ ಏನೋ ಹರುಷವು, ನನ್ನ ಪಾಲಿಗೆ ಅವಳೇ ದೈವವು... ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ... ಸುಮ್ಮನೆ ಇಂಥ ಹಾಡನ್ನು ಮೆಲುಕು ಹಾಕುತ್ತಿದ್ದರೆ ಹೃದಯ ತುಂಬಿ ಬರುವುದಿಲ್ಲವೆ? ಈ ದಿನ ದೇಶದ ಎಲ್ಲ 45 ಸ್ಟೇಷನ್ ಗಳಲ್ಲಿ ಮಕ್ಕಳನ್ನು ಕರೆಸಿ ಅವರಿಂದ ಕೂಡ ತಾಯಿಯ ಕುರಿತು ಅವರೊಂದಿಗೆ ಮಾತುಕತೆ ನಡೆಸಲಿದೆ 92.7 ಬಿಗ್ ಎಫ್ಎಂ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+