ಅಪ್ಪನ ಛಲ ನೋಡಿದ್ರೆ ನಾನು ಸಾಯಬಾರ್ದು ಅನ್ಸತ್ತೆ!

By: ಶುಭಾಶಯ ಜೈನ್
Subscribe to Oneindia Kannada

ಜಗತ್ತಿಗೆ ಗೊತ್ತಿಲ್ಲ ಈ ಆದರ್ಶ ಪುರುಷನ ಬಗ್ಗೆ.. ಆದ್ರೆ ನನ್ನ ಜಗತ್ತೇ ಆಗಿರುವ ಈ ಅಜ್ಞಾತ ಪುರುಷನ ಬಗ್ಗೆ ಇವತ್ತು ಒಂದೆರಡು ಮಾತುಗಳನ್ನು ಹಂಚಿಕೊಳ್ಳುವ ಬಯಕೆ. The best classroom in the world is at the feet of pappa....

ಹೌದು ನನ್ನ ಪಾಲಿಗೆ ಬೃಹತ್ ವಿಶ್ವಕೋಶ. ನನ್ನೆಲ್ಲಾ ಸಮಸ್ಯೆಗಳಿಗೆ ಅವರಲ್ಲಿ ಪರಿಹಾರ ಇದು, ನನ್ನೆಲ್ಲಾ ನೋವುಗಳಿಗೆ ಅವರಲ್ಲಿ ಸಮಾಧಾನವಿದೆ. ನಾನು ಬೆರಗುಗಣ್ಣಿಂದ ನೋಡುವ ವಿಶೇಷತೆ ಅವರದು... ಧೈರ್ಯದಿಂದ ಆಸರೆ ಅಂತ ಹಿಡಿದುಕೊಳ್ಳಬಹುದಾದರೆ ಅದವರ ಕಿರುಬೆರಳು..

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

My father has taught me to postpone my death

ಅಪ್ಪಾಜಿ.... ಅಪ್ಪನದು ತ್ರಿವಿಕ್ರಮನ ಛಲ. ನಾನು, lifeಲ್ಲಿ ಹೊಡೆತದ ಮೇಲೆ ಹೊಡೆತ ಬಿದ್ದಾಗ, ಅವಮಾನಗಳನ್ನೆಲ್ಲಾ ಅನುಭವಿಸಬೇಕಾದಾಗ, ಕಷ್ಟಗಳೆದುರಾದಾಗ, ಅದೆಷ್ಟೋ ಸಲ ಸಾವಿನ ನಿರ್ಧಾರಕ್ಕೆ ಮನಸು ಮಾಡಿದ್ದಿದೆ.. ಆದ್ರೆ ನನ್ನ ಬದುಕಿಗೆ ಸ್ಪೂರ್ತಿ ಅಪ್ಪಾಜಿಯ ಜೀವನ.. ಅಪ್ಪನ ಛಲ, ಬದುಕಿನ ದಾರಿ, ಬದುಕಿದ ರೀತಿ ನೋಡಿದ್ರೆ, ಸಾಯ್ಬಾರ್ದು ಅನ್ಸತ್ತೆ. ಬದುಕುವ ಪ್ರೀತಿ ಮೂಡುತ್ತೆ.

ಅಪ್ಪನ್ನ ಒಂದೇ ದಿನ ನೆನೆಯುವ ದೊಡ್ಡು ಸ್ಟುಪಿಡ್ಡುಗಳು!

ಅಪ್ಪನ ಜ್ಞಾನ, ವಿದ್ವತ್, ಬರೀ ಬೋಧನೆಗೆ ಸೀಮಿತವಾಗಿಲ್ಲ. ಅವರು ಜೈನ ಧರ್ಮದ ತತ್ವಗಳಂತೆ ಬದುಕಿ ತೋರಿಸಿದ್ದಾರೆ. ಆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅಪ್ಪ ಸಂಸಾರಿಯಾದ್ರೂ ಸನ್ಯಾಸಿ, ತ್ಯಾಗಿಯ ಹಾಗೆ ಜೀವಿಸುತ್ತಿರುವವರು... ನೋಡಲು ವಾಮನ ರೂಪ.. ಆದ್ರೆ ಕಷ್ಟಗಳ ಹೊಡೆತಕ್ಕೆ, ಜೀವನದ ಜಂಜಾಟಕ್ಕೆ ಜಗ್ಗುವ ಚೈತನ್ಯವಲ್ಲ ಅವರದು.

ಅವರ ಚೈತನ್ಯ ಸಿದ್ಧಾತ್ಮ ಸ್ವರೂಪಿ. ಅಷ್ಟೆಲ್ಲಾ ಕಷ್ಟಗಳ ನಡುವೆ ಕೂಡಾ ನಲುಗದ ಚೈತನ್ಯ ಅವರದು. ಸೋಲು ಹಠಕಟ್ಟಿ ಅವರನ್ನ ಸೋಲಿಸ್ತೇನೆ ಅಂದಷ್ಟು ಬಾರಿ ಸೋಲನ್ನು ಮೆಟ್ಟಿ ನಿಂತು ಗೆಲುವನ್ನು ಬೆಂಬೆತ್ತಿದವರು.. ನಾ ಕಂಡ ಮೊದಲ ವೀರ, ಮಹಾನ್ ಸಾಧಕ, ಆದರ್ಶ ಪುರುಷ, ನನ್ನ ಮಹಾರಕ್ಷಕ....

ಫಾದರ್ಸ್ ಡೇ ಹಿ(ಮಿ)ಷ್ಟರಿ ಬಹಿರಂಗ

65ರ ಹರೆಯದ ಮುದಿ ಜೀವ, ಸುಕ್ಕುಗಟ್ಟಿದ ಚರ್ಮ, ಜಡ್ಡುಗಟ್ಟಿದ ಕೈಕಾಲು, ಬೀಡಿ ಸೇದಿ ಸೇದಿ, ಸಣಕಲಾದ ಶರೀರ, ಆ ಶರೀರದಲ್ಲೊಂದು ಸಾತ್ವಿಕತೆಯ ಪ್ರತೀಕವಾಗಿರುವ ಜನಿವಾರ, ಬಾಯಲ್ಲಿ ನಾಲ್ಕೇ ನಾಲ್ಕು ಹಲ್ಲು, ಜ್ಞಾನಭಂಡಾರದಂತಿರುವ ನೆರಿಗೆಯೊಳ್ಳ ವಿಶಾಲ ಹಣೆ, ಹಣೆಯ ಮೇಲೆ ದೈವೀ ಸ್ವರೂಪವಾಗಿರುವ ದುಂಡನೆಯ ಗಂಧ ಕುಂಕುಮ ತಿಲಕ...

ಕಿವುಡುತನದ ಸವಾಲಿಗೆ ಉತ್ತರವಾಗಿ ಕಿವಿಯಲ್ಲೊಂದು hearing aid, ಬರೀ ನರ ಮೂಳೆಗಳಷ್ಟೇ ಗೋಚರಿಸುವ ಶರೀರದಲ್ಲೊಂದು ಉಸಿರಾಟ, ಬದುಕಲಿಕ್ಕಾಗಿ, ಬೆಳಿಗ್ಗೆ ಸಂಜೆ ಚಪಾತಿ, ಮದ್ಯಾಹ್ನ ಲಘು ಊಟ ಇದರಲ್ಲೇ ಜೀವನ.. ಕೃಶಕಾಯದ ಮೇಧಾವಿ, ಜ್ಞಾನ ಸ್ವರೂಪಿ, ನನ್ನ ಆರಾಧ್ಯ ದೈವ, ನನ್ನ ಸ್ವತಂತ್ರ ಜೀವನದ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಪ್ರಪಂಚದ ಅತ್ಯಂತ ಸುರಕ್ಷಿತ ಸ್ಥಳವನ್ನು ತನ್ನ ತೋಳಲ್ಲಿ ಕಲ್ಪಿಸಿಕೊಟ್ಟ ಸಾಹುಕಾರ.. ಅಪ್ಪಾ I love u pa!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The best classroom in the world is at the feet of pappa. Father has taught me to face the ugly world with courage. Though he looks slim, his ambitions, love for life are very huge. Write Shubhashaya Jain on her father on Father's Day.
Please Wait while comments are loading...