Ganesh Chaturthi 2026: ವಿನಾಯಕ ಚತುರ್ಥಿಗೆ ಗಣೇಶನನ್ನು ಈ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ; ಮನೆಗೆ ಬರಲಿದೆ ಐಶ್ವರ್ಯ!

Ganesh Chaturthi:ಹಿಂದೂ ಸಂಪ್ರದಾಯದಲ್ಲಿ ವಿನಾಯಕ ಚತುರ್ಥಿಗೆ ವಿಶೇಷ ಸ್ಥಾನವಿದೆ. ಭಕ್ತರು ವಿನಾಯಕನನ್ನು ವಿಘ್ನ ವಿನಾಶಕ ಎಂದೇ ಕರೆಯುತ್ತಾರೆ. ಹಾಗಾಗಿಯೇ ಆತ ಪ್ರಥಮ ಪೂಜಿತ. ಏನೆ ಶುಭ ಕಾರ್ಯ ಅಥವಾ ಹೊಸ ಕೆಲಸ ಆರಂಭ ಮಾಡುವಾಗಲೂ ಗಣಪತಿಯನ್ನು ಪೂಜಿಸಲಾಗುತ್ತದೆ. ಮಾಡುವ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ಅಡೆತಡೆ ಬಾರದೆ ಇರಲಿ ಎಂದು ಪೂಜಿಸಲಾಗುತ್ತದೆ. ಇನ್ನೇನು ಗಣೇಶ ಹಬ್ಬ ಅಥವಾ ಗಣೇಶ ಚತುರ್ಥಿ ಹತ್ತಿರ ಬರ್ತಾ ಇದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಮನೆಯಲ್ಲಿ ಮಾತ್ರವಲ್ಲದೆ, ಕಚೇರಿ ಮತ್ತು ವ್ಯಾಪಾರ ಸಂಸ್ಥೆಗಳಲ್ಲಿಯೂ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗ್ತದೆ.

ವಾಸ್ತು ನಂಬಿಕೆಗಳ ಪ್ರಕಾರ, ವಿನಾಯಕನ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಪ್ರತಿಷ್ಟಾಪಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಮೂರ್ತಿಯ ಆಕಾರ, ಸೊಂಡಿಲು ಯಾವ ಕಡೆಗಿರಬೇಕು, ಬಣ್ಣ ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಇಲ್ಲಿ ಬಹಳ ಮುಖ್ಯವಾಗಿರುತ್ತದೆ. ಗಣೇಶ ಪ್ರತಿಷ್ಟಾಪಿಸುವಾಗ ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ, ಮನೆಯಲ್ಲಿ ಶಾಂತಿಯುತ ವಾತಾವರಣ ನೆಲೆಯಾಗುವುದು. ಪಾಸಿಟಿವಿಟಿ ಹರಡುವುದು ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು.

Ganesh Chaturthi 2026 Avoid These Mistakes While Placing Ganesha Idol At Home To Get His Blessings

Ganesh Chaturthi:ಮೂರ್ತಿ ಇಡುವ ದಿಕ್ಕು

ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನು ಇಡುವುದು ಹೆಚ್ಚು ಶುಭ. ಈಶಾನ್ಯ ದಿಕ್ಕನ್ನು ಪವಿತ್ರ ದಿಕ್ಕು ಅಂತ ಹೇಳ್ತಾರೆ. ಆದರೆ ಕೆಲವು ಸಂಪ್ರದಾಯಗಳು ಹೇಳುವಂತೆ ಒಂದು ವೇಳೆ ಸ್ಥಳದ ಕೊರತೆಯಿಂದ ಈಶಾನ್ಯ ದಿಕ್ಕಿನಲ್ಲಿ ಗಣೇಶ ಪ್ರತಿಷ್ಟಾಪಿಸುವುದು ಸಾಧ್ಯವಿಲ್ಲ ಎಂದಾದರೆ ಮೂರ್ತಿಯನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿಯೂ ಇಡಬಹುದು. ಮೂರ್ತಿಯು ಮನೆಯೊಳಗೆ ಪಾಸಿಟಿವಿಯನ್ನು ತರುತ್ತದೆ. ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಕೆಳಗೆ, ಬಚ್ಚಲು ಮನೆಯ ಪಕ್ಕದಲ್ಲಿ, ಕೊಳಕು ಅಥವಾ ಅಶುದ್ಧ ಸ್ಥಳಗಳಲ್ಲಿ ಇಡಬಾರದು.

Ganesh Chaturthi:ಮೂರ್ತಿಯ ಸೊಂಡಿಲು ಈ ಕಡೆ ಇರಲಿ

ವಿನಾಯಕ ಚತುರ್ಥಿ ಅಥವಾ ಚೌತಿ ಸಂದರ್ಭದಲ್ಲಿ ಜೇಡಿಮಣ್ಣಿನಿಂದ ಅಥವಾ ನೈಸರ್ಗಿಕ ವಸ್ತುಗಳಿಂದ ಮಾಡಿದ ಗಣೇಶ ಮೂರ್ತಿಯನ್ನು ಆಯ್ಕೆ ಮಾಡುವುದು ಹೆಚ್ಚು ಸೂಕ್ತವಾಗಿರುವುದು. ವಿಶೇಷವಾಗಿ, ನೀರಿನಲ್ಲಿ ಸುಲಭವಾಗಿ ಕರಗುವ ಮಣ್ಣಿನ ಮೂರ್ತಿಗಳನ್ನು ಬಳಸುವುದರಿಂದ ವಿಸರ್ಜನೆಯ ಸಮಯದಲ್ಲಿ ಪರಿಸರದ ಮೇಲೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮವಾಗದಂತೆ ತಡೆಯಬಹುದು. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಎಡಭಾಗದಲ್ಲಿ ಸೊಂಡಿಲು ಇರುವ ಗಣೇಶನನ್ನು ಮನೆಯಲ್ಲಿ ಪೂಜಿಸುವುದರಿಂದ ಶಾಂತಿ ಮತ್ತು ಸ್ಥಿರತೆ ನೆಲೆಯಾಗುವುದು. ಗಣೇಶನ ಮೂರ್ತಿಯಲ್ಲಿ ಬಲಭಾಗದಲ್ಲಿ ಸೊಂಡಿಲಿನೊಂದಿಗೆ ಗಣಪತಿ ಪೂಜೆಗೆ ವಿಶೇಷ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಲಾಗ್ತದೆ. ಆದ್ದರಿಂದ, ಮೂರ್ತಿಯನ್ನು ಆಯ್ಕೆಮಾಡುವಾಗ ಕುಟುಂಬ ಆಚರಣೆಗಳನ್ನು ಅನುಸರಿಸುವುದು ಬಹಳ ಮುಖ್ಯ ಮತ್ತು ಸೂಕ್ತ ಕೂಡಾ.

ಗಣೇಶ ಕುಳಿತಿದ್ದರೆ ಶುಭವೇ? ನಿಂತಿದ್ದರೆ ಒಳ್ಳೆಯದಾ ?

ಮನೆಯಲ್ಲಿ ಕುಳಿತ ಗಣೇಶನ ಮೂರ್ತಿ ಇಡುವುದು ಹೆಚ್ಚು ಶುಭ ಎನ್ನುವುದು ವಾಸ್ತು ನಂಬಿಕೆ. ಇದನ್ನು ಶಾಂತಿ, ಬುದ್ಧಿವಂತಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಕೇತವೆಂದು ಹೇಳಲಾಗ್ತದೆ. ಕೆಲವರು ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ನಿಂತ ಗಣೇಶನ ಮೂರ್ತಿ ಇಡುತ್ತಾರೆ. ಇದು ಉತ್ಸಾಹ, ಚುರುಕುತನ ಮತ್ತು ಯಶಸ್ಸಿನ ಸಂಕೇತ ಅಂತ ಕೂಡಾ ಹೇಳಲಾಗ್ತದೆ. ಹಾಗಾಗಿ ಗಣೇಶನನ್ನು ತರುವಾಗ ಮನೆಯಲ್ಲಿ ಪ್ರತಿಷ್ಟಾಪಿಸುವುದಕ್ಕೆ ತರುತ್ತಿದ್ದಿರೋ ಅಥವಾ ಕಚೇರಿ, ಕಾರ್ಖಾನೆಗಳಿಗಾಗಿ ತರ್ತಾ ಇದ್ದೀರೋ ಸರಿಯಾಗಿ ನಿರ್ಧಾರ ಮಾಡಿ ತನ್ನಿ.

ವಿಗ್ರಹದ ಬಣ್ಣವೂ ಮುಖ್ಯ

ಬಿಳಿ ಗಣೇಶನನ್ನು ಶಾಂತಿ ಮತ್ತು ಸಾಮರಸ್ಯದ ಸಂಕೇತ ಎಂದು ಹೇಳಲಾಗ್ತದೆ. ಹಳದಿ ಅಥವಾ ಚಿನ್ನದ ಬಣ್ಣದ ಗಣೇಶನನ್ನು ಸಂಪತ್ತು ಮತ್ತು ಐಶ್ವರ್ಯದ ಸಂಕೇತ ಎಂದು ಕರೆಯಲಾಗ್ತದೆ. ಕೆಂಪು ಅಥವಾ ಕೇಸರಿ ಬಣ್ಣದ ಗಣೇಶ ಸಾಂಪ್ರದಾಯಿಕವಾಗಿ ಶುಭ ಅಂತ ಹೇಳಲಾಗ್ತದೆ. ಪೂಜಾ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ವಿಗ್ರಹದ ಸುತ್ತಮುತ್ತ ಕಸ ಇರದಂತೆ ನೋಡಿಕೊಳ್ಳಿ. ಪೂಜಾ ಸಾಮಗ್ರಿಗಳನ್ನು ಕ್ರಮಬದ್ಧವಾಗಿ ಜೋಡಿಸುವುದು ಕೂಡಾ ಮುಖ್ಯ. ಗಣೇಶನಿಗೆ ಪ್ರಿಯವಾದ ಹೂವುಗಳು, ಗರಿಕೆ ಹುಲ್ಲು, ಉಂಡೆ ಅಥವಾ ಮೋದಕಗಳನ್ನು ನೈವೇದ್ಯವಾಗಿ ಅರ್ಪಿಸುವುದು ಗಣೇಶ ಚತುರ್ಥಿಯ ಸಂಪ್ರದಾಯದ ಭಾಗವಾಗಿದೆ.

ಒಟ್ಟಾರೆಯಾಗಿ, ಚೌತಿಯ ಸಮಯದಲ್ಲಿ ವಾಸ್ತು ನಿಯಮಗಳಿಗಿಂತ ಭಕ್ತಿ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ. ವಿಗ್ರಹವನ್ನು ಸ್ಥಾಪಿಸುವ ಮೊದಲು, ಮನೆ ಅಥವಾ ಕಚೇರಿ ಸ್ಥಳವನ್ನು ಸ್ವಚ್ಛಗೊಳಿಸಿ ಮತ್ತು ಶಾಂತಿಯುತ ಸ್ಥಳವನ್ನು ಆರಿಸಿ. ಇಲ್ಲಿ ಉಲ್ಲೇಖಿಸಲಾದ ನಿರ್ದೇಶನಗಳು, ಬಣ್ಣಗಳು ಮತ್ತು ವಿಗ್ರಹದ ಗುಣಲಕ್ಷಣಗಳು ವಾಸ್ತು ಮತ್ತು ಸಾಂಪ್ರದಾಯಿಕ ನಂಬಿಕೆಗಳಿಗೆ ಸಂಬಂಧಿಸಿವೆ.ಇವುಗಳಿಗೆ ಯಾವುದೇ ರೀತಿಯ ವೈಜ್ಞಾನಿಕವಾಗಿ ಸಾಬೀತಾದ ಪುರಾವೆಗಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+