ಗೌರಿ ಹಬ್ಬಕ್ಕೆ ಬಾಗಿನದಲ್ಲಿ ಏನೇನಿರಬೇಕು?

ತವರಿನ ಸುಖ ದುಃಖದ ನೆನಪನ್ನು ಮೆಲುಕು ಹಾಕುತ್ತ ಬಳೆ, ಬಾಗಿನವನ್ನು ಉಡುಗೊರೆಯಾಗಿ ಪಡೆಯುವುದು ಮತ್ತು ನೀಡುವುದು ಈ ಗೌರಿ ಹಬ್ಬದಲ್ಲೇ. ತವರಿನಿಂದ ಬರುವ ಪ್ರೀತಿ ತುಂಬಿದ ಉಡುಗೊರೆ ಹೆಣ್ಣಿಗೆ ಬೆಂಬಲದ ಬಲವನ್ನು ನೀಡುತ್ತದೆ. ಹಬ್ಬಗಳ ಹಿಂದಿನ ಭಾವನಾತ್ಮಕ ಸಂದೇಶ ನಿಜಕ್ಕೂ ಕಿರಿಯರಿಗೆ ಹಿರಿಯರ ಕೊಡುಗೆ ಎಂದೇ ಹೇಳಬಹುದು.
ಗೌರಿ ಹಬ್ಬದಲ್ಲಿ ನೀಡುವ ಬಾಗಿನದಲ್ಲಿ ಏನೇನು ಇರಬೇಕು ಎಂದು ತಿಳಿದುಕೊಳ್ಳಿ:
* ಹೊಸದಾದ ಅಕ್ಕಿ ಕೇರುವ ಮರ
* ಅಕ್ಕಿ, ಬೆಲ್ಲ, ನವಧಾನ್ಯಗಳು ಇರಲಿ.
* ಅರಿಶಿನ-ಕುಂಕುಮ, ಬಳೆ, ಬಿಚ್ಚೋಲೆ, ನಿಮ್ಮ ಕೈಲಾದಷ್ಟು ದಕ್ಷಿಣೆ.
* ತೆಂಗಿನ ಕಾಯಿ, ಬಾಳೆ ಹಣ್ಣು, ಹೂವು
* ಸೀರೆ ಅಥವಾ ಬ್ಲೌಸ್ ಪೀಸ್
* ಪ್ಯಾಕೆಟ್ ನಲ್ಲಿ ಲಭ್ಯವಿರುವ ಸಿಂಗಾರದ ವಸ್ತುಗಳು (ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ).
ಇವೆಲ್ಲವನ್ನೂ ಹಬ್ಬದ ಹಿಂದಿನ ದಿನವೇ ತಯಾರು ಮಾಡಿಟ್ಟುಕೊಳ್ಳಿ. ಗೌರಿಯ ಮುಂದೆ ಇಟ್ಟು ಬಾಗಿನ ನೀಡಲು ಮರೆಯಬೇಡಿ.











Click it and Unblock the Notifications