ಬಗೆಬಗೆ ಗಣಪನ ಒಂದೆಡೆ ಕಾಣುವ ಸುಯೋಗ
ಬೆಂಗಳೂರು, ಆ.30: ಷಡಕ್ಷರಿ ಅವರ ಸಂಗ್ರಹದಲ್ಲಿರುವ ಅಪೂರ್ವ ಗಣೇಶ ವಿಗ್ರಹಗಳ ಪ್ರದರ್ಶನ ಏರ್ಪಡಿಸಲಾಗಿದೆ. ರಮಣಶ್ರೀ ಪ್ರತಿಷ್ಠಾನದ ವತಿಯಿಂದ ಸೆ.1ರಿಂದ 4ರವರೆಗೆ ವಿಜಯನಗರದಲ್ಲಿ ರುವ ರಮಣಶ್ರೀ ಉದಯ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿದೆ.
ಸುಮಾರು 1800 ನಾನಾ ರೂಪ, ಆಕಾರ, ವೈಶಿಷ್ಟ್ಯದ ಗಣೇಶನ ವಿಗ್ರಹ ಗಳನ್ನು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ. ಈ ಪ್ರದರ್ಶನವನ್ನು ಸಚಿವ ಅರವಿಂದ ಲಿಂಬಾವಳಿ ಸೆ.1ರಂದು ಸಂಜೆ 4.30ಕ್ಕೆ ಉದ್ಘಾಟಿಸಲಿದ್ದಾರೆ. ಸ್ವಾಮಿ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ವಿ. ಸೋಮಣ್ಣ, ಎಂ. ಕೃಷ್ಣಪ್ಪ ಹಾಗೂ ರಮಣಶ್ರೀ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಸ್. ಷಡಕ್ಷರಿ ಭಾಗವಹಿಸಲಿದ್ದಾರೆ.
ಈ ಪ್ರದರ್ಶನವು ವೀಕ್ಷಣೆಗೆ ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರಾದ ಷಡಕ್ಷರಿ ಅವರು ಹೇಳಿದರು.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications